ಬೆಂಗಳೂರು: ಎರಡು ತಿಂಗಳ ಗರ್ಭಿಣಿ ಮೇಲೆ ಚಿಕ್ಕಪ್ಪನೇ ಮಚ್ಚಿನಿಂದ ಹಲ್ಲೆ ನಡೆಸಿದ್ದರಿಂದ ತಾಯಿ ಮಗುವನ್ನು ಕಳೆದುಕೊಳ್ಳವ ಪರಿಸ್ಥಿತಿಗೆ ತಲುಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಬಳಿ ನಡೆದಿದೆ.
ರೂಪ ಮಗು ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ಮಹಿಳೆ. ಹೆಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ನಸಂದ್ರ ಪಾಳ್ಯ ನಿವಾಸಿ ಆಂಜಿನಪ್ಪರೆಡ್ಡಿ ಮಗಳಾಗಿದ್ದು, ರೂಪಾರ ಚಿಕ್ಕಪ್ಪ ನಾರಾಯಣ ರೆಡ್ಡಿ, ಆಂಜಿನಪ್ಪ ರೆಡ್ಡಿಗೆ ಬಂದ 250 ಅಡಿ ಭೂಮಿಯನ್ನು ತೆಗೆದುಕೊಂಡು ಉಳಿದ 150 ಅಡಿ ಜಾಗದಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ತಿಳಿಸಿದ್ದನು.
ನಾರಾಯಣರೆಡ್ಡಿ ಮನೆಯನ್ನು ಕಟ್ಟಿಸಿಕೊಡದ ಕಾರಣ ಸೋಮವಾರ ಮಾತುಕತೆಗೆ ಹೋದಾಗ ರೂಪಾ, ಆಕೆಯ ತಾಯಿ ಹೋದಾಗ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಚಿಕ್ಕಪ್ಪನೆ ವಿಲನ್ ಆಗಿ, ಮಚ್ಚಿನಿಂದ ಹಲ್ಲೆ ನಡೆಸಿದ್ದರಿಂದ ರೂಪಾ ಮಗುವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ.
ಕಳೆದ ಐದು ವರ್ಷಗಳ ಹಿಂದೆ ಮಾತುಕತೆ ನಡೆದಿದ್ದರು ನಾಮಾಕಾವಸ್ತೆಗೆ ಮನೆ ಕೆಲಸ ಪ್ರಾರಂಬಿಸಿದ ನಾರಾಯಣರೆಡ್ಡಿ ತನ್ನ ಮಾತಿನಂತೆ ನಡೆದುಕೊಳ್ಳದೆ ಇದ್ದುದರಿಂದ ಎರಡು ಮೂರು ಬಾರಿ ಗಲಾಟೆ ನಡೆದಿತ್ತು. ನಿನ್ನೆ ಸಹ ಮಾತುಕತೆಗೆಂದು ನಾರಾಯಣರೆಡ್ಡಿ ಮನೆಗೆ ನನ್ನ ಪತ್ನಿ, ಅತ್ತೆ ಹಾಗೂ ದೊಡ್ಡಮ್ಮ ತೆರಳಿದಾಗ ನಾರಾಯಣರೆಡ್ಡಿ, ಆಕೆಯ ಪತ್ನಿ ಪವಿತ್ರ, ಮಗಳು ದಿವ್ಯ ತೀವ್ರವಾಗಿ ಹಲ್ಲೆ ನಡೆಸಿ ಬಡಿದಾಡಿಕೊಂಡಿದ್ದಾರೆ ಎಂದು ರೂಪಾ ಪತಿ ಲೋಕೇಶ್ ಹೇಳಿದ್ದಾರೆ.
ಸದ್ಯ ಈ ಪ್ರಕರಣ ಹೆಚ್.ಎ.ಎಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇತ್ತ ರೂಪಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv