31 ವರ್ಷಗಳ ಬಳಿಕ ತವರು ನೆಲದಲ್ಲಿ ಫಾಲೋಆನ್ ಎದುರಿಸಿದ ಆಸೀಸ್ – ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಟೀಂ ಇಂಡಿಯಾ

Public TV
2 Min Read

ಸಿಡ್ನಿ: ಟೀಂ ಇಂಡಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 300 ರನ್ ಗಳಿಗೆ ಅಲೌಟ್ ಆಗಿರುವ ಆಸೀಸ್ ತಂಡ ಫಾಲೋಆನ್‍ಗೆ ಒಳಗಾಗಿದ್ದು, 31 ವರ್ಷಗಳ ಬಳಿಕ ತವರು ನೆಲದಲ್ಲಿ ಆಸೀಸ್ ಫಾಲೋಆನ್ ಎದುರಿಸಿದೆ.

ಟೆಸ್ಟ್ ಪಂದ್ಯದ 4ನೇ ದಿನದಾಟದ ವೇಳೆ ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 300 ರನ್ ಗಳಿಗೆ ಅಲೌಟ್ ಆಯ್ತು, ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿ 4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದೆ. ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 322 ರನ್ ಗಳ ಮುನ್ನಡೆಯನ್ನು ಪಡೆದಿತ್ತು. ಈ ಮೊತ್ತ ಆಸೀಸ್ ನೆಲದಲ್ಲಿ ಇದುವರೆಗೂ ಪಡೆದ ತಂಡ ಪಡೆದಿರುವ ಬಹೃತ್ ಮುನ್ನಡೆಯಾಗಿದೆ. ಸದ್ಯ ಅಂತಿಮ ದಿನದಾಟದಲ್ಲಿ ಆಸೀಸ್ ಇನ್ನಿಂಗ್ಸ್ ಮುನ್ನಡೆಗೆ 10 ವಿಕೆಟ್ ಗಳಲ್ಲಿ 316 ರನ್ ಗಳ ಅಗತ್ಯವಿದೆ.

ಈ ಹಿಂದೆ ಟೀಂ ಇಂಡಿಯಾ 1988 ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಫಾಲೋಆನ್ ನೀಡಿತ್ತು, ಅಂದು ಕೂಡ ಸಿಡ್ನಿ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲೇ ನಡೆದಿತ್ತು. ಅದೇ ವರ್ಷ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕೂಡ ಫಾಲೋಆನ್ ನೀಡಿತ್ತು, ಇದಾದ ಬಳಿಕ 172 ಟೆಸ್ಟ್ ಪಂದ್ಯಗಳನ್ನು ತವರು ನೆಲದಲ್ಲಿ ಆಡಿರುವ ಆಸೀಸ್ ಒಮ್ಮೆಯೂ ಫಾಲೋಆನ್ ಪಡೆದಿರಲಿಲ್ಲ.

ಉಳಿದಂತೆ ಆಸೀಸ್ ವಿರುದ್ಧ 4 ಬಾರಿ ಮಾತ್ರ ಇಂಡಿಯಾ ಫಾಲೋಆನ್ ವಿಧಿಸಿದೆ. 1979-80 ರಲ್ಲಿ ಭಾರತದಲ್ಲಿ ನಡೆದ ಡೆಲ್ಲಿ ಮತ್ತು ಮುಂಬೈ ಟೆಸ್ಟ್ ಪಂದ್ಯಗಳ ವೇಳೆ ಇದು ಸಾಧ್ಯವಾಗಿತ್ತು. ಮುಖ್ಯವಾಗಿ 2005 ರ ಬಳಿಕ ಆಸೀಸ್ ತಂಡ ಟೆಸ್ಟ್ ಪಂದ್ಯದಲ್ಲಿ ಫಾಲೋಆನ್ ಪಡೆದಿರಲಿಲ್ಲ.

ಟೀಂ ಇಂಡಿಯಾ ಈ ಹಿಂದೆ 1998 ರ ಈಡನ್ ಗಾರ್ಡನ್ ಟೆಸ್ಟ್ ಪಂದ್ಯದಲ್ಲಿ 400 ರನ್ ಗಳ ಮುನ್ನಡೆ ಪಡೆದಿತ್ತು. ಆಸೀಸ್ ನೆಲದಲ್ಲಿ ಪರಿಗಣಿಸುವುದಾದರೆ ಮೆಲ್ಬರ್ನ್ ಟೆಸ್ಟ್ ಪಂದ್ಯದ ವೇಳೆ 292 ರನ್ ಮುನ್ನಡೆಯೇ ಭಾರತಕ್ಕೆ ದೊರೆತ 4ನೇ ಬೃಹತ್ ಮೊತ್ತವಾಗಿದೆ. ಇದರೊಂದಿಗೆ ಈ ಬಾರಿಯ ಟೆಸ್ಟ್ ಟೂರ್ನಿಯಲ್ಲಿ 2 ಬಾರಿ ಟೀಂ ಇಂಡಿಯಾ ಬೃಹತ್ ಮುನ್ನಡೆಯಯನ್ನು ಪಡೆದಿರುವ ಸಾಧನೆ ಮಾಡಿದೆ.

ಕುಲ್ದೀಪ್ ಯಾದವ್ 5 ವಿಕೆಟ್: ಟೀಂ ಇಂಡಿಯಾ ಚೈನಾಮನ್ ಖ್ಯಾತಿಯ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ಪಂದ್ಯದಲ್ಲಿ 5/99 ವಿಕೆಟ್ ಪಡೆದ ಸಾಧನೆ ಮಾಡಿದ್ದು, ಆಡಿರುವ 6 ಟೆಸ್ಟ್ ಟೂರ್ನಿಯಲ್ಲಿ 2ನೇ ಬಾರಿ ಬಾರಿಗೆ 5 ವಿಕೆಟ್ ಪಡೆದ ಹೆಗ್ಗಳಿಕೆ ಪಡೆದಿದ್ದಾರೆ.

ಆಸೀಸ್ ಟೆಸ್ಟ್ ನೆಲದಲ್ಲಿ 71 ವರ್ಷಗಳಿಂದ ಟೆಸ್ಟ್ ಗೆಲುವಿನ ಸವಿ ಪಡೆಯಲು ಕಾಯುತ್ತಿರುವ ಟೀಂ ಇಂಡಿಯಾ ಮೊದಲ ಬಾರಿಗೆ ಗೆಲುವಿನ ಸಿದ್ಧತೆ ನಡೆಸಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಇತಿಹಾಸ ಸೃಷ್ಟಿಸುವುದು ನಿಚ್ಚಳವಾಗಿದೆ.

ಆಸೀಸ್ ತಂಡದ ಆರಂಭಿಕರಾದ ಖವಾಜ 4 ರನ್ ಹಾಗೂ ಹ್ಯಾರಿಸ್ 2 ರನ್ ಗಳಿಸಿ ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇತ್ತ ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 5 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ಜಡೇಜಾ ತಲಾ 2 ಹಾಗೂ ಬುಮ್ರಾ 1 ವಿಕೆಟ್ ಪಡೆದು ಮಿಂಚಿದ್ದಾರೆ.

https://twitter.com/telegraph_sport/status/1081410867449733120?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *