ಪುಲ್ವಾಮ ದಾಳಿ ಖಂಡಿಸಿ ಉಗ್ರರ ವಿರುದ್ಧ ಸಿಡಿದ ಪಾಕ್ ಯುವ ಜನತೆ!

Public TV
2 Min Read

ಇಸ್ಲಾಮಾಬಾದ್: ಭಾರತದಲ್ಲಿಯೇ ಇದ್ದುಕೊಂಡು ಪಾಕ್ ಉಗ್ರರನ್ನು ಕೆಲ ದೇಶದ್ರೋಹಿಗಳು ಬೆಂಬಲಿಸುತ್ತಿರುವಾಗ, ಉಗ್ರರ ನಡೆ ಹಾಗೂ ಪುಲ್ವಾಮ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ಕೆಲ ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಭಾರತಕ್ಕೆ ಬೆಂಬಲ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಾನು ಪಾಕಿಸ್ತಾನಿ ಆದರೆ ನಾನು ಪುಲ್ವಾಮ ದಾಳಿಯನ್ನು ಖಂಡಿಸುತ್ತೇನೆ ಎಂದು ಮಾನವೀಯತೆಗೆ ಬೆಲೆ ನೀಡಿದ್ದಾರೆ. ಹಾಗೆಯೇ #AntiHateChallenge #NoToWar ಎಂದು ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

https://www.facebook.com/photo.php?fbid=10158983178331515&set=a.10150427150031515&type=3

“ನಾನು ಪಾಕಿಸ್ತಾನಿ ಮತ್ತು ಪುಲ್ವಾಮಾ ದಾಳಿಯನ್ನು ಖಂಡಿಸುತ್ತೇನೆ, #AntiHateChallenge #NoToWar”. ಎಂದು ಬರೆದು ಯುವ ಪತ್ರಕರ್ತೆ ಮತ್ತು ಭಾರತ- ಪಾಕ್ ಶಾಂತಿ ಹೋರಾಟಗಾರ್ತಿ ಸೆಹೈರ್ ಮಿರ್ಜಾ ಪ್ಲೇಕಾರ್ಡ್ ಹಿಡಿದುಕೊಂಡಿರುವ ತಮ್ಮ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಈ ಫೋಟೋ ಅಡಿಯಲ್ಲಿ “I won’t trade humanity for patriotism” (ದೇಶಭಕ್ತಿಗಾಗಿ ನಾನು ಮಾನವೀಯತೆಯನ್ನು ಮಾರುವುದಿಲ್ಲ) ಎಂದು ಬರೆದು ಪುಲ್ವಾಮ ದಾಳಿಯನ್ನು ಖಂಡಿಸಿ ಫೋಸ್ಟ್ ಮಾಡಿದ್ದಾರೆ. ಅವರೊಂದಿಗೆ ಕೆಲ ಪಾಕ್ ಯುವತಿಯರು ಕೂಡ ಈ ಅಭಿಯಾನಕ್ಕೆ ಸಾಥ್ ಕೊಟ್ಟಿದ್ದಾರೆ.

https://www.facebook.com/amankiasha.destinationpeace/posts/2196502283729334

ಅಲ್ಲದೆ ಅಮನ್ ಕಿ ಆಶಾ ಎಂಬ ಫೇಸ್‍ಬುಕ್ ಗ್ರೂಪ್ ಪೇಜ್ ಈ ಫೋಸ್ಟ್ ಗಳನ್ನು ಶೇರ್ ಮಾಡಿ ಯುವತಿಯರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರಿಂದ ಈ ಫೋಸ್ಟ್‍ಗೆ ಪ್ರತಿಕ್ರಿಯಿಸಿದ ಸೆಹೈರ್ ಮಿರ್ಜಾ “ಕಾಶ್ಮೀರದಲ್ಲಿ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡ ಉಗ್ರ ದಾಳಿ ನಮಗೆ ತೀವ್ರ ನೋವು ತಂದಿದೆ. ಈ ದಾಳಿಯ ವಿರುದ್ಧ ನಿಲ್ಲುವ ಸಮಯವಿದು. ಯುದ್ಧ ಮತ್ತು ಭಯೋತ್ಪಾದನೆ ವಿರುದ್ಧ ಮಾತನಾಡಲು ನಮಗೆ ಹೆಚ್ಚು ಹೆಚ್ಚು ವಿವೇಕಯುಳ್ಳ ಧ್ವನಿಗಳು ಬೇಕಾಗಿವೆ. ದಾಳಿಯನ್ನು ಖಂಡಿಸುವುದು ಮಾತ್ರವಲ್ಲದೆ ನಮ್ಮ ಭಾರತೀಯ ಸ್ನೇಹಿತರ ಜೊತೆ ಭಾವನೆ ವ್ಯಕ್ತಪಡಿಸಲು ನಾವು ಈ #AntiHateChallenge ಅಭಿಯಾನ ಪ್ರಾರಂಭಿಸಿದ್ದೇವೆ. ಪಾಕ್ ಪ್ರಜೆಗಳೇ, ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ನಮ್ಮೊಂದಿಗೆ ಕೈ ಜೊಡಿಸಿ” ಎಂದು ಕರೆ ನೀಡಿದ್ದಾರೆ.

https://www.facebook.com/beenasarwarofficial/posts/2211981312174134

ಅಷ್ಟೇ ಅಲ್ಲದೆ ಅವರು ಭಾರತೀಯ ಕವಿ ಸಾಹಿರ್ ಲುದಿಯಾನ್ವಿ ಅವರ ಕವಿತೆಯನ್ನು ಫೋಸ್ಟ್ ಮಾಡಿದ್ದಾರೆ.
“ರಕ್ತ ನಮ್ಮದೋ ಅಥವಾ ಅವರದೋ, ಅದು ಮನುಕುಲದ ರಕ್ತ
ಪೂರ್ವ ಅಥವಾ ಪಶ್ಚಿಮದಲ್ಲಿ ಯುದ್ಧಗಳು ನಡೆಯದಿರಲಿ, ಅದು ವಿಶ್ವಶಾಂತಿಯ ಹತ್ಯೆ
ಬಾಂಬ್ ದಾಳಿಯ ಗುರಿ ಮನೆಗಳಾಗಿರಲಿ ಅಥವಾ ಗಡಿಯಾಗಿರಲಿ, ಗಾಯವಾಗುವುದು ಆತ್ಮದ ಗುಡಿಗೆ
ಯುದ್ಧವೇ ಒಂದು ಬಹುದೊಡ್ಡ ಸಮಸ್ಯೆ, ಅದು ಹೇಗೆ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ?
ಇಂದು ಇದು ಬೆಂಕಿ ಮತ್ತು ರಕ್ತದ ಮಳೆಯನ್ನು ಸುರಿಸುತ್ತದೆ, ನಾಳೆ, ಹಸಿವು ಮತ್ತು ದಾರಿದ್ರ್ಯದ ಸುರಿಮಳೆ ” ಎಂದು ಕವಿ ಸಾಹಿರ್ ಲುದಿಯಾನ್ವಿ ಯುದ್ಧವನ್ನು ಮಾಡಬೇಡಿ ಎಂದು ಕವಿತೆ ಬರೆದಿದ್ದಾರೆ.

ಪಾಕಿಸ್ತಾನಿ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಇ-ಮೊಹಮ್ಮದ್ ಸಂಘಟನೆ ಪುಲ್ವಾಮಾ ದಾಳಿಯ ಹೊಣೆ ಹೊತ್ತುಕೊಂಡಿದೆ. ಆದರೆ ಇದರಲ್ಲಿ ನಮ್ಮದೇನೂ ಪಾತ್ರವಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಾಕ್ಷ್ಯ ಕೊಡಿ ಭಾರತಕ್ಕೆ ಕೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *