ಕಳೆದ ವರ್ಷದ ಪ್ರಶ್ನೆ ಪತ್ರಿಕೆಯನ್ನೇ ಈ ವರ್ಷವೂ ಕೊಟ್ಟ ಮೈಸೂರು ವಿವಿ

Public TV
1 Min Read

ಮೈಸೂರು: ಕಳೆದ ವರ್ಷದ ಪ್ರಶ್ನೆ ಪತ್ರಿಕೆಯ ಒಂದೆರಡು ಪ್ರಶ್ನೆಗಳು ಪ್ರಸಕ್ತ ಸಾಲಿನ ಪ್ರಶ್ನೆ ಪತ್ರಿಕೆಯಲ್ಲಿ ಪುನರಾವರ್ತನೆ ಯಾಗುವುದು ಸಾಮಾನ್ಯ. ಆದರೆ ಮೈಸೂರು ವಿವಿಯಲ್ಲಿ ಮಾತ್ರ ಕಳೆದ ವರ್ಷದ ಪ್ರಶ್ನೆ ಪತ್ರಿಕೆಯನ್ನೇ ಯಾಥವತ್ ಆಗಿ ಪ್ರಸಕ್ತ ವರ್ಷವೂ ರಿಪೀಟ್ ಆಗಿದೆ.

ಸೋಮವಾರ ಮೈಸೂರು ವಿವಿಯ ಮೊದಲ ಸೆಮಿಸ್ಟರ್ ಎಂಎಡ್ ವಿಷಯದ ಶಿಕ್ಷಣ ವಿಷಯ ಕುರಿತ introduction of education studies exam ನಡೆದಿದೆ. ಈ ಪರೀಕ್ಷೆಯಲ್ಲಿ ಮೈಸೂರು ವಿವಿ ತನ್ನ ಸೋಮಾರಿತನವನ್ನು ಪ್ರದರ್ಶಿಸಿದೆ. ಒಂದಲ್ಲ ಎರಡಲ್ಲ ಸಿರಿಯಲ್ ನಂಬರ್ ಸಮೇತ ಕಳೆದ ವರ್ಷದ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳನ್ನೇ ಈ ವರ್ಷವೂ ಮುದ್ರಿಸಿ ಕೊಟ್ಟಿದೆ.

2017ರಲ್ಲಿ ಕೊಟ್ಟ ಪ್ರಶ್ನೆ ಪತ್ರಿಕೆಯನ್ನೆ 2018ರ ಪರೀಕ್ಷೆಗೆ ಮರು ಮುದ್ರಿಸಿ ಕೊಟ್ಟಿದೆ. ಈ ಮೂಲಕ ಮೈಸೂರು ವಿವಿಯೂ ಪ್ರಶ್ನೆ ಪತ್ರಿಕೆ ತಯಾರಿಕೆಗೂ ಈ ಮಟ್ಟದ ಸೋಮಾರಿತನವೇ ಅಥವಾ ಇದು ಬೇಜಾವಾಬ್ದಾರಿಯೇ ಎನ್ನುವ ಪ್ರಶ್ನೆ ಎದ್ದಿದೆ.

ಪ್ರಶ್ನೆ ಪತ್ರಿಕೆಯಲ್ಲಿ ಎಡವಟ್ಟು ಮಾಡಿದ್ದ ಬಗ್ಗೆ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಒಪ್ಪಿಕೊಂಡಿದ್ದು, 2017 ಪ್ರಶ್ನೆ ಪತ್ರಿಕೆ ಪುನರಾವರ್ತನೆಯಾಗಿದೆ. ಈ ಬಗ್ಗೆ ನನಗೂ ಮಾಹಿತಿ ಲಭ್ಯವಾಗಿದೆ. ಪರೀಕ್ಷೆಯ ಮಂಡಳಿ ಇದಕ್ಕೆಲ್ಲ ಹೊಣೆಯಾಗುತ್ತದೆ. ತಕ್ಷಣವೇ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *