4,337 ಮತ ಬಿದ್ದಿದ್ರೆ ಮಧ್ಯಪ್ರದೇಶದಲ್ಲಿ ಮತ್ತೆ ಅರಳುತಿತ್ತು ಕಮಲ!

Public TV
1 Min Read

ಭೋಪಾಲ್: ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳು 7 ಕ್ಷೇತ್ರಗಳಲ್ಲಿ ಒಟ್ಟು 4,337 ಮತಗಳನ್ನು ಪಡೆದಿದ್ದರೆ ಮತ್ತೆ ಮಧ್ಯಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತಿತ್ತು.

ಮಂಗಳವಾರ ಪ್ರಕಟಗೊಂಡ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಸತತ 15 ವರ್ಷಗಳಿಂದ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿತ್ತು. 2013ರಲ್ಲಿ 230 ವಿಧಾನಸಭಾ ಕ್ಷೇತ್ರದಲ್ಲಿ 165 ಸ್ಥಾನ ಪಡೆದಿದ್ದ ಬಿಜೆಪಿಗೆ ಈ ಬಾರಿ 109 ಸ್ಥಾನಗಳನ್ನು ಗಳಿಸುವಲ್ಲಿ ಮಾತ್ರವೇ ಶಕ್ತವಾಗಿತ್ತು.

ಚುನಾವಣಾ ಆಯೋಗದ ಮಾಹಿತಿಗಳ ಪ್ರಕಾರ ಬಿಜೆಪಿ 10 ವಿಧಾನಸಭಾ ಕ್ಷೇತ್ರಗಳಲ್ಲಿ 1,000 ಕ್ಕಿಂತ ಕಡಿಮೆ ಮತಗಳ ಮೂಲಕ ಸೋಲನ್ನು ಅನುಭವಿಸಿದೆ. ಒಂದು ವೇಳೆ ಬಿಜೆಪಿಗೆ 4,337 ಮತಗಳು ಲಭಿಸಿದ್ದರೆ, ಮತ್ತೊಮ್ಮೆ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿದ್ದರು.

ಯಾವೆಲ್ಲಾ ಕ್ಷೇತ್ರಗಳು ಹಾಗೂ ಮತಗಳು ಅಂತರ ಎಷ್ಟು?
ಗ್ವಾಲಿಯರ್ 121, ಸುವಾಸರಾ 350, ಜಬಲ್‍ಪುರ್ ಉತ್ತರ 578, ರಾಜ್‍ನಗರ 732, ದಾಮೋಹ್ 798, ಬಿಹೋರಾ 826, ರಾಜ್‍ಪುರ್ 932 ಮತಗಳ ಅಂತರದಿಂದ ಸೋತಿದೆ. ಈ ಚುನಾವಣೆಯಲ್ಲಿ ಒಟ್ಟು 109 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದ್ದು, ಒಂದು ವೇಳೆ ಮೇಲ್ಕಂಡ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೆ ಒಟ್ಟು 116 ಸ್ಥಾನಗಳನ್ನು ಪಡೆದು, ಅಧಿಕಾರದ ಗದ್ದುಗೆಯನ್ನು ಏರುತಿತ್ತು.

ಕಾಂಗ್ರೆಸ್ 114 ಸ್ಥಾನಗಳನ್ನು ಪಡೆದುಕೊಂಡಿದ್ದರೂ, ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಬಿಎಸ್‍ಪಿ, ಎಸ್‍ಪಿ ಹಾಗೂ ಪಕ್ಷೇತರರಿಂದ ಒಂದು ಸ್ಥಾನವನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ.

ಚುನವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ ಬಿಜೆಪಿ 1,56,42,980 (ಶೇ.41) ರಷ್ಟು ಮತಗಳನ್ನು ಪಡೆದುಕೊಂಡು ಮೊದಲನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ 1,55,95,153 (ಶೇ.40) ರಷ್ಟು ಮತವನ್ನು ಪಡೆದು ಎರಡನೇ ಸ್ಥಾನ ಗಳಿಸಿದೆ. ಉಳಿದಂತೆ ಪಕ್ಷೇತರ 22,18,230, ಬಿಎಸ್‍ಪಿ 19,11,642, ಜಿಜಿಪಿ 6,75,648, ಎಸ್‍ಪಿ 4,96,025, ಎಎಪಿ 2,53,101, ಎಸ್‍ಪಿಎಕೆಪಿ 1,56,486. ಬಿಎಎಸ್‍ಡಿ 78,692 ಹಾಗೂ ಬಿಎಸ್‍ಸಿಪಿ 71,278 ರಷ್ಟು ಮತಗಳನ್ನು ಪಡೆದುಕೊಂಡಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *