ಸಿಲಿಕಾನ್ ಸಿಟಿಯಲ್ಲಿ ಮೋದಿ ಸೀರೆ ಟ್ರೆಂಡ್ – ಫ್ಯಾಷನ್ ದುನಿಯಾದಲ್ಲಿ ಎಲೆಕ್ಷನ್ ಹವಾ

Public TV
1 Min Read

ಬೆಂಗಳೂರು: ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಎಲೆಕ್ಷನ್ ಹವಾ ಫ್ಯಾಷನ್ ಜಗತ್ತಿಗೂ ತಟ್ಟಿದ್ದು,ನಮ್ಮ ಪೋಲಿಟಿಷನ್ಸ್ ಗಳು ಪುಲ್ ಫ್ಯಾಷನೇಬಲ್ ಆಗಿ ಮಿಂಚತ್ತಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿಗ ಮೋದಿ ಮೇನಿಯಾ ಸ್ಟ್ರಾಟ್ ಆಗಿದೆ.

ಪ್ರಧಾನಿ ಮೋದಿ ಭಾವಚಿತ್ರಗಳನ್ನು ಒಳಗೊಂಡಿರುವ ಸೀರೆ ತೊಟ್ಟು ಬ್ಯೂಟಿಸ್ ಮಿಂಚುತ್ತಿದ್ದಾರೆ. ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ, ಗುಜರಾತಿನಲ್ಲಿ ಸದ್ದು ಮಾಡಿದ ಮೋದಿ ಸೀರೆಗಳು ಮಾಯಾನಗರಿ ಬೆಂಗಳೂರಿನ ಮಾರ್ಕೆಟ್ ಗಳಿಗೆ ಈಗ ಕಾಲಿಟ್ಟಿದ್ದು, ಸಖತ್ ಡಿಮ್ಯಾಂಡ್ ಆಂಡ್ ಟ್ರೆಂಡ್ ಕ್ರಿಯೆಟ್ ಮಾಡಿವೆ.

ಮೋದಿ ಜನಪ್ರೀಯತೆ ಹಾಗೂ ಮೋದಿ ಬಗ್ಗೆ ಮಹಿಳೆಯರಿಗಿರುವ ಕ್ರೇಜ್ ಅನ್ನೇ ಬಂಡವಾಳವಾಗಿಸಿ, ವ್ಯಾಪಾರಿಗಳು ಮೋದಿ ಸೀರೆಯನ್ನು ರೆಡಿ ಮಾಡಿದ್ದಾರೆ. ಇಷ್ಟುದಿನ ಮೋದಿ ರಾಖಿ, ಮಗ್, ಟೀ ಶರ್ಟ್, ವೆಡ್ಡಿಂಗ್ ಕಾರ್ಡ್ ವೈರಲ್ ಆಗಿತ್ತು. ಈಗ ಇದಕ್ಕೆ ಈ ಸೀರೆಗಳು ಹೊಸ ಸೇರ್ಪಡೆಯಾಗಿವೆ. ಇವುಗಳನ್ನು ತೊಟ್ಟು ನೀರೆಯರಂತೂ ನಾವೆಲ್ಲ ಚೌಕಿದಾರರು, ಮೋದಿ ಫ್ಯಾನ್ಸ್ ಅಂತಾ ಘೋಷಣೆ ಕೂಗತ್ತಿದ್ದಾರೆ. ಇನ್ನೂ ಸ್ಯಾಟಿನ್, ಷಿಫಾನ್ ಬಟ್ಟೆಗಳ ಮೇಲೆ, ಮೋದಿ ಡಿಜಿಟಲ್ ಪ್ರೀಂಟ್ ಮೂಡಿಸಿ, ಈ ಸೀರೆಗಳನ್ನು ತಯಾರಿಸಲಾಗಿದೆ. ಒಟ್ಟಿನಲ್ಲಿ ಈ ಬ್ಯೂಟಿಸ್ ಈ ಸೀರೆಗಳನ್ನು ಉಡುವ ಮೂಲಕ, ಮೋದಿ ಬಗ್ಗೆ ಕ್ಯಾನ್ವಾಸ್ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *