6 ಎಸೆತಕ್ಕೆ, 6 ಸಿಕ್ಸರ್‌ನೊಂದಿಗೆ ದ್ವಿಶತಕ ಸಿಡಿಸಿ ಆಸೀಸ್ ಆಟಗಾರ – ವಿಡಿಯೋ

Public TV
1 Min Read

ಸಿಡ್ನಿ: ಚುಟುಕು ಕ್ರಿಕೆಟ್‍ನಲ್ಲಿ 6 ಎಸೆತಕ್ಕೆ 6 ಸಿಕ್ಸರ್ ಸಿಡಿಸಿ ಟೀಂ ಇಂಡಿಯಾದ ಯುವರಾಜ್ ಸಿಂಗ್ ದಾಖಲೆ ಸಿಡಿ ಅಭಿಮಾನಿಗಳ ಮನಗೆದ್ದಿದ್ದರು. ಸದ್ಯ ಇದೇ ಮಾದರಿಯಲ್ಲಿ ಆಸೀಸ್‍ನ ಅಂಡರ್ 19 ತಂಡದ ಆಟಗಾರ 6 ಬಾಲಿಗೆ 6 ಸಿಕ್ಸರ್ ಸಿಡಿಸುವುದರೊಂದಿಗೆ ದ್ವಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.

ಆಸ್ಟ್ರೇಲಿಯಾ ಅಂಡರ್ 19 ಟೂರ್ನಿಯಲ್ಲಿ ನ್ಯೂ ಸೌಥ್ ವೇಲ್ಸ್ ಮೆಟ್ರೋ ತಂಡದ ಆಲಿವರ್ ಡೇವಿಸ್ ಈ ಸಾಧನೆಯನ್ನು ಮಾಡಿದ್ದು, ನಾರ್ಥನ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

ಪಂದ್ಯದಲ್ಲಿ 115 ಎಸೆತಗಳಲ್ಲಿ 207 ರನ್ ಸಿಡಿಸಿದ ಡೇವಿಸ್ ಅಂಡರ್ 19 ಚಾಂಪಿಯನ್‍ಶಿಪ್‍ನಲ್ಲಿ ದ್ವಿಶಕತ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಆರಂಭದಲ್ಲಿ ರಕ್ಷಣಾತ್ಮಕ ಆಟವಾಡಿದ ಡೇವಿಸ್ 74 ಎಸೆತಗಳಲ್ಲಿ ಶತಕ ಪೂರೈಸಿದರು. ಆ ಬಳಿಕ ಬಿರುಸಿನ ನಡೆಸಿ ಕೇವಲ 39 ಎಸೆತಗಳಲ್ಲಿ 100 ರನ್ ಸಿಡಿಸಿದರು. ಪಂದ್ಯದ 40ನೇ ಓವರ್ ನಲ್ಲಿ ಸತತ 6 ಎಸೆತಗಳಲ್ಲೂ ಸಿಕ್ಸರ್ ಸಿಡಿಸಿದರು. ಒಟ್ಟಾರೆ ಪಂದ್ಯದಲ್ಲಿ ಡೇವಿಸ್ 14 ಬೌಂಡರಿ, 17 ಸಿಕ್ಸರ್ ಸಿಡಿಸಿ ಮಿಂಚಿದರು. ಈ ಪಂದ್ಯವನ್ನು ನ್ಯೂ ಸೌಥ್ ವೇಲ್ಸ್ ತಂಡ 168 ರನ್ ಅಂತರದಲ್ಲಿ ಜಯ ಪಡೆಯಿತು.

ಈ ಮೊದಲು ಯುವರಾಜ್ ಸಿಂಗ್ ಸೇರಿದಂತೆ 10 ಮಂದಿಯಿಂದ ಒಂದೇ ಓವರಿನ 6 ಬಾಲಿಗೆ 6 ಸಿಕ್ಸರ್ ಸಿಡಿಸಿ ಸಾಧನೆ ಮಾಡಿದ್ದು, ಪ್ರಥಮ ದರ್ಜೆ ಪಂದ್ಯದಲ್ಲಿ ರವಿಶಾಸ್ತ್ರಿ, ಜೋಡರ್ನ್ ಕ್ಲಾಕ್, ರೋಸ್ ವೈಟ್ಲಿ, ರವೀಂದ್ರ ಜಡೇಜಾ, ವಿಂಡೀಸ್‍ನ ಸರ್ ಗ್ಯಾರಿಫೀಲ್ಡ್ ಸೋಬರ್ಸ್, ಆಸೀಸ್‍ನ ಮಾರ್ಕಸ್ ಸ್ಟೋಯಿನಿಸ್ ಹಾಗೂ ಟಿ20 ಯಲ್ಲಿ ಯುವರಾಜ್ ಸಿಂಗ್, ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್, ಅಭ್ಯಾಸ ಪಂದ್ಯದಲ್ಲಿ ಕಿರಣ್ ಪೋಲಾರ್ಡ್, ಜೂನಿಯರ್ ಕ್ರಿಕೆಟಿನಲ್ಲಿ ಶಾದೂರ್ಲ್ ಠಾಕೂರ್ ಈ ಸಾಧನೆ ಮಾಡಿದ್ದಾರೆ.

https://www.youtube.com/watch?v=yQ2VPF3lEUM

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

 

Share This Article
Leave a Comment

Leave a Reply

Your email address will not be published. Required fields are marked *