ಫಸ್ಟ್ ನೈಟ್‍ನಲ್ಲೇ ಪತ್ನಿ ನಡತೆ ಬಗ್ಗೆ ಅನುಮಾನ – ಬೆಡ್ ರೂಮ್ ವಿಡಿಯೋ ಇಟ್ಟುಕೊಂಡು ಬ್ಲಾಕ್‍ಮೇಲ್

Public TV
2 Min Read

ಬೆಂಗಳೂರು: ಪತಿಯೊಬ್ಬ ತನ್ನ ಫಸ್ಟ್ ನೈಟ್‍ನಲ್ಲೇ ಪತ್ನಿಯ ಬಗ್ಗೆ ಅನುಮಾನ ಪಟ್ಟಿದಲ್ಲದೇ ಬೆಡ್ ರೂಮ್ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ ಪ್ರಕರಣವೊಂದು ಬೆಂಗಳೂರಿನ ಬಸವನಗುಡಿಯಲ್ಲಿ ನಡೆದಿದೆ.

ವಿವೇಕ್ ರಾಜಗೋಪಾಲ್ ಬ್ಲಾಕ್‍ಮೇಲ್ ಮಾಡುತ್ತಿದ್ದ ಪತಿ. ದಂಪತಿ ಕಳೆದ 6 ತಿಂಗಳ ಹಿಂದೆ ಮದುವೆ ಆಗಿದ್ದರು. ವಿವೇಕ್ ತನ್ನ ಮೊದಲ ರಾತ್ರಿಯಲ್ಲೇ ತನ್ನ ಪತ್ನಿಯ ನಡತೆ ಬಗ್ಗೆ ಅನುಮಾನಪಟ್ಟಿದ್ದನು. ಅಲ್ಲದೇ ತಂದೆ-ತಾಯಿ ಕಾಟಕ್ಕೆ ಮದುವೆ ಆಗಿದ್ದೇನೆ ನನ್ನ ಬಿಟ್ಟು ಹೋಗು ಎಂದು ಪತ್ನಿಗೆ ಹೇಳಿದ್ದಾನೆ.

ವಿವೇಕ್ ತನ್ನ ಕೆಲಸಕ್ಕೆ ಕಳುಹಿಸಿ ಹಣ ಪೀಕುತ್ತಿದ್ದಾನೆ. ನನ್ನ ಜೊತೆ ಅಶ್ಲೀಲವಾಗಿ ಮಾತನಾಡಿ ಆಡಿಯೋ ಇಟ್ಟುಕೊಂಡಿದಲ್ಲದೇ ಬೆಡ್ ರೂಮ್ ವಿಡಿಯೋ ಕೂಡ ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡುತ್ತಿದ್ದಾನೆ. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ, ವಿಡಿಯೋ ಹಾಕುತ್ತೇನೆ ಎಂದು ಬೆದರಿಸುತ್ತಿದ್ದಾನೆ ಪತ್ನಿ ಆರೋಪಿಸಿದ್ದಾರೆ.

ಪತಿ ವಿಪರೀತ ಹಣದ ವ್ಯಾಮೋಹಕ್ಕೆ ಬೇಸತ್ತು ಪತ್ನಿ ತವರು ಮನೆಗೆ ಹೋಗಿ ಬಳಿಕ ಈ ಬಗ್ಗೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?
2018ರ ಅಗಸ್ಟ್ 29ರಂದು ಗುರು ಹಿರಿಯರ ಸಮ್ಮತಿಯಂತೆ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಗೆ ಮುಂಚಿತವಾಗಿ ನಿಶ್ಚಿತಾರ್ಥವಾಗಿದ್ದು, ಆಗ ಅವರ ಒತ್ತಾಯಕ್ಕೆ ಸುಮಾರು 5 ಲಕ್ಷ ರೂ. ಖರ್ಚು ಮಾಡಲಾಗಿದೆ. ನಂತರ ಮದುವೆಯ ಸಮಯದಲ್ಲೂ ವರದಕ್ಷಿಣೆಯಾಗಿ ವರನಿಗೆ 25 ಗ್ರಾಂ ಚಿನ್ನದ ಚೈನ್ ರೇಷ್ಮೆ ವಸ್ತ್ರಗಳು, ಸೂಟು, ಕೈಗಡಿಯಾರ ಹಾಗೂ 3ಕೆಜಿ ಬೆಳ್ಳಿ ಸಾಮಾನುಗಳನ್ನು ನೀಡಿ ಚಾಮರಾಜ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು.

ಮದುವೆ ನಂತರ ಮೊದಲ ರಾತ್ರಿಯಲ್ಲೇ ನನ್ನ ಪತಿ ನನ್ನ ಮೇಲೆ ಅನುಮಾನಪಟ್ಟು ನನ್ನ ಮೊಬೈಲ್ ಫೋನ್ ಮೆಸೇಜ್ ಹಾಗೂ ಕರೆಯನ್ನು ಪರಿಶೀಲಿಸಿ ಕೆಟ್ಟದಾಗಿ ನಿಂದಿಸಿದ್ದಾರೆ. ನಂತರ ಪ್ರತಿ ದಿನವೂ ನನ್ನ ಮೇಲೆ ಸಂಶಯಪಡಲು ಆರಂಭಿಸಿದ್ದಾರೆ. ಅಲ್ಲದೇ ನನಗೆ ಬೈದು ಹೊಡೆದು ಹಿಂಸೆ ನೀಡುತ್ತಿದ್ದಾರೆ. ನನ್ನ ತಂದೆ-ತಾಯಿ ಆಸೆಯಂತೆ ಮದುವೆ ಆಗಬೇಕಾಯಿತು. ಈಗ ನೀನಾಗಿಯೇ ನನ್ನನ್ನು ಬಿಟ್ಟು ಹೋಗು ಎಂದು ಅನುಮಾನ ಮಾಡಿದ್ದಲ್ಲದೇ ಕೆಲಸಕ್ಕೆ ಹೋಗಿ ದುಡಿದು ಹಣವನ್ನು ತೆಗೆದುಕೊಂಡು ಬರುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಾರೆ.

ನನ್ನ ಪತಿಯ ಕಿರುಕುಳ ತಾಳಲಾರದೇ ನಾನು ತವರು ಮನೆಗೆ ಬಂದೆ. ಬಳಿಕ ಫೆ. 16ರಂದು ನನ್ನ ಪತಿ ಮನೆಗೆ ಹೋದಾಗ ಇಲ್ಲಸಲ್ಲದ ಆರೋಪ ಮಾಡಿ ಬಾಯಿಗೆ ಬಂದಂತೆ ಬೈದು ಜಗಳ ಮಾಡಿ ಮನೆ ಬಿಟ್ಟು ತೊಲಗು ಎಂದು ಮನೆಯಿಂದ ಹೊರ ಹಾಕಿದ್ದಾರೆ. ಈ ರೀತಿಯಾಗಿ ಹೆಚ್ಚಿನ ವರದಕ್ಷಿಣೆಯ ಸಲುವಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿ ಪ್ರಾಣ ಬೆದರಿಕೆ ಹಾಕಿದ್ದಾರೆ. ನನ್ನ ಪತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *