ಏರ್ ಶೋ ಅಬ್ಬರದಲ್ಲಿ ನಾಗರ ಹಾವುಗಳ ಮಾರಣಹೋಮ

Public TV
1 Min Read

ಬೆಂಗಳೂರು: ಭಾರತದ ಹೆಮ್ಮೆಯ ಏರ್ ಶೋಗೆ ಬೆಂಗಳೂರಿನಲ್ಲಿ ಇಂದಿನಿಂದ ಚಾಲನೆ ಸಿಗಲಿದೆ. ಏರ್ ಶೋಗೂ ಮುನ್ನ ಈ ಬಾರಿ ಮರೆಯಲಾರದ ದುರಂತ ನಡೆದು ಹೋಗಿದೆ. ಆದರೆ ಪ್ರತಿ ಬಾರಿಯ ಏರ್ ಶೋನಲ್ಲಿ ಕೂಡ ಮಾರಣಹೋಮಕ್ಕೆ ಮುಹೂರ್ತ ಫಿಕ್ಸ್ ಆದಂತೆ ಅಮಾಯಕ ಜೀವಗಳ ನೆತ್ತರು ಏರ್ ಶೋ ಅಬ್ಬರದಲ್ಲಿ ಸದ್ದಿಲ್ಲದೇ ಹರಿದುಹೋಗುತ್ತದೆ.

ನೀಲನಭದಲ್ಲಿ ಲೋಹದ ಹಕ್ಕಿಗಳ ಕಲರವ ಆಗಸದಲ್ಲಿ ಶತ್ರುಗಳ ಎದೆ ನಡುಗಿಸುವ ಯುದ್ಧ ವಿಮಾನದ ವೈಮಾನಿಕ ಪ್ರದರ್ಶನ ಇಂದಿನಿಂದ ನಡೆಯಲಿದೆ. ಇದು ಬೆಂಗಳೂರಿನ ಹೆಮ್ಮೆ ಕೂಡ. ಆದರೆ ಪ್ರತಿವರ್ಷವೂ ಏರ್ ಶೋ ಸಮಯದಲ್ಲಿ ನಾಗರಹಾವುಗಳ ರಕ್ತತರ್ಪಣವೇ ನಡೆಯುತ್ತೆ. ಏರ್ ಶೋ ನಡೆಯುವ ಸ್ಥಳ ನಾಗರಹಾವುಗಳ ಅವಾಸಸ್ಥಾನವಾಗಿದೆ.

ಏರ್ ಶೋ ಸಮಯದಲ್ಲಿ ಭೂಮಿ ವೈಬ್ರೇಟ್ ಆಗೋದ್ರಿಂದ ಹಾವುಗಳು ಹೊರ ಬರುತ್ತೆ. ಏರ್ ಶೋ ಸಮಯದಲ್ಲಿ ಸಾಕಷ್ಟು ಜನ ಬರೋದ್ರಿಂದ ಹಾವುಗಳನ್ನು ಕಂಡ ತಕ್ಷಣ ಜನ ಅಥವಾ ಅಲ್ಲಿನ ಸೆಕ್ಯೂರಿಟಿ ಸಿಬ್ಬಂದಿ ಕೊಲ್ಲುತ್ತಾರಂತೆ. ಪ್ರತಿ ಏರ್ ಶೋ ಸಮಯದಲ್ಲಿ 20 ರಿಂದ 25 ನಾಗರಹಾವುಗಳು ಸಾವನ್ನಪ್ಪುತ್ತವಂತೆ.

ಹಾವುಗಳ ಮಾರಣ ಹೋಮ ತಡೆಯೋದಕ್ಕೆ ಈ ಬಾರಿ ಉರಗ ತಜ್ಞರು ಸ್ವಯಂಪ್ರೇರಿತರಾಗಿ ಏರ್ ಶೋಗೆ ಹೋಗುವ ಚಿಂತನೆಯಲ್ಲಿದ್ದಾರೆ. ಬಿಬಿಎಂಪಿಯಿಂದ ಕೂಡ ಈ ಬಾರಿ ಹೆಚ್ಚುವರಿಯಾಗಿ ಉರಗತಜ್ಞರನ್ನು ನೇಮಕ ಮಾಡಿದ್ದು ಹಾವುಗಳನ್ನು ಕೊಲ್ಲದೇ ನಾವೇ ಸೂಕ್ತ ಸ್ಥಳಕ್ಕೆ ರಕ್ಷಣೆ ಮಾಡಿ ರವಾನಿಸುತ್ತೇವೆ. ಹಾವುಗಳು ಭಯಕ್ಕೆ ಹೊರಗಡೆ ಬರುತ್ತವೆ. ಆದ್ರೆ ದಯವಿಟ್ಟು ಅವುಗಳನ್ನು ಕೊಲ್ಲದೆ ನಮಗೆ ಮಾಹಿತಿ ನೀಡಿ ಎಂದು ಉರಗ ತಜ್ಞರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *