ಪುಣ್ಯಾತ್ ಗಿತ್ತೀರ ಹಾಡು ಪಾಡು!

Public TV
2 Min Read

ಬೆಂಗಳೂರು: ಸರಿಸುಮಾರು ಎರಡು ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಪಾಸಿಬಲ್ ಸಿನಿಮಾವನ್ನು ನಿರ್ದೇಶಿಸಿದ್ದವರು ರಾಜ್ ಬಿ.ಎನ್. ಮತ್ತೆ ಅವರದ್ದೇ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ `ಪುಣ್ಯಾತ್‍ಗಿತ್ತೀರು’. ಬೇರೆ ಬೇರೆ ಬಗೆಯ ವ್ಯಕ್ತಿತ್ವದ ನಾಲ್ವರು ಹುಡುಗಿಯರ ಬದುಕಿನ ಶೈಲಿಯನ್ನೇ ಕಥೆಯನ್ನಾಗಿಸಿರುವ ಈ ಚಿತ್ರದಲ್ಲಿ ಮಮತಾ ರಾವುತ್, ದಿವ್ಯಶ್ರೀ, ಸಂಭ್ರಮ ಹಾಗೂ ಐಶ್ವರ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸಂಪೂರ್ಣಗೊಳಿಸಿಕೊಂಡಿರುವ ಚಿತ್ರತಂಡ ಈಗ ಸಿನಿಮಾವನ್ನು ಬಿಡುಗಡೆಯ ಹಂತಕ್ಕೆ ತಂದಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ನೆರವೇರಿತು. ಪುಣ್ಯಾತ್‍ಗಿತ್ತೀರು ಚಿತ್ರದಲ್ಲಿ ರಾಮಾನುಜಂ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳಿವೆ.

ಸಾಮಾನ್ಯವಾಗಿ ಘಟುವಾಣಿ ಥರದ, ಧೈರ್ಯವಂತ ಹೆಂಗಸರನ್ನು ಪುಣ್ಯಾತ್ ಗಿತ್ತೀರು ಎಂದು ಕರೆಯುತ್ತಾರೆ. ಈ ಚಿತ್ರದಲ್ಲಿ ಕೂಡ ಅಂಥಾ ಡೇರ್ ಕ್ಯಾರೆಕ್ಟರ್ ಇರುವ ನಾಲ್ವರು ಹುಡುಗಿಯರ ಕಥೆ ಇರುವುದರಿಂದ ಚಿತ್ರಕ್ಕೆ ಈ ಹೆಸರಿಟ್ಟಿರುವುದಾಗಿ ನಿರ್ದೇಶಕ ರಾಜ್ ತಿಳಿಸಿದ್ದಾರೆ.

ಈ ಚಿತ್ರದ ನಾಲ್ವರು ಹುಡುಗಿಯರು ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿರೆ. ಪಿಜಿಯಲ್ಲಿ ಉಳಿದುಕೊಂಡಿದ್ದ ನಾಲ್ವರು ಅನಾಥ ಹುಡುಗಿಯರು ಸದಾ ಜನರಿಗೆ ವಂಚನೆ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾರೆ. ಒಂದು ಘಟನೆ ನಡೆದಾಗ, ಅವರ ಗುಣದಲ್ಲಿ ಬದಲಾವಣೆಯಾಗಿ ಸಮಾಜಕ್ಕೆ ಒಳ್ಳೇ ಕೆಲಸ ಮಾಡುವಲ್ಲಿ ಸಫಲರಾಗುತ್ತಾರೆ. ಮೊದಲ ಭಾಗದಲ್ಲಿ ವೀಕ್ಷಕರಿಂದ ಬೈಸಿಕೊಳ್ಳುವ ಪಾತ್ರಗಳಿದ್ದು, ವಿರಾಮದ ನಂತರ ಎಲ್ಲರಿಗೂ ಅಚ್ಚುಮೆಚ್ಚಿನ ಮಹಿಳೆಯರಾಗುತ್ತಾರೆ.

ಬೆಂಗಳೂರು, ಬಳ್ಳಾರಿ, ಕನಕಪುರ ಮುಂತಾದ ಕಡೆಗಳಲ್ಲಿ ಮೂವತ್ತು ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಿರ್ದೇಶಕ ರಾಜ್. ಬಿ.ಎನ್. ಅವರೇ ಚಿತ್ರದ ಕತೆ ಬರೆದು ನಿರ್ದೇಶನ ಮಾಡಿರೆ. ಮಮತಾ ರಾವುತ್ ಈ ಚಿತ್ರದಲ್ಲಿ ಆರ್ಟಿಸ್ಟ್ ಆರತಿ ಆಗಿ ಬಣ್ಣಹಚ್ಚಿದ್ದರೆ. ಹಿರಿಯ ನಟಿಯರ ಅಭಿನಯವನ್ನು ತೋರಿಸುವ ಪ್ರಯತ್ನ ಮಾಡಿದ್ದರೆ. ಅವಕಾಶಗಳು ಸಿಗದೆ ಗ ಬೇರೆ ಥರದ ಕೆಲಸ ಮಾಡಲು ನಿರ್ಧರಿಸಿದಾಗ ಇವರ ಪರಿಚಯವಾಗುತ್ತದೆ. ಮೀಟ್ರು ಮಂಜುಳ ಹೆಸರಿನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಶ್ರೀ ಅಭಿನಯಿಸಿದ್ದಾರೆ. ಬಾಯ್ಬಡ್ಕಿಯಾಗಿ ಹೆಸರು ಮಾಡಿರುವ ಐಶ್ವರ್ಯ ಮತ್ತು ಸದಾ ಸುಳ್ಳನ್ನು ಹೇಳುವ ಸಂಭ್ರಮ ಕೂಡ ಚಿತ್ರದಲ್ಲಿದ್ದು, ಈಕೆಯ ಸುಳ್ಳು ಕತೆಗೆ ತಿರುವು ಕೊಡುತ್ತದೆ, ಹಾಗೂ ಕೆಲವೊಮ್ಮೆ ಒಳ್ಳೆಯದೇ ಆಗುತ್ತದಂತೆ.

ಚಿತ್ರದ ಉಳಿದ ತಾರಾಬಳಗದಲ್ಲಿ ಶೋಭರಾಜ, ಜಡೆನಾಗನ ಪಾತ್ರದಲ್ಲಿ ಟಗರು ಕಾಕ್ರೋಚ್ ಕುರಿರಂಗ, ಕಾಮಿಡಿ ಕಿಲಾಡಿಗಳು ಗೋವಿಂದೇಗೌಡ ಅಭಿನಯಿಸಿದ್ದರೆ. ಚಿತ್ರದ ನಿರ್ಮಾಪಕ ಸತ್ಯನಾರಾಯಣ ಮನ್ನೆ ಮಾತನಾಡಿ ಒಂದು ಒಳ್ಳೆಯ ಚಿತ್ರವನ್ನು ನಿರ್ಮಾಣ ಮಾಡಿದ ತೃಪ್ತಿ ನನಗೆ ಇದೆ. ನಮ್ಮ ಚಿತ್ರ ಎಲ್ಲಾ ವರ್ಗದ ಜನರಿಗೂ, ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *