ಕೆಜಿಎಫ್ ಚಿತ್ರಕ್ಕೆ ಬ್ಯಾನರ್ ಹಾಕಿ ದರ್ಶನ್ ಫಾನ್ಸ್ ಬೆಂಬಲ- ಒಂದಾದ ಅಣ್ತಾಮ್ಮಾಸ್

Public TV
1 Min Read

ಬೆಂಗಳೂರು: ವಿಶ್ವಾದ್ಯಂತ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್’ ಇಂದು ಬಿಡುಗಡೆಯಾಗಿದೆ. ಕೆಜಿಎಫ್ ಚಿತ್ರಕ್ಕಾಗಿ ಅಣ್ತಮ್ಮಾಸ್ ಫ್ಯಾನ್ಸ್ ಒಂದಾಗಿದ್ದಾರೆ. ಚಂದನವನದ ಹೆಮ್ಮೆಯ ಸಿನಿಮಾ ಕೆಜಿಎಫ್ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಯಶ್ ಚಿತ್ರಕ್ಕೆ ಶುಭ ಕೋರಿದ್ದಾರೆ.

ನಗರದಾದ್ಯಂತ ಹಲವೆಡೆ ದರ್ಶನ್ ಅಭಿಮಾನಿಗಳು ಕೆಜಿಎಫ್ ಚಿತ್ರದ ಬ್ಯಾನರ್ ಹಾಕಿ ವಿಶೇಷವಾಗಿ ಬೆಂಬಲ ಸೂಚಿಸುತ್ತಿದ್ದಾರೆ. ಕೆಜೆಎಫ್ ಚಿತ್ರ ಸ್ಟಾರ್ ಅಭಿಮಾನಿಗಳ ಬಣವನ್ನು ಒಗ್ಗೂಡಿಸಿದ ಕನ್ನಡದ ಹೆಮ್ಮೆಯ ಚಿತ್ರ ಎಂದು ಹೇಳಲಾಗುತ್ತಿದೆ. ಕನ್ನಡದ ಚಿತ್ರ ವಿಶ್ವಾದ್ಯಂತ ಹೆಸರು ಮಾಡಬೇಕು ಎಂಬ ಕಾರಣದಿಂದ ಸಮಸ್ತ ಕನ್ನಡ ಚಿತ್ರ ರಸಿಕರೂ ಒಗ್ಗಟ್ಟಾಗಿ ಕೆಜಿಎಫ್ ಗೆ ಬೆಂಬಲ ಸೂಚಿಸುತ್ತಿದ್ದಾರೆ.

ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಶಕ್ತಿಯುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.

ಕೆಜಿಎಫ್ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಕೆಜಿಎಫ್ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದಲ್ಲಿ ನಟಿ ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನಂತ್ ನಾಗ್ ಹಾಗೂ ವಸಿಷ್ಠ ಸಿಂಹ ನಟಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *