ಚಿಕ್ಕೋಡಿಯಲ್ಲಿ ಬಂಡಾಯವೆದ್ದ ಉಮೇಶ್ ಕತ್ತಿ – ನಾಲ್ವರು ಶಾಸಕರು ಬಿಜೆಪಿಗೆ ಗುಡ್ ಬೈ?

Public TV
1 Min Read

ಬೆಳಗಾವಿ: ಯುಗಾದಿಗೆ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಲಿದೆ. ಸಹೋದರ ರಮೇಶ್ ಕತ್ತಿಗೆ ಟಿಕೆಟ್ ತಪ್ಪಿದ್ದಕ್ಕೆ ಹೊಸ ತಂತ್ರವೊಂದನ್ನು ರೂಪಿಸಿ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಲಿದ್ದೇನೆ ಎಂದಿರುವ ಶಾಸಕ ಉಮೇಶ್ ಕತ್ತಿ ಗುಟ್ಟು ಬಿಟ್ಟುಕೊಡದೆ ಯಾವುದಕ್ಕೂ ಕಾದು ನೋಡಿ ಎಂದು ಹೇಳಿದ್ದಾರೆ.

ಬೆಳಗಾವಿಯ ನಾಲ್ಕಕ್ಕೂ ಹೆಚ್ಚು ಶಾಸಕರು ಬಿಜೆಪಿಗೆ ಗುಡ್ ಬೈ ಹೇಳಲಿದ್ದಾರೆ ಅನ್ನೋ ಮಾಹಿತಿಯೊಂದು ಲಭಿಸಿದೆ. ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ದೊಡ್ಡದಾದ ಜಿಲ್ಲೆಯಲ್ಲಿ 18 ಶಾಸಕರಿದ್ದಾರೆ. ಅದರಲ್ಲಿ ಕುಟುಂಬ ರಾಜಕಾರಣಕ್ಕೆ ಹೆಸರಾದ ಕತ್ತಿ ಸಹೋದರರು ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಚಿಕ್ಕೋಡಿ ಲೋಕಸಭೆಯಿಂದ ಸಹೋದರ ರಮೇಶ್ ಕತ್ತಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದಕ್ಕೆ ಶಾಸಕ ಉಮೇಶ್ ಕತ್ತಿ ಗರಂ ಆಗಿದ್ದಾರೆ.

ತೆರೆಮರೆಯಲ್ಲಿ ತಂತ್ರ ಹೆಣೆದ ಉಮೇಶ್ ಕತ್ತಿ ಬಂಡಾಯದ ಬಾವುಟ ಹಾರಿಸುವುದಂತೂ ಖಚಿತವಾಗಿದೆ ಎಂದು ಮೂಲಗಳು ದೃಢಪಡಿಸಿವೆ. ಈ ಚುನಾವಣೆಯಲ್ಲಿ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ರಮೇಶ್ ಕತ್ತಿಯನ್ನು ಕಣಕ್ಕಿಳಿಸಲು ಸರ್ವ ಸಿದ್ಧತೆ ನಡೆಸಿದ್ದಾರೆ. ಅದಲ್ಲದೆ ಇನ್ನುಳಿದ ಮೂರು ಬಿಜೆಪಿ ಶಾಸಕರ ಜೊತೆಗೆ ತಾವೂ ಬಿಜೆಪಿ ಪಕ್ಷ ತೊರೆದು ಶಾಕ್ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ತಾವೇ ಸಾಕಿದ ಗಿಣಿಗಳು ತಮ್ಮನ್ನೇ ಕುಕ್ಕುತ್ತಿವೆ, ಕಚ್ಚುತ್ತಿವೆ. ಮುಂದಿನ ದಿನಮಾನಗಳಲ್ಲಿ ರಾಜಕಾರಣ ಮತ್ತಷ್ಟು ಹದಗೆಡಲಿದೆ. ಅದಕ್ಕೆ ಬೆಂಬಲಿಗಳು ಹಿತೈಷಿಗಳು ಕಾರ್ಯಕರ್ತರು ಸಂಯಮದಿಂದ ವರ್ತಿಸಬೇಕು, ಜೊತೆಗೆ ಶಾಂತತೆಯಿಂದ ನಡೆದುಕೊಳ್ಳಬೇಕು. ಯುಗಾದಿಗೆ ಮುನ್ನ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ. ಚಿಕ್ಕೋಡಿ ಬಿಜೆಪಿ ಟಿಕೆಟ್‍ಗಾಗಿ ಬಿಎಸ್‍ವೈ ಪುನರ್ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲಿಯವರೆಗೆ ಕಾದು ನೋಡೋಣ. ನಮ್ಮ ಮುಂದಿನ ತೀರ್ಮಾನ ತಿಳಿಸುತ್ತೇವೆ ಎಂದು ಕತ್ತಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಎಲ್ಲವೂ ಉಮೇಶ್ ಕತ್ತಿ ಅಂದುಕೊಂಡಂತೆ ಆದರೆ ಸಹೋದರ ರಮೇಶ್ ಕತ್ತಿ ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಚಿಕ್ಕೋಡಿಯಿಂದ ಟಿಕೆಟ್ ಫೋಷಣೆಯಾದ ಪ್ರಕಾಶ್ ಹುಕ್ಕೇರಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಹಾರಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *