ಹಂಪಿ ಸೌಂದರ್ಯವನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದ ಯದುವೀರ್ ಒಡೆಯರ್

Public TV
1 Min Read

ಬಳ್ಳಾರಿ: ಮೈಸೂರು ಮಹರಾಜ ಯದುವೀರ್ ಶ್ರೀಕಂಠದತ್ತ ಒಡೆಯರ್ ಅವರು ಭಾನುವಾರ ಐತಿಹಾಸಿಕ ಹಂಪಿಗೆ ಭೇಟಿ ನೀಡಿ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು.

ಕಮಲಾಪುರ ಹಾಗೂ ತಳವಾರಘಟ್ಟ ರಸ್ತೆ ಮೂಲಕ ಬ್ಯಾಟರಿ ಚಾಲಿತ ವಾಹನ ನಿಲ್ದಾಣಕ್ಕೆ ಆಗಮಿಸಿದ ಯದುವೀರ್ ಗೆಜ್ಜಲ ಮಂಟಪ, ಕುದುರೆ ಗೊಂಬೆ ಮಂಟಪ, ವಿಠಲ ಬಜಾರ್, ಪುಷ್ಕರಣಿ, ಪ್ರಸಿದ್ಧ ವಿಜಯವಿಠಲ ದೇವಸ್ಥಾನದಲ್ಲಿ ಕಲ್ಲಿನ ರಥ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡರು. ಒಡೆಯರ್ ನೋಡಿ ಪ್ರವಾಸಿಗರು ಅವರ ಜೊತೆ ಫೋಟೋ, ಸೆಲ್ಫಿ ತಗೆದುಕೊಂಡರು.

ಸಂಗೀತ ಮಂಟಪಕ್ಕೆ ತೆರಳಿ, ಸಪ್ತಸ್ವರ ಕಂಬಗಳಿಂದ ನಾದ ಆಲಿಸಿ ಖುಷಿಪಟ್ಟರು. ನಂತರ ತುಂಗಭದ್ರಾ ನದಿ ತೀರದಲ್ಲಿರುವ ಪುರಂದರ ಮಂಟಪ ವೀಕ್ಷಣೆ ಮಾಡಿದರು. ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಸಿ.ಎಸ್.ವಾಸುದೇವನ್ ಮತ್ತಿತರರು ಇದ್ದರು. ಯದುವೀರ್ ಅವರು ಹಂಪಿಗೆ ಆಗಾಗ ಭೇಟಿ ನೀಡುತ್ತಾರೆ. ಈ ಬಾರಿಯೂ ಹಂಪಿ ಪ್ರಸಿದ್ಧ ಸ್ಮಾರಕ ಸೇರಿದಂತೆ ಪ್ರಕೃತಿ ಸೊಬಗನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *