ಮೋದಿ ಸ್ವಾತಂತ್ರ್ಯ ತಂದುಕೊಟ್ಟಿದ್ದನ್ನೇ ಟ್ರೈಲರ್‌ನಲ್ಲಿ ಬಿಟ್ಟಿದ್ದಾರೆ: ನಟ ಸಿದ್ಧಾರ್ಥ ಟಾಂಗ್

Public TV
1 Min Read

ಬೆಂಗಳೂರು: ಎಲ್ಲವನ್ನೂ ತಾವೇ ಮಾಡಿದ್ದಾಗಿ ಹೇಳಿಕೊಳ್ಳುವ ಪ್ರಧಾನಿ ಮೋದಿ ಅವರೇ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆಂದು ‘ಪಿಎಂ ನರೇಂದ್ರ ಮೋದಿ’ ಸಿನಿಮಾದಲ್ಲಿ ತೋರಿಸಬೇಕಿತ್ತು ಎಂದು ತಮಿಳು ಭಾಷಾ ನಟ ಸಿದ್ಧಾರ್ಥ ವ್ಯಂಗ್ಯವಾಡಿದ್ದಾರೆ.

‘ರಂಗ್ ದೇ ಬಸಂತಿ’ ದೇಶಭಕ್ತಿ ಚಿತ್ರದಲ್ಲಿ ನಟಿಸಿದ್ದ ಸಿದ್ಧಾರ್ಥ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ‘ಪಿಎಂ ನರೇಂದ್ರ ಮೋದಿ’ ಸಿನಿಮಾದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

https://twitter.com/Actor_Siddharth/status/1108529874669654016

ಟ್ವೀಟ್‍ನಲ್ಲಿ ಏನಿದೆ?:
ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಪ್ರಧಾನಿ ಮೋದಿ ಅವರು ಏಕಾಂಗಿಯಾಗಿ ಹೇಗೆ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೆಂದು ತೋರಿಸುವುದನ್ನು ಚಿತ್ರ ತಂಡ ಮರೆತಿದೆ. ಒಂದು ವೇಳೆ ಅದನ್ನು ತೋರಿಸಿದ್ದರೆ ಜಾತ್ಯಾತೀತತೆ, ಕಮ್ಯೂನಿಸ್ಟ್, ನಕ್ಸಲರ ಮತ್ತು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಕಾಲೆಳೆಯಬಹುದಿತ್ತು ಎಂದು ಸಿದ್ಧಾರ್ಥ ವ್ಯಂಗ್ಯವಾಡಿದ್ದಾರೆ.

https://twitter.com/Actor_Siddharth/status/1108534625423351808

‘ಪಿಎಂ ನರೇಂದ್ರ ಮೋದಿ’ ಸಿನಿಮಾಗಳಂತಹ ಬಯೋಪಿಕ್ ಮಾಡುವ ನಮ್ಮ ನಿರ್ಮಾಪಕರ ಪ್ರಾಮಾಣಿಕತೆ ನೋಡಿ. ಈ ಸಿನಿಮಾದ ಮೂಲಕ ನೀವು ಜನರ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸಬಹುದು. ಆದರೆ ನಿಮ್ಮ ಇತಿಹಾಸವನ್ನು ಮರೆಸಲು ಸಾಧ್ಯವಿಲ್ಲ ಎಂದು ಸಿದ್ಧಾರ್ಥ ಅಸಮಾಧಾನ ಹೊರಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜೀವನಾಧರಿತ ಸಿನಿಮಾದ ಟ್ರೈಲರ್ ಬುಧವಾರ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ನಟ ವಿವೇಕ್ ಒಬೇರಾಯ್ ಅವರು ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರೀ ನಿರೀಕ್ಷೆಯಲ್ಲಿರುವ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಏಪ್ರಿಲ್ 12ಕ್ಕೆ ಬಿಡುಗಡೆಯಾಗಲಿದೆ.

https://twitter.com/Actor_Siddharth/status/1108537225736654850

Share This Article
Leave a Comment

Leave a Reply

Your email address will not be published. Required fields are marked *