ಸಿದ್ದರಾಮಯ್ಯ ಆಪರೇಷನ್ ಜನಕ: ಈಶ್ವರಪ್ಪ ವಾಗ್ದಾಳಿ

Public TV
1 Min Read

– ದೇವೇಗೌಡರಿಗೆ ಟೋಪಿ ಹಾಕಿ ಕಾಂಗ್ರೆಸ್ ಸೇರಿದ್ರು

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಾಯಕರು ಅವರ ಶಾಸಕರನ್ನು ಅವರೇ ಹಿಡಿದಿಟ್ಟುಕೊಳ್ಳಲು ವಿಫಲವಾಗಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ ಆಪರೇಷನ್ ಜನಕ ಎಂದರೇ ಮಾಜಿ ಸಿಎಂ ಸಿದ್ದರಾಮಯ್ಯ, ಅವರು ಕಾಂಗ್ರೆಸ್‍ಗೆ ಹೋದಾಗಲೇ ರಾಜ್ಯದಲ್ಲಿ ಆಪರೇಷನ್ ಶುರುವಾಗಿದ್ದು ಎಂದು ಶಾಸಕ ಕೆಎಸ್ ಈಶ್ವರಪ್ಪ ಅವರು ಆರೋಪ ಮಾಡಿದ್ದಾರೆ.

ಬಿಜೆಪಿ ಕಚೇರಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದನದಲ್ಲಿ ನಾನು ಆಡಿಯೋ ತನಿಖೆ ಬಗ್ಗೆ ಮಾತನಾಡುವ ವೇಳೆ ಕಳ್ಳನ ಕೈಗೆ ಬೀಗ ಕೊಟ್ಟಿದ್ದಾರೆ ಎಂದಿದ್ದಕ್ಕೆ ಆಡಳಿತ ಪಕ್ಷಕ್ಕೆ ಅಘಾತವಾಗಿರಬಹದು. ಅದು ಒಂದು ಭಾಗದಲ್ಲಿ ಸತ್ಯವೇ ಆಗಿದೆ. ಜೆಡಿಎಸ್ ಪಕ್ಷದಿಂದ ಸಿದ್ದರಾಮಯ್ಯ ಅವರು ಎಲ್ಲವನ್ನು ಪಡೆದುಕೊಂಡು ಕಾಂಗ್ರೆಸ್ ಸೇರುವ ಮೂಲಕ ಮೊದಲು ಆಪರೇಷನ್ ಸಂಸ್ಕೃತಿ ಜಾರಿ ಮಾಡಿ ಜನಕರಾಗಿದ್ದಾರೆ. ಬಿಎಸ್‍ವೈ ಅವರ ಮೇಲೆ ಆರೋಪ ಮಾಡುವ ಮುನ್ನ ಸಿದ್ದರಾಮಯ್ಯ ಅವರು ಎಷ್ಟು ಹಣ ಪಡೆದು ಕಾಂಗ್ರೆಸ್‍ಗೆ ಬಂದಿದ್ದರು ಎಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ದೇವೇಗೌಡರಿಗೆ ಟೋಪಿ ಹಾಕಿ ಕಾಂಗ್ರೆಸ್‍ಗೆ ಬಂದ ಸಿದ್ದರಾಮಯ್ಯ ಅವರು ಸತ್ಯಾಹರಿಶ್ಚಂದ್ರರಂತೆ ಮಾತನಾಡುತ್ತಿದ್ದಾರೆ. ಅವರಿಗೆ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಸದನದಲ್ಲಿ ತನಿಖೆಯನ್ನು ಎಸ್‍ಐಟಿಗೆ ನೀಡುವ ತೀರ್ಮಾನ ಮಾಡಿದ ವೇಳೆ ವಿರೋಧ ವ್ಯಕ್ತಪಡಿಸಿದ್ದೇವೆ. ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಮೂಲಕವೇ ಪ್ರಕರಣದ ವಿಚಾರಣೆ ನಡೆಸಬೇಕು ಎಂಬುವುದು ನಮ್ಮ ಒತ್ತಾಯವಾಗಿದೆ. ನಾಳೆಯೂ ಸದನದಲ್ಲಿ ಈ ಬಗ್ಗೆ ಸ್ಪೀಕರ್ ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *