ಭಾರತದಲ್ಲಿ ಬದುಕು ಕಟ್ಟಿಕೊಂಡು ಪಾಕ್ ಹೊಗಳಿ ನಟಿ ವೀಣಾ ಮಲ್ಲಿಕ್ ಕುಚೇಷ್ಟೆ

Public TV
2 Min Read

– ಟ್ವಿಟ್ಟರ್ ನಲ್ಲಿ ಕಾಲ್ಕೆರೆದು ಜಗಳಕ್ಕೆ ನಿಂತ ನಟಿ

ಮುಂಬೈ: ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ಕಲಾವಿದರನ್ನು ಭಾರತ ನಿಷೇಧಿಸಿದೆ. ಕಳೆದ ಕೆಲ ದಿನಗಳಿಂದ ಭಾರತ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನ ಪರಿಸ್ಥಿತಿ ಗೊಂಡಿದ್ದು, ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ತನ್ನ ದೇಶದಿಂದ ಓಡಿ ಬಂದು ಭಾರತದಲ್ಲಿ ಬದುಕು ಕಟ್ಟಿಕೊಂಡ ಪಾಕ್ ನ ವಿವಾದಿತ ನಟಿ ವೀಣಾ ಮಲ್ಲಿಕ್ ಸುಮ್ಮನೆ ಕುಳಿತುಕೊಳ್ಳಲಾರದೇ ಟ್ವಿಟ್ಟರ್ ನಲ್ಲಿ ಉದ್ಧಟತನದ ಪೋಸ್ಟ್ ಹಾಕಿಕೊಳ್ಳುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ಭಾರತದ ವಾಯುಪಡೆ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಎಂದು ಬರೆದುಕೊಂಡು ಪಾಕಿಸ್ತಾನ ಪರ ಪೋಸ್ಟ್ ಗಳನ್ನು ತಮ್ಮ ಟ್ವಿಟ್ಟರ್ ನಲ್ಲಿ ಅನ್ನ ಬದುಕು ನೀಡಿದ ದೇಶದ ವಿರುದ್ಧವೇ ನಿಂತಿದ್ದಾಳೆ. ತಮ್ಮ ದೇಶದ ಪರ ಘೋಷಣೆಗಳನ್ನು ಬರೆದುಕೊಂಡು ಸುಮ್ಮನಾಗದೇ ಇತರೆ ಬಾಲಿವುಡ್ ತಾರೆಯರು ದೇಶದ ಯೋಧರಿಗೆ ನಮನ ಸಲ್ಲಿಸಿರುವ ಟ್ವೀಟ್ ಗಳಿಗೆ ಪ್ರತಿಕ್ರಿಯಿಸುವ ಮೂಲಕ ಕುಚೇಷ್ಟೆ ಶುರು ಮಾಡಿಕೊಂಡಿದ್ದಾಳೆ.

ಅಜಯ್ ದೇವಗನ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಸೇರಿದಂತೆ ಇತರೆ ಕಲಾವಿದರು ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭಾರತದ ವಾಯುಪಡೆಗೆ ಧನ್ಯವಾದ ಸಲ್ಲಿಸಿ, ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಈ ಎಲ್ಲ ನಟರ ಟ್ವೀಟ್ ಗೆ ತಮ್ಮ ದೇಶವನ್ನು ಹೊಗಳಿಕೊಂಡು ಪ್ರತಿಕ್ರಿಯೆ ನೀಡಿದ್ದಾಳೆ.

ಬದ್ಗಾಮ್‍ನಲ್ಲಿ ಪತನಗೊಂಡ ಮಿಗ್-21 ಯುದ್ಧ ವಿಮಾನದ ಫೋಟೋ ಹಾಕಿ, ಅತ್ಯುತ್ತಮ ಸೇನೆ ಜೊತೆ ವಿರೋಧ ಕಟ್ಟಿಕೊಂಡರೆ ಇದೇ ಗತಿ ಆಗುವುದು. ನಾವು ನಮ್ಮ ಮರಗಳ ನಾಶಕ್ಕೂ ಸೇಡು ತೀರಿಸಿಕೊಳ್ಳುತ್ತೇವೆ. ಮೃತ ಮರಗಳಿಗೆ ಶಾಂತಿ ಸಿಗಲಿ. ನಾವು ನಿಮಗೆ ಸರ್ಪ್ರೈಸ್ ನೀಡುತ್ತೇವೆ ಎಂದು ಬರೆದುಕೊಳ್ಳುವ ವೀಣಾ ಮಲ್ಲಿಕ್ ಬೊಗಳೆ ಬಿಟ್ಟಿದ್ದಾಳೆ.

ಹಿಂದಿಯ ಬಿಗ್‍ಬಾಸ್-6ರಲ್ಲಿ ಸ್ಪರ್ಧಿಯಾಗಿದ್ದ ವೀಣಾ ಮಲ್ಲಿಕ್, ದೊಡ್ಡ ಮನೆಯಲ್ಲಿ 83 ದಿನಗಳನ್ನು ಕಳೆದಿದ್ದಳು. ಇದಾದ ಬಳಿಕ ಬಿಗ್ ಟಾಸ್, ಸೂಪರ್ ಸ್ಟಡ್ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ನಟಿ ತನ್ನ ಹಾಟ್ ಫೋಟೋಶೂಟ್ ಗಳ ಮೂಲಕವೇ ಸದ್ದುಮಾಡಿದ್ದುಂಟು. 2013ರಲ್ಲಿ ತೆರೆಕಂಡಿದ್ದ ಕನ್ನಡದ ‘ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗಾ’ ಸಿನಿಮಾದಲ್ಲಿ ನಟಿಸಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *