ತೆಲುಗು ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟ ವಿಶಾಲ್

Public TV
3 Min Read

ಚೆನ್ನೈ: ತಮಿಳು ನಟ ವಿಶಾಲ್ ಕೃಷ್ಣ ಅವರು ತಲುಗಿನ ‘ಅರ್ಜುನ್ ರೆಡ್ಡಿ’ ಖ್ಯಾತಿಯ ಅನಿಶಾ ಅಲ್ಲ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಈ ಬಗ್ಗೆ ವಿಶಾಲ್ ತಮ್ಮ ಟ್ವಿಟ್ಟರಿನಲ್ಲಿ, “ಹೌದು. ನಾನು ತುಂಬಾ ಖುಷಿಯಾಗಿದ್ದೇನೆ. ಈಕೆಯ ಹೆಸರು ಅನಿಶಾ ಅಲ್ಲ ಹಾಗೂ ಆಕೆ ನನಗೆ ಯೆಸ್ ಎಂದು ಹೇಳಿದ್ದಾರೆ. ಈಗ ಇದು ಖಚಿತವಾಗಿದೆ. ಇದು ನನ್ನ ಜೀವನದ ಅತ್ಯಂತ ದೊಡ್ಡ ಪರಿವರ್ತನೆ. ಶೀಘ್ರದಲ್ಲೇ ದಿನಾಂಕವನ್ನು ನಿಗದಿ ಪಡಿಸುತ್ತೇವೆ” ಎಂದು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಈ ಸಿಹಿ ಸುದ್ದಿ ನೀಡಿದ್ದಾರೆ.

ಅನಿಶಾ ಕೂಡ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಶಾಲ್ ಜೊತೆಯಿರುವ ಫೋಟೋವನ್ನು ಹಾಕಿ ಅದಕ್ಕೆ, “ಜೀವನದಲ್ಲಿ ಈಗ ಒಂದು ಹೊಸ ವಿಷಯ ಶುರುವಾಗುತ್ತಿದೆ. ನೀವು ನನಗೆ ಎಲ್ಲವನ್ನು ಮಾಡಿದ್ದಕ್ಕೆ ಧನ್ಯವಾದಗಳು. ನನ್ನ ಬೆಳವಣಿಗೆ, ನನ್ನ ಕಲಿಕೆ, ನನ್ನ ಸ್ಫೂರ್ತಿ, ನನ್ನ ಸತ್ಯ, ನನ್ನ ನೋವು, ನನ್ನ ಶಕ್ತಿ ಎಲ್ಲದರಲ್ಲೂ ಭಾಗಿಯಾಗಿದ್ದೀರಿ. ಹಾಗಾಗಿ ನಾನು ಈ ಸ್ಥಾನದಲ್ಲಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ.

 

View this post on Instagram

 

Happy Sankranti! To the start of something new. Thank you all for everything you’ve done; Been a part of my growth, my learning, my observations, my inspiration, my truth, my hurt, my strength, my reason or all that has brought me to where I am today, who I am today. Soon enough, I will be on a new journey and I yearn to live up to all of my dreams and goals and the challenges I have put up for myself. I finally found somebody to go down the path of life with, loving him and life with true passion. I look up to this man for all that he stands for and for all of his heart. I vow to give back to him, the families and the people around with this step forward. I vow to be the best that I can be, intention towards collective learning, love and moral value. #LoveAlways

A post shared by Anisha Alla (@bluewatermelon17) on

ತಮ್ಮ ಮದುವೆ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ವಿಶಾಲ್, “ನಿಶ್ಚಿತಾರ್ಥದ ಹಾಗೂ ಮದುವೆಯ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಆದರೆ ಈ ವರ್ಷದಲ್ಲೇ ನಾವು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ. ಶುಕ್ರವಾರ ನಮ್ಮಿಬ್ಬರ ಕುಟುಂಬದವರು ಒಟ್ಟಿಗೆ ಸೇರಿ ನಮ್ಮ ಮದುವೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅದಾದ ಬಳಿಕವೇ ನಾನು ನನ್ನ ಮದುವೆಯ ದಿನಾಂಕವನ್ನು ಘೋಷಿಸುತ್ತೇನೆ” ಎಂದು ಹೇಳಿದ್ದಾರೆ.

ಅನಿಶಾ ಅಲ್ಲ ಕೇವಲ 2 ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ. 2016ರಲ್ಲಿ ಬಿಡುಗಡೆಯಾದ ‘ಪೆಳ್ಳಿ ಚೂಪುಲು’ ಚಿತ್ರದಲ್ಲಿ ಅನಿಶಾ ನಟಿಸಿದ್ದರು. ಇದಾದ ಬಳಿಕ 2017ರಲ್ಲಿ ಬಿಡುಗಡೆ ಆಗಿದ್ದ ‘ಅರ್ಜುನ್ ರೆಡ್ಡಿ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *