ದಿನಭವಿಷ್ಯ: 03-04-2019

Public TV
1 Min Read

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಬುಧವಾರ, ಪೂರ್ವಭಾದ್ರ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:27 ರಿಂದ 1:59
ಗುಳಿಕಕಾಲ: ಬೆಳಗ್ಗೆ 10:55 ರಿಂದ 12:27
ಯಮಗಂಡಕಾಲ: ಬೆಳಗ್ಗೆ 7:51 ರಿಂದ 9:23

ಮೇಷ: ಅಧಿಕಾರಿಗಳಲ್ಲಿ ವೈಮನಸ್ಸು, ಅರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಇಲ್ಲ ಸಲ್ಲದ ಅಪವಾದ, ನಿಂದನೆ, ನೀಚ ಜನರ ಸಹವಾಸ, ಮಾನಸಿಕ ವ್ಯಥೆ.

ವೃಷಭ: ಸ್ತ್ರೀ ಸಂಬಂಧಿತ ವ್ಯವಹಾರಗಳಲ್ಲಿ ಎಚ್ಚರ, ಮಾನಸಿಕ ಚಿಂತೆ, ಶತ್ರುಗಳ ಬಾಧೆ, ವಿದೇಶ ಪ್ರಯಾಣ, ವಿದ್ಯೆಯಲ್ಲಿ ಅಭಿವೃದ್ಧಿ.

ಮಿಥುನ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಅಕಾಲ ಭೋಜನ, ಅಧಿಕವಾದ ಖರ್ಚು, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ.

ಕಟಕ: ರಾಜಕೀಯ ಕ್ಷೇತ್ರದವರಿಗೆ ತಳಮಳ, ಮಾನಸಿಕ ಚಿಂತೆ, ಅತಿಯಾದ ಕೋಪ, ಪಾಪ ಬುದ್ಧಿ, ಕಾರ್ಯದಲ್ಲಿ ವಿಳಂಬ.

ಸಿಂಹ: ಹಿರಿಯರಿಂದ ಹಿತನುಡಿ, ಮಿತ್ರರಿಂದ ಸಹಾಯ, ಕೃಷಿಯಲ್ಲಿ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಧನ ಹಾನಿ, ಕೆಲಸಗಳಲ್ಲಿ ಅಪಜಯ.

ಕನ್ಯಾ: ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ವಸ್ತ್ರಾಭರಣ ಪ್ರಾಪ್ತಿ, ಸಾಧಾರಣ ಪ್ರಗತಿ, ನಂಬಿಕಸ್ಥರಿಂದ ದ್ರೋಹ, ಮಾನಸಿಕ ವ್ಯಥೆ, ಶತ್ರುಗಳ ಬಾಧೆ.

ತುಲಾ: ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಮಾನಸಿಕ ನೆಮ್ಮದಿ, ದೇವತಾ ಕಾರ್ಯಗಳಲ್ಲಿ ಭಾಗಿ.

ವೃಶ್ಚಿಕ: ನೆಮ್ಮದಿ ಇಲ್ಲದ ಜೀವನ, ಸ್ತ್ರೀಯರಿಗೆ ಲಾಭ, ವ್ಯಾಸಂಗದಲ್ಲಿ ಪ್ರಗತಿ, ಸಾಲ ಬಾಧೆ, ವೃಥಾ ಅಲೆದಾಟ.

ಧನಸ್ಸು: ಆಕಸ್ಮಿಕ ಧನ ಲಾಭ, ಮಿತ್ರರಿಂದ ತೊಂದರೆ, ಮಾನಸಿಕ ವ್ಯಥೆ, ವಾದ-ವಿವಾದಗಳಿಂದ ವೈಮನಸ್ಸು, ಮನೆಯಲ್ಲಿ ಕಲಹ.

ಮಕರ: ಹಿತ ಶತ್ರುಗಳಿಂದ ಸಲಹೆ, ಉದ್ಯೋಗದಲ್ಲಿ ಅಲ್ಪ ಲಾಭ, ಇಲ್ಲ ಸಲ್ಲದ ಅಪವಾದ-ನಿಂದನೆ, ಯತ್ನ ಕಾರ್ಯದಲ್ಲಿ ತೊಂದರೆ.

ಕುಂಭ: ಅಲ್ಪ ಕಾರ್ಯ ಸಿದ್ಧಿ, ಕೈಗೊಂಡ ಕಾರ್ಯಗಳಲ್ಲಿ ವಿಘ್ನ, ವಿವಾಹ ಯೋಗ, ನಾನಾ ವಿಚಾರಗಳಲ್ಲಿ ಆಸಕ್ತಿ.

ಮೀನ: ಅನಗತ್ಯ ದ್ವೇಷ ಸಾಧನೆ, ಹಣಕಾಸು ತೊಂದರೆ, ಅಧಿಕವಾದ ಖರ್ಚು, ವಿದೇಶ ಪ್ರಯಾಣ, ಕೀರ್ತಿ ಲಾಭ.

Share This Article
Leave a Comment

Leave a Reply

Your email address will not be published. Required fields are marked *