ಪಾಕ್ ಮೆಚ್ಚಿದ ರಾಜಕುಮಾರನಿಗೆ ಪ್ರಧಾನಿ ಅಪ್ಪುಗೆಯ ಸ್ವಾಗತ- ಭಾರತಕ್ಕೆ ಬೆಂಬಲಿಸುತ್ತಾ ಸೌದಿ..?

Public TV
1 Min Read

– ದಾಳಿ ಭಯಾನಕ ಎಂದ ಟ್ರಂಪ್

ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮ ದಾಳಿ ಹೊತ್ತಲ್ಲಿ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನ ಪ್ರವಾಸದಲ್ಲಿದ್ದ ಸೌದಿ ಆರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಭಾರತಕ್ಕೆ ಬಂದಿಳಿದ್ದಾರೆ.

ದೆಹಲಿಯ ಪಾಲಂ ವಾಯುನೆಲೆಗೆ ಆಗಮಿಸಿದ ರಾಜಕುಮಾರನಿಗೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವ್ರೇ ಅಪ್ಪುಗೆಯ ಮೂಲಕ ಭವ್ಯ ಸ್ವಾಗತ ನೀಡಿದ್ದಾರೆ. ಪುಲ್ವಾಮದಲ್ಲಿ 44 ಸೈನಿಕರ ಹತ್ಯೆಗೆ ಕಾರಣವಾದ ಉಗ್ರ ದಾಳಿಯ ವೇಳೆ ಪಾಕಿಸ್ತಾನದಲ್ಲಿ 2 ಲಕ್ಷದ 79 ಸಾವಿರ ಕೋಟಿ ರೂಪಾಯಿ ಮೊತ್ತದ ಹೂಡಿಕೆಯನ್ನು ಘೋಷಿಸಿದ್ದ ರಾಜಕುಮಾರ, ಶಾಂತಿ ಸ್ಥಾಪನೆಯಲ್ಲಿ ಪಾಕ್ ಪಾತ್ರವನ್ನು ಕೊಂಡಾಡಿದ್ದರು. ಇದನ್ನೂ ಓದಿ: ಸಾಕ್ಷ್ಯ ನೀಡಿದ್ರೆ ಕ್ರಮ, ಯುದ್ಧ ನಡೆದರೆ ಉತ್ತರ ಕೊಡ್ತೀವಿ: ಭಾರತವನ್ನು ಕೆಣಕಿದ ಇಮ್ರಾನ್ ಖಾನ್

ಮಂಗಳವಾರವಷ್ಟೇ ಯುದ್ಧಕ್ಕೆ ಸಿದ್ಧ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉದ್ಧಟತನದ ಹೇಳಿಕೆಯನ್ನೂ ನೀಡಿದ್ದರು. ಭಾರತ-ಪಾಕಿಸ್ತಾನ ಜೊತೆಗೆ ಬೇಗುದಿ ಶಮನಕ್ಕೆ ಸಂಧಾನದ ಮಾತನ್ನೂ ಆಡಿದ್ದರು. ಈ ಹಿನ್ನೆಲೆಯಲ್ಲಿ ಸೌದಿ ರಾಜಕುಮಾರನ ಭಾರತ ಭೇಟಿ ಮಹತ್ವ ಪಡೆದಿದೆ. ಹೂಡಿಕೆ, ದ್ವಿಪಕ್ಷೀಯ ಸಹಕಾರ ಕುರಿತ 7 ಒಪ್ಪಂದಗಳಿಗೆ ಸಹಿ ಹಾಕುವುದರ ಜೊತೆಗೆ ಭಯೋತ್ಪಾದನೆ ವಿರುದ್ಧ ಸೌದಿ ಅರೇಬಿಯಾ-ಭಾರತ ಉಗ್ರ ಹೇಳಿಕೆ ಕೊಟ್ಟು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸೋ ಸಾಧ್ಯತೆ ಇದೆ. ಇದನ್ನೂ ಓದಿ: ‘ನಿಮ್ಮಿಂದ ಆಗದಿದ್ರೆ, ನಮಗೆ ಬಿಡಿ’ – ಇಮ್ರಾನ್ ಖಾನ್ ಹೇಳಿಕೆಗೆ ಪಂಜಾಬ್ ಸಿಎಂ ತಿರುಗೇಟು

ಇತ್ತ ಪುಲ್ವಾಮಾ ದಾಳಿ ಭಯಾನಕ ಅಂತ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ನಾನು ಎಲ್ಲವನ್ನೂ ನೋಡುತ್ತಿದ್ದೇನೆ. ಸಾಕಷ್ಟು ವರದಿಗಳು ಬರ್ತಿವೆ. ಶೀಘ್ರವೇ ನಮ್ಮ ಹೇಳಿಕೆಯನ್ನ ಬಿಡುಗಡೆ ಮಾಡ್ತೇವೆ. ಆದ್ರೆ ಭಾರತ ಮತ್ತು ಪಾಕಿಸ್ತಾನ ಜೊತೆಯಾಗಿ ಸಾಗಿದರೆ ಅಚ್ಚರಿಯೇ ಸರಿ ಅಂತ ಟ್ರಂಪ್ ಹೇಳಿದ್ದಾರೆ.

https://www.youtube.com/watch?v=kbMS2x06Kr0

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *