ಆಸ್ತಿಗಾಗಿ ಹೆತ್ತ ತಂದೆ, ತಾಯಿಯನ್ನೇ ಥಳಿಸಿದ ಮಕ್ಕಳು – ವಿಡಿಯೋ ಇದ್ದರೂ ಕ್ರಮಕೈಗೊಳ್ಳದ ಪೊಲೀಸ್!

Public TV
1 Min Read

ದಾವಣಗೆರೆ: ಆಸ್ತಿಗಾಗಿ ಹೆತ್ತ ತಂದೆ ತಾಯಿಗೆ ಹೊಲದಲ್ಲೇ ಮೂವರು ಪುಂಡ ಮಕ್ಕಳು ಥಳಿಸಿರುವ ಘಟನೆಯ ಜಿಲ್ಲೆಯ ನ್ಯಾಮತಿ ತಾಲೂಕಿನ ಬಸವನಹಳ್ಳಿಯಲ್ಲಿ ನಡೆದಿದೆ.

ವೃದ್ಧ ಬಸಪ್ಪ ಹೆತ್ತ ಮಕ್ಕಳಿಂದ ಹಲ್ಲೆಗೊಳಗಾದ ತಂದೆಯಾಗಿದ್ದು, ಬಸಪ್ಪ ಅವರ ಮೂವರು ಮಕ್ಕಳ ಒಟ್ಟಿಗೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದ್ದು, ವಿಡಿಯೋ ಇದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ನಡೆದಿದ್ದೇನು?
ಬಸಪ್ಪ ಅವರಿಗೆ ಐವರು ಮಕ್ಕಳಿದ್ದು, ಅವರು ಹೊಂದಿದ್ದ ಹತ್ತು ಎಕರೆ ಜಮೀನಿನಲ್ಲಿ ಪ್ರತಿಯೊಬ್ಬರಿಗೂ ಪಾಲು ನೀಡಿದ್ದರು. ಉಳಿದ 1 ಮುಕ್ಕಾಲು ಎಕರೆ ಭೂಮಿಯಲ್ಲಿ ಸ್ವತಃ ಕೃಷಿ ಮಾಡಲು ನಿರ್ಧರಿಸಿದ್ದರು. ಆದರೆ ಬಸಪ್ಪ ಅವರು ಈ ಜಮೀನಿನಲ್ಲಿ ಉಳುಮೆಗೆ ಹೋದಾಗ ಮಕ್ಕಳಾದ ಕುಮಾರ್, ಚಂದ್ರಾ, ಸಿದ್ದೇಶ್ ಹಲ್ಲೆ ನಡೆಸಿದ್ದಾರೆ. ಇತ್ತ ತಂದೆಯ ಬೆಂಬಲಕ್ಕೆ ನಿಂತ ಬೀರೇಶ್ ಹಾಗೂ ಗಜೇಂದ್ರ ಮೇಲೂ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ತಂದೆ ಹಾಗೂ ಇಬ್ಬರು ಮಕ್ಕಳು ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕುರಿತು ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ಸ್ವೀಕರಿಸಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ನ್ಯಾಮತಿ ಠಾಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

https://www.youtube.com/watch?v=Wvj0Pc21yoA

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *