ಐಪಿಎಲ್ 2019: ವಿಶ್ವಕಪ್ ಆಟಗಾರರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದ ಕೊಹ್ಲಿ

Public TV
1 Min Read

ಬೆಂಗಳೂರು: ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಆಡುವುದು ಅವರಿಗೆ ಬಿಟ್ಟ ವಿಚಾರ. ಆದರೆ ವಿಶ್ವಕಪ್‍ನಲ್ಲಿ ಆಡುವುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಆದ್ದರಿಂದ ಅಂತಹ ಅವಕಾಶವನ್ನು ಯಾರು ತಪ್ಪಿಸಿಕೊಳ್ಳುವುದಿಲ್ಲ. ಪರಿಣಾಮ ನಾವು ಯಾವುದೇ ಆಟಗಾರರಿಗೆ ನಿರ್ಬಂಧ ಹೇರಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರ್ ಸಿಬಿ ಆ್ಯಪ್ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಕೊಹ್ಲಿ ಭಾಗವಹಿಸಿ ಮಾತನಾಡಿದರು. ಆಟಗಾರರಿಗೆ ಇಷ್ಟೇ ಪಂದ್ಯಗಳನ್ನು ಆಡಬೇಕು ಎಂದು ಹೇಳಲು ಸಾಧ್ಯವಿಲ್ಲ. ನಾನು 10 ರಿಂದ 15 ಪಂದ್ಯಗಳನ್ನು ಆಡುವ ಸಾಮಥ್ರ್ಯವನ್ನು ಹೊಂದಿದ್ದರೆ, ಅಷ್ಟು ಮಾತ್ರವೇ ಆಡಲು ಸಾಧ್ಯ. ನನಗಿಂತ ಹೆಚ್ಚಿನ ಸಾಮಥ್ರ್ಯ ಹೊಂದಿರುವ ಆಟಗಾರರು ಇದ್ದಾರೆ. ಇದು ವೈಯಕ್ತಿಕ ವಿಚಾರ ಎಂದರು. ಅಲ್ಲದೇ ಐಪಿಎಲ್‍ನಲ್ಲಿ ಎಲ್ಲಾ ತಂಡಗಳು ಬಲಿಷ್ಠವಾಗಿವೆ, ಇದರ ನಡುವೆಯೇ ನಮ್ಮಿಂದ ಸಾಧ್ಯವಾಗುವ ಶ್ರೇಷ್ಠ ಪ್ರದರ್ಶನವನ್ನ ನೀಡುತ್ತೇವೆ ಎಂದು ಹೇಳಿದ್ರು.

ಆರ್ ಸಿಬಿ ಆ್ಯಪ್: 12ನೇ ಆವೃತ್ತಿ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾರ್ಚ್ 23 ರಿಂದ ಚುಟುಕು ಕ್ರಿಕೆಟ್ ಸರಣಿ ಆರಂಭವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿಯಡೆಗೆ ತಯಾರಿ ಆರಂಭಿಸಿದೆ. ಆರಂಭಿಕ ಆವೃತ್ತಿಯಿಂದ ಈವರೆಗೂ ಆರ್‍ಸಿಬಿ ಸೋತರೂ ಗೆದ್ದರೂ ಅಭಿಮಾನಿಗಳಿಗೆ ಕೊರತೆ ಇಲ್ಲ ಎಂಬುವುದನ್ನು ಎಲ್ಲಿರಿಗೂ ತಿಳಿದಿದೆ.

ಇತ್ತ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಲು ಆರ್‍ಸಿಬಿ ವಿಶೇಷ ಆ್ಯಪ್‍ವೊಂದನ್ನ ಸಿದ್ಧಪಡಿಸಿದೆ. ನಗರದಲ್ಲಿ ಇಂದು ಆರ್ ಸಿಬಿ ಆ ವಿಶಿಷ್ಟ ಮೊಬೈಲ್ ಆಪ್ ಅನ್ನ ಬಿಡುಗಡೆಗೊಳಿತು. ಕಾರ್ಯಕ್ರಮದಲ್ಲಿ ಕೋಚ್ ಗ್ಯಾರಿ ಕಸ್ಟರ್ನ್, ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಪಾಲ್ಗೊಂಡಿದ್ರು.

Share This Article
Leave a Comment

Leave a Reply

Your email address will not be published. Required fields are marked *