ಅರಿಶಿಣ ಶಾಸ್ತ್ರದಲ್ಲಿ ಸ್ಯಾಂಡಲ್‍ವುಡ್ ಜೋಡಿ – ವಿಡಿಯೋ ನೋಡಿ

Public TV
1 Min Read

ಚಿಕ್ಕಬಳ್ಳಾಪುರ: ಸ್ಯಾಂಡಲ್‍ವುಡ್‍ನ ತಾರಾಜೋಡಿ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಮದುವೆ ಬುಧವಾರ ನಡೆಯಲಿದ್ದು, ಇಂದು ನವಜೋಡಿಗೆ ಅರಿಶಿಣ ಶಾಸ್ತ್ರ ನಡೆದಿದೆ.

ದಿಗಂತ್ ಹಾಗೂ ಐಂದ್ರಿತಾ ರೇ ಅವರ ಮದುವೆ, ಕಂಕಣಬಲ, ಸಪ್ತಪದಿ ಕಾರ್ಯ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದ ತಪ್ಪಲಿನ ಡಿಸ್ಕವರಿ ವಿಲೇಜ್‍ನಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಇಂದು ನವ ವಧು-ವರರಿಗೆ ಅರಿಶಿಣ ಶಾಸ್ತ್ರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಅದರಂತೆಯೇ ಇಬ್ಬರಿಗೆ ಕುಟುಂಬದವರು ಅರಿಶಿಣ ಶಾಸ್ತ್ರವನ್ನು ಮಾಡಿ ಮುಗಿಸಿದ್ದಾರೆ.

ಅರಿಶಿಣ ಶಾಸ್ತ್ರದಲ್ಲಿ ವಧು ಐಂದ್ರಿತಾ ರೇ ಅವರು ಬಿಳಿ ಮತ್ತು ಗುಲಾಬಿ ಬಣ್ಣದ ಡಿಸೈನ್ ನಿಂದ ಕೂಡಿರುವ ಹಳದಿ ಬಣ್ಣದ ಸೀರೆ ಮತ್ತು ಕೆಂಪು ಬಣ್ಣದ ಬ್ಲೌಸ್ ಧರಿಸಿದ್ದರು. ಇನ್ನು ವರ ದಿಗಂತ್ ಬಿಳಿ ಬಣ್ಣದ ಪಂಚೆ ಮತ್ತು ನೀಲಿ ಬಣ್ಣದ ಒಂದು ಶಾಲು ಹಾಕಿದ್ದರು. ನಟಿ ಐಂದ್ರಿತಾ ಅವರು ಮೈಯೆಲ್ಲಾ ಅರಿಶಿಣ ಹಾಕಿಸಿಕೊಂಡು ಒಂದು ಸೋಫಾ ಮೇಲೆ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಈ ವೇಳೆ ದಿಗಂತ್-ಐಂದ್ರಿತಾ ಇಬ್ಬರು ಮಾತನಾಡಿ, ನಾನಿಬ್ಬರು ಇನ್ನು ಕೆಲವೇ ಕ್ಷಣಗಳಲ್ಲಿ ಮದುವೆಯಾಗುತ್ತಿದ್ದೇವೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮ ಮೇಲೆ ಹೀಗೆ ಇರಲಿ. ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಸಂಗೀತ ಕಾರ್ಯಕ್ರಮವೂ ಇಂದೇ ನಡೆಯಲಿದ್ದು, ತಮ್ಮ ಸಿನಿಮಾದ ಹಾಡುಗಳಿಗೆ ದಿಗಂತ್ – ಐಂದ್ರಿತಾ ಹೆಜ್ಜೆ ಹಾಕಲಿದ್ದಾರೆ. ಐಂದ್ರಿತಾ-ದಿಗಂತ್ ಕುಟುಂಬಸ್ಥರು ಇಂದಿನಿಂದ 13ರವರೆಗೂ ಇಡೀ ರೆಸಾರ್ಟ್ ಅನ್ನು ಸಂಪೂರ್ಣವಾಗಿ ಬುಕ್ ಮಾಡಿಕೊಂಡಿದ್ದಾರೆ. ತಾರಾ ಜೋಡಿಯ ವಿವಾಹಕ್ಕೆ ಕೇವಲ ಕುಟುಂಬಸ್ಥರು-ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ ಅಂತ ಮಾಹಿತಿ ಲಭಿಸಿದೆ.

Photo Courtesy: Sharechat

https://www.youtube.com/watch?v=Qy__FzJqA7I

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *