ಮತ್ತೆ ನಟಿ ರಮ್ಯಾ ವಿರುದ್ಧ ರೊಚ್ಚಿಗೆದ್ದ ಕನ್ನಡ ಅಭಿಮಾನಿಗಳು!

Public TV
2 Min Read

ಬೆಂಗಳೂರು: ಮಂಡ್ಯದ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ತಮಿಳು ನಟ ಧನುಷ್ ಅವರ ಅಭಿಮಾನದ ಹಾಡಿಗೆ ಟ್ವೀಟ್ ಮಾಡಿ ಶುಭ ಕೋರಿದ್ದಕ್ಕೆ ಮತ್ತೊಮ್ಮೆ ಕನ್ನಡಿಗರು ರಮ್ಯಾ ವಿರುದ್ಧ ರೊಚ್ಚಿಗೆದಿದ್ದಾರೆ.

ತಮಿಳು ನಟ ಧನುಷ್ ಅಭಿನಯದ ‘ಮಾರಿ 2’ ಸಿನಿಮಾದ ‘ರೌಡಿ ಬೇಬಿ..’ ಹಾಡು ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ 10 ಕೋಟಿ ಹಿಟ್ಸ್ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾದ ಹಾಡಿಗೆ ನಟಿ ರಮ್ಯಾ, ”ಎಂತಹ ಹಾಡು ಡಿ!, ಹಾಡು 100 ಮಿಲಿಯನ್ ಆಗಿದೆ. ಯುವನ್ ಶಂಕರ್ ರಾಜ್ ನಿಮ್ಮ ಬಗ್ಗೆ ಬಹಳ ಖುಷಿ ಆಗುತ್ತಿದೆ.” ಎಂದು ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದಾರೆ.

ಇತ್ತೀಚೆಗೆ ನಟ ದರ್ಶನ್ ಅವರ ‘ಯಜಮಾನ’ ಸಿನಿಮಾದ ಹಾಡು ಹಾಗೂ ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾದ ಟೀಸರ್ ಕೂಡ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿ ಯಶಸ್ವಿಯಾಗಿದೆ. ಆದರೆ ರಮ್ಯಾ ಅವರು ಈ ಸಿನಿಮಾ ಬಗ್ಗೆ ಏನು ಮಾತನಾಡಲಿಲ್ಲ. ಅಷ್ಟೇ ಅಲ್ಲದೇ ಭಾರತದಾದ್ಯಂತ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದರೂ ಈ ಸಿನಿಮಾದ ಬಗ್ಗೆಯೂ ಟ್ವೀಟ್ ಮಾಡಿ ಶುಭಾಶಯ ಹೇಳಿರಲಿಲ್ಲ. ಆದರೆ ಇದೀಗ ರಮ್ಯಾ ತಮಿಳು ಸಿನಿಮಾ ಬಗ್ಗೆ ಮಾತ್ರ ಹೊಗಳಿದ್ದು ಕನ್ನಡ ಅಭಿಮಾನಿಗಳ ಕಣ್ಣು ಕೆಂಪಗೆ ಮಾಡಿದೆ.

https://twitter.com/BeingChanduSonu/status/1086941156729147392

ರಮ್ಯಾ ಟ್ವೀಟ್ ಮಾಡಿ ತಮಿಳು ಸಿನಿಮಾಗೆ ಶುಭಾಶಯ ಕೋರಿದ ತಕ್ಷಣ ಕನ್ನಡಾಭಿಮಾನಿಗಳು ಆಕ್ರೋಶಗೊಂಡು ಟ್ವಿಟ್ಟರ್ ನಲ್ಲಿ ಕಿಡಿ ಕಾರುತ್ತಿದ್ದಾರೆ. “ಅಂಬಿ ಅಣ್ಣನ ಅಗಲಿಕೆಗೆ ಬಾರದೆ ದೊಂಬರಾಟ ಆಡಿ, ಮಾತೃಭಾಷೆಯಲ್ಲಿ ಯಶ್ ಅಭಿನಯದ ‘ಕೆಜಿಎಫ್’ ಸುದೀಪ್ ಅವರ ‘ಪೈಲ್ವಾನ್’ ಮತ್ತು ದರ್ಶನ್ ಅಭಿನಯದ ‘ಯಜಮಾನ’ ಇವಳ ಕಣ್ಣಿಗೆ ಕಂಡಿಲ್ಲ. ಪರಭಾಷೆಯ ಧನುಷ್ ನೆನಪಾದ ಅಲ್ಲವೆ?” ಎಂದು ಪ್ರಶ್ನೆ ಮಾಡಿದ್ದಾರೆ.

“ಈಕೆಗೆ ಕನ್ನಡವೇ ಜೀವನ ಕೊಟ್ಟಿದ್ದು. ಕನ್ನಡದ ಜನ ಸ್ಥಾನ ಗೌರವ ನೀಡಿದ್ದಾರೆ. ನಿನ್ನ ಇಮೇಜನ್ನೇ ಬದಲಾಯಿಸಿದ್ದು ಕನ್ನಡ. ಆದರೆ ತಾವು ಮಾತ್ರ ಪರ ಭಾಷೆ ಚಿತ್ರಗಳಿಗೆ ರೆಡ್ ಕಾರ್ಪೆಟ್ ಹಾಕಿ ಟ್ವೀಟ್ ಮಾಡೋದು ನೋಡಿದ್ದರೆ ಮನುಷ್ಯ ಅಂತ ಕರೆಸಿ ಕೊಳ್ಳಬೇಕು ಅಂದರೆ ಸ್ವಲ್ಪ ಆದರೂ ನಿಯತ್ತು ಇರಬೇಕು ಅಲ್ವ, ಬಿಡುವು ಇದ್ದಾಗ ಅಂಬಿ ನಿನಗೆ ವಯಸ್ಸಾಯ್ತೋ ನೋಡಿ” ಎಂದು ಕನ್ನಡಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *