ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ನನಗೆ ಇಷ್ಟವಾಗಲ್ಲ: ಪವನ್ ಕಲ್ಯಾಣ್

Public TV
1 Min Read

ಹೈದರಾಬಾದ್: ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ಹೇಳುತ್ತಾರೆ. ಆದ್ರೆ ರಾಜಕೀಯ ಪಕ್ಷಗಳ ಸಭೆಗಳಲ್ಲಿ ಯಾಕೆ ರಾಷ್ಟ್ರಗೀತೆ ಹಾಕಿ ಗೌರವಿಸಲ್ಲ ಎಂದು ಜನ ಸೇನಾ ಮುಖ್ಯಸ್ಥ ಹಾಗೂ ಟಾಲಿವುಡ್ ನಟ ಪವನ್ ಕಲ್ಯಾಣ್ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದಾರೆ.

ಕೆಲ ದಿನಗಳ ಹಿಂದೆ, “2019ರ ಲೋಕಸಭೆ ಚುನಾವಣೆ ಬರುವ ಮುನ್ನ ಯುದ್ಧ ನಡೆಯುತ್ತದೆ ಎಂದು ಬಿಜೆಪಿ ಎರಡು ವರ್ಷದ ಹಿಂದೆಯೇ ನನಗೆ ಹೇಳಿತ್ತು” ಎಂದು ಹೇಳಿಕೆ ನೀಡಿ ಪವನ್ ಕಲ್ಯಾಣ್ ಸುದ್ದಿಯಲ್ಲಿದ್ದರು. ಈಗ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಕುವ ಬಗ್ಗೆ ಹೇಳಿಕೆ ನೀಡಿ ಮತ್ತೆ ಎಲ್ಲೆಡೆ ಸುದ್ದಿಯಾಗಿದ್ದಾರೆ. ಇದನ್ನೂ ಓದಿ:ಲೋಕಸಭಾ ಚುನಾವಣೆಗೂ ಮೊದಲೇ ಯುದ್ಧ – ಬಿಜೆಪಿ ನನಗೆ ಹೇಳಿಲ್ಲ ಎಂದ ಪವನ್ ಕಲ್ಯಾಣ್

ಆಂಧ್ರ ಪ್ರದೇಶದ ಕರ್ನೂಲ್‍ನಲ್ಲಿ ಶನಿವಾರ ನಡೆದ ಯುವ-ಸಂವಾದಾತ್ಮಕ ಅಧಿವೇಶನ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಭಾಗಿಯಾಗಿದ್ದರು. ಈ ವೇಳೆ ಭಾಷಣ ಮಾಡುತ್ತ, ನನಗೆ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ಇಷ್ಟವಾಗಲ್ಲ. ಚಿತ್ರಮಂದಿರದಲ್ಲಿ ತಮ್ಮ ಕುಟುಂಬ ಅಥವಾ ಸ್ನೇಹಿತರ ಜೊತೆ ಕಳೆಯುವ ವಿರಾಮದ ಸಮಯವನ್ನು ಈಗ ಒಬ್ಬರ ದೇಶಭಕ್ತಿಯನ್ನು ಅಳಿಯಲು ಬಳಸಲಾಗುತ್ತದೆ ಎಂದು ಆರೋಪಿಸಿದ್ದಾರೆ.

ರಾಜಕೀಯ ಪಕ್ಷಗಳು ತಮ್ಮ ಸಭೆ ಸಮಾರಂಭಗಳು ಆರಂಭವಾಗುವ ಮುನ್ನವೇಕೆ ರಾಷ್ಟ್ರಗೀತೆಯನ್ನು ಹಾಕುವುದಿಲ್ಲ? ಚಿತ್ರಮಂದಿರಗಳಲ್ಲಿ ಮಾತ್ರ ಯಾಕೆ ಹಾಕಬೇಕು? ದೇಶದಲ್ಲಿರುವ ಎಲ್ಲಾ ಕಚೇರಿಗಳಲ್ಲೂ ರಾಷ್ಟ್ರಗೀತೆ ಮೊಳಗಬೇಕು. ಯಾರು ಕಾನೂನನ್ನು ಮಾಡುತ್ತಾರೋ ಅವರು ಕೂಡ ಅದನ್ನು ಪಾಲಿಸಬೇಕು ಎಂದು ಹೇಳಿದರು.

ಈ ಹಿಂದೆ 2016ರಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಕ್ಕೆ ಜನ ಸೇನಾ ಮುಖ್ಯಸ್ಥರ ಮೇಲೆ ಹೈದರಾಬಾದ್‍ನ ವಕೀಲರೊಬ್ಬರು ದೂರು ದಾಖಲಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *