ಬೆಳಗ್ಗೆ 2.15 ರಿಂದ ರಾತ್ರಿ 11 ಗಂಟೆ – ನಡೆದಾಡುವ ದೇವರ ದಿನಚರಿ ವಿಸ್ಮಯ

Public TV
3 Min Read

ಕಲ ಜೀವಗಳಿಗೂ ಲೇಸನ್ನು ಬಯಸುವ ಶಿವಕಾರುಣ್ಯ ಸ್ವರೂಪರಾದ ಶ್ರೀಗಳ ಬದುಕಿನಷ್ಟೇ ಅವರ ದಿನಚರಿಯೂ ವಿಸ್ಮಯ. ಶ್ರೀಗಳ ಪಾಲಿಗೆ ವಿರಾಮವೆಂದ್ರೆ “ಒಂದು ಕಾರ್ಯವನ್ನು ಮುಗಿಸಿ ಇನ್ನೊಂದು ಕಾರ್ಯದಲ್ಲಿ ತೊಡುಗುವುದು” ಎನ್ನುವ ವ್ಯಾಖ್ಯನ ನೀಡುತ್ತಾರೆ. ಕಾಯಕಯೋಗಿಯ ದಿನಚರಿ ಆರಂಭವಾಗುವುದು ಬೆಳಗಿನ ಜಾವ 2.15ಕ್ಕೆ. ನಾವೆಲ್ಲ 2.15ಕ್ಕೆ ನಿದ್ದೆಯಲ್ಲಿದ್ದರೆ ಗುರುಗಳು ಎದ್ದು ತಮ್ಮ ಕೆಲಸ ಆರಂಭಿಸುತ್ತಿದ್ದರು.

ಮಧ್ಯರಾತ್ರಿ ಕಳೆದ ನಂತರ 2.15ಕ್ಕೆ ಏಳುತ್ತಾರೆ. ಅಧ್ಯಯನ ಕೊಂಚ ಕಾಲ, ಅನಂತರ ಶೌಚಾದಿ ನಿತ್ಯಕರ್ಮಗಳನ್ನು ಮುಗಿಸಿ 3.30ರ ವೇಳೆಗೆ ಪೂಜಾಗೃಹ ಪ್ರವೇಶ. ಕೊಂಚ ಕಾಲ ಏಕಾಂತ ಧ್ಯಾನ, ಯಾರಿಗೂ ಪ್ರವೇಶವಿಲ್ಲ. ಅನಂತರ ಅರ್ಚನಾದಿಗಳ ಆರಂಭ. ವೇದಮಂತ್ರಗಳ, ಶರಣರ ವಚನ, ಕೈವಲ್ಯದ ಹಾಡುಗಳು ಭಕ್ತಿಗೀತೆಗಳನ್ನು ಹಾಡುತ್ತಾರೆ. ಹತ್ತಾರು ಭಕ್ತರ ಮದ್ಯೆ ಗುರು ಲಿಂಗ ಜಂಗಮಾಚರಣೆ ಶುರುವಾಗುತ್ತೆ. ಮಾತು ಮನಗಳು ಮೂಕವಾಗುವ ಅನುಭಾವದ ಪವಿತ್ರ ಜಗತ್ತು ಅಲ್ಲಿ ಸೃಷ್ಟಿಯಾಗಿ ಬಿಡುತ್ತೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

ಇಷ್ಟಲಿಂಗಾರ್ಚನೆಯ ನಂತರ ಪ್ರಸಾದ ಸ್ವೀಕಾರ. ಪ್ರಸಾದ ವಿತರಣೆಯ ಸಂದರ್ಭದಲ್ಲಿ ತುಂಬುಕಂಠದ ಅನುಭಾವದ ಹಾಡುಗಳು ಅಲ್ಲಿ ಮೊಳಗುತ್ತದೆ. ಶ್ರೀಗಳೇ ಈ ಹಾಡು ಹಾಡುತ್ತಾರೆ. ಇದನ್ನು ಕೇಳುವುದೊಂದೆ ಅವಿಸ್ಮರಣೀಯ. ತದನಂತರ ಮಿತಾಹಾರ ಸೇವನೆ. ಒಂದಿಷ್ಟು ಹಣ್ಣು, ಅದು ಒಂದೆರಡು ತೊಳೆ ಅಷ್ಟೇ.

5.30ಕ್ಕೆ ಪೂಜಾಗೃಹದಿಂದ ಕಾಯಕದತ್ತ ಗಮನ. ಕಾರ್ಯಲಾಯಕ್ಕೆ ಆಗಮನ. ಮುಂಜಾನೆಯ ಪ್ರಾರ್ಥನಾ ಸಭೆ. ಸಾಮೂಹಿಕವಾಗಿ ವಿದ್ಯಾರ್ಥಿಗಳ ಪ್ರಾರ್ಥನೆಯಲ್ಲಿ ಶ್ರೀಗಳು ಉಪಸ್ಥಿತಿ. ತದನಂತ್ರ ವಿದ್ಯಾರ್ಥಿಗಳಿಗೆ ಹಿತವಚನ ಭೋಧನೆ. ಬಳಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಜೊತೆ ಹೊಲ ಗದ್ದೆಗಳಿಗೆ ಭೇಟಿ ಕೊಡುವ ಶ್ರೀಗಳು ಹೊಲದಲ್ಲಿ ಬೆಳೆಯುವ ಬೆಳೆಯ ಬಗ್ಗೆ ಅಷ್ಟೇ ಆಸ್ಥೆ ವಹಿಸುತ್ತಾರೆ. ಇದಕ್ಕಾಗಿಯೇ ಶ್ರೀಗಳನ್ನು ಧರೆಗಿಳಿದ ಭಗವಂತ ಅಂತಾ ಕರೆಯೋದು. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

ಶ್ರೀಗಳು ಎಂದಿಗೂ ವಿರಮಿಸಿದವರಲ್ಲ. ಭಕ್ತರಿಗೆ ಸದಾ ದರ್ಶನ ನೀಡುತ್ತಾ, ವಿದ್ಯಾರ್ಥಿಗಳ ಜೊತೆ ಸಂವಾದ ಮಾಡುತ್ತಾ ಇಡೀ ಮಠದ ತುಂಬೆಲ್ಲ ಓಡಾಡುತ್ತಿದ್ದರೆ ಮಠದಲ್ಲಿ ಏನೋ ಚೈತನ್ಯ. ಇವರ ಲವಲವಿಕೆಯ ನೋಡಿ ಅಲಸ್ಯದಿಂದ ಮೂಲೆಸೇರಿದವರು ಎದ್ದು ಕುಳತು ಕೆಲ್ಸ ಮಾಡುವಂತಹ ದೈವಿಕ ಶಕ್ತಿ ಶ್ರೀಗಳಲ್ಲಿತ್ತು.

ಗುರುಗಳ ದಿನಚರಿ
ಬೆಳಗಿನ ಜಾವ 2:15 ಕ್ಕೆ ನಿದ್ದೆಯಿಂದ ಎಚ್ಚರ
2:15 – 2:45 ಶರಣ ಸಂತರ ತತ್ವ ಪಠಣ
2:45 – 3:00 ಸ್ನಾನಾದಿ ನಿತ್ಯವಿಧಿ
3:00 – 5:30 ಶಿವಪೂಜೆ ಲಘುಪ್ರಸಾದ ಸ್ವೀಕಾರ
5:30 – 6: 00 ಸಾಮೂಹಿಕ ಪ್ರಾರ್ಥನೆ
6:15 – 7:10 ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮತ್ತು ಸಂಸ್ಕೃತ ಪಾಠ ಭೋಧನೆ
7.10 – 7:40 ದಿನಪತ್ರಿಕೆ ಓದುವ ಹವ್ಯಾಸ
8:40 – 9:00 ಟಪಾಲು ಪರಿಶೀಲನೆ
9:00 – 9:10 ಪ್ರಸಾದ ವಸ್ತು ಪರಿಶೀಲನೆ
9:10 – 9:30 ಶ್ರೀ ಕ್ಷೇತ್ರದ ಕಾರ್ಯವೀಕ್ಷಣೆ
9:30 – 10:30 ಶ್ರೀಗಳಿಂದ ಪತ್ರಗಳಿಗೆ ಉತ್ತರ
10:30 – 10:45 ವಿದ್ಯಾರ್ಥಿಗಳ ಊಟದ ವ್ಯವಸ್ಥೆ ಪರಿಶೀಲನೆ
10:45 – 12:00 ಭಕ್ತಾದಿಗಳಿಗೆ ಸಂದರ್ಶನ
12:00 – 1:00 ಯಂತ್ರಧಾರಣೆ
1:00 – 2:30 ಭಕ್ತಾದಿಗಳಿಗೆ ಸಂದರ್ಶನ
2:30 – 3:30 ಪೂಜೆ ಮತ್ತು ಪ್ರಸಾದ ಸ್ವೀಕಾರ
3:30 – 5:30 ಸಂಸ್ಥೆಗಳ ಕಾರ್ಯಚಟುವಟಿಕೆ ಪರಿಶೀಲನೆ
5:30 – 5:45 ಪ್ರಸಾದ ಸಿದ್ದತೆ ಪರಿಶೀಲನೆ
5:45 – 6:30 ಗದ್ದೆ ತೋಟಗಳ ಪರಿಶೀಲನೆ
6:30 – 7:00 ವಿದ್ಯಾರ್ಥಿಗಳೊಂದಿಗೆ ಸಾಮೂಹಿಕ ಪ್ರಾರ್ಥನೆ
7:00 – 7:15 ವಿದ್ಯಾರ್ಥಿಗಳಿಗೆ ಆರ್ಶೀವಚನ
7:15 – 7:45 ಭಕ್ತಾದಿಗಳ ಸಂದರ್ಶನ
7:45 – 8:00 ಪ್ರಸಾದ ನಿಲಯ ವ್ಯವಸ್ಥೆಯ ವೀಕ್ಷಣೆ
8:00 – 8:30 ಕಾರ್ಯಾಲಯ ವ್ಯವಹಾರ
8:30 – 8:45 ಶರಣರ ತತ್ವಪಠಣ
8:45 – 9:00 ಸ್ನಾನ
9:00 – 10:00 ಪೂಜೆ, ಲಘು ಪ್ರಸಾದ
10:00 – 10:30 – ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಯ ಮೇಲ್ವಿಚಾರಣೆ
10:30 – 10:45 ದಿನಚರಿ ಬರೆಯುವುದು
11 ಗಂಟೆಗೆ – ನಿದ್ರೆ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *