ಬಂಡಾಯ ಶಾಸಕರ ಸಿಟ್ಟು ಶಮನಗೊಳಿಸಲು ಮುಂದಾದ್ರು ಎಚ್‍ಡಿಕೆ, ರೇವಣ್ಣ

Public TV
1 Min Read

ಬೆಂಗಳೂರು: ಸರ್ಕಾರಕ್ಕೆ ಕಂಟಕವಾಗಿರುವ ಕಾಂಗ್ರೆಸ್ ಬಂಡಾಯ ಶಾಸಕರ ಸಿಟ್ಟು ಶಮನಕ್ಕೆ ಬ್ರದರ್ಸ್ ಮುಂದಾಗಿದ್ದಾರೆ. ಅಣ್ಣ ರೇವಣ್ಣ ಒತ್ತಾಯ ಹಿನ್ನೆಲೆಯಲ್ಲಿ ತಡೆ ಹಿಡಿದಿದ್ದ ನಿಗಮ ಮಂಡಳಿಗಳ ನೇಮಕಾತಿಗೆ ಒಪ್ಪಿಗೆ ಸೂಚಿಸಲು ಸಿಎಂ ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ.

ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯಗೆ ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರ, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್ ಮತ್ತು ರಾಯಚೂರು ಗ್ರಾಮೀಣ ಶಾಸಕ ಬಸವರಾಜ್ ದದ್ದಲ್‍ಗೂ ನಿಗಮ ಮಂಡಳಿ ಸ್ಥಾನ ಒಲಿಯಲಿದೆ.

ಹಾಸನ ಮೂಲದ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿಗೆ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಲು ಓಕೆ ಅಂದಿದ್ದಾರೆ. ಗೋಪಾಲಸ್ವಾಮಿ ನೇಮಕಕ್ಕೆ ರೇವಣ್ಣ ತಡೆ ತಂದಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್‍ಗೆ ಹಂಚಿಕೆ ಆಗಿತ್ತು. ಆದ್ರೆ ಕಾನೂನು ತೊಡಕಾಗಿರುವ ಹಿನ್ನೆಲೆಯಲ್ಲಿ ಕಾನೂನು ಸಲಹೆ ಪಡೆದು ನೇಮಕ ಮಾಡುವ ಬಗ್ಗೆ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಇತ್ತ ಕುಮಾರಸ್ವಾಮಿ ನೇತೃತ್ವದ ನಮ್ಮ ಸರ್ಕಾರ ಬಿದ್ದರೂ ನೀವೇ ಹೊಣೆ. ಸರ್ಕಾರ ಉಳಿದರೂ ನಿಮಗೆ ಶ್ರೇಯಸ್ಸು. ಏನ್ ಮಾಡ್ತೀರಿ ಗೊತ್ತಿಲ್ಲ ನಮ್ಮ ದೋಸ್ತಿ ಸರ್ಕಾರ ಬೀಳಲೇಬಾರದು. ದೋಸ್ತಿ ಸರ್ಕಾರವನ್ನು ಉಳಿಸುವ ಸಂಪೂರ್ಣ ಹೊಣೆ ನಿಮ್ಮದೇ ಆಗಿರುತ್ತದೆ ಎಂದು ಸಿದ್ದರಾಮಯ್ಯಗೆ ದೆಹಲಿಯಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫರ್ಮಾನು ಹೊರಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಬುಧವಾರ ನಡೆದ ಅಧಿವೇಶನದ ಮೊದಲ ದಿನವೇ 11 ಮಂದಿ ಶಾಸಕರು ಗೈರಾಗಿರುವ ಹಿನ್ನೆಲೆಯಲ್ಲಿ ಸರ್ಕಾರವನ್ನ ಉಳಿಸಲು ಸರ್ವ ಪ್ರಯತ್ನಗಳನ್ನ ಮಾಡುವಂತೆ ಸಿದ್ದರಾಮಯ್ಯಗೆ ರಾಹುಲ್ ಸೂಚಿಸಿದ್ದಾರೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *