– ಪೊಲೀಸ್ ಠಾಣೆ ಮೆಟ್ಟಿಲೇರಿದ ನೊಂದ ಕುಟುಂಬ
ಬಳ್ಳಾರಿ: ಹಜ್ ಯಾತ್ರೆಗೆ ಹೋಗೋಕೆ ಅದೆಷ್ಟೋ ಮುಸ್ಲಿಮರು ಸಾಕಷ್ಟು ಹರಸಾಹಸ ಪಡುತ್ತಾರೆ. ಸಾಲ-ಸೂಲ ಮಾಡಿಯಾದ್ರೂ ಜೀವನದಲ್ಲೊಮ್ಮೆ ಹಜ್ ಯಾತ್ರೆ ಮಾಡಿ ಪುನೀತರಾಗೋ ಕನಸು ಕಾಣ್ತಾರೆ. ಆದ್ರೆ ಹಜ್ ಯಾತ್ರೆಗೆ ಕಳುಹಿಸುವುದಾಗಿ ನೂರಾರು ಜನರನ್ನು ನಂಬಿಸಿ ಮೋಸ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಇಲ್ಲಿನ ನೂರಾರು ಮುಸ್ಲಿಮ್ ಬಾಂಧವರಿಗೆ ಹಜ್ ಯಾತ್ರೆ ಹಾಗೂ ಉಮ್ರಾ ಆಸೆಯ ತೋರಿಸಿ ಮದನಿ ಟೂರ್ & ಟ್ರಾವಲ್ಸ್‍ನ ಅಬ್ದುಲ್ ಸುಬಾನ್ ಎಂಬಾತ ಲಕ್ಷಾಂತರ ರೂಪಾಯಿ ವಂಚಿಸಿ ಪಂಗನಾಮ ಹಾಕಿದ್ದಾನೆ. ಹಜ್ ಯಾತ್ರೆಗೆ 26, 30 ಹಾಗೂ 50 ಸಾವಿರ ರೂಪಾಯಿಯ ಪ್ಯಾಕೇಜ್ ಮಾಡಿದ್ದ ಮದನಿ, ನೂರಾರು ಜನರಿಂದ ಹಣ ಪಡೆದು ಬರೋಬ್ಬರಿ 30 ಲಕ್ಷ ರೂಪಾಯಿ ವಂಚಿಸಿದ್ದಾನೆ ಅಂತ ವಂಚನೆಗೆ ಒಳಗಾದ ಮಹ್ಮದ್ ಗೌಸ್ ಆರೋಪಿಸಿದ್ದಾರೆ.
ಹಜ್ ಹಾಗೂ ಉಮ್ರಾಗೆ ತೆರಳಲು ವೀಸಾ ಮಾಡಿಸಲು ಹಣ ಪಡೆದು ವಂಚಿಸಿದ್ದ ಅಬ್ದುಲ್ ಸುಬಾನ್ ಕೂಡ ಈ ಮೋಸದ ಬಲೆಯಲ್ಲಿ ಸಿಲುಕಿದ್ದಾನೆ. ವೀಸಾ ಮಾಡಿಸಲು ನೂರಾರು ಜನರಿಂದ ಹಣ ಪಡೆದಿದ್ದ ಅಬ್ದುಲ್ ಸುಬಾನ್ ಮುಂಬೈ ಮೂಲದ ಯೂಸೂಪ್ ಮುಜಾಹಿದ್‍ಗೆ ಎಲ್ಲರ ವೀಸಾ ಹಣ ನೀಡಿದ್ದ, ಯೂಸಪ್ ವೀಸಾ ಮಾಡಿಸದೆ ಎಲ್ಲರಿಗೂ ಕೈ ಎತ್ತಿದ್ರಿಂದ ತಾನೂ ಮೋಸ ಹೋಗಿದ್ದಾನೆ ಅಂತ ವಂಚನೆಗೊಳಗಾದ ಮತ್ತೊಬ್ಬ ವ್ಯಕ್ತಿ ಅಬ್ದುಲ್ ಸುಬಾನ್ ಹೇಳಿದ್ದಾರೆ.
ಹಜ್ ಯಾತ್ರೆಗೆ ಹೋಗಲು ಇಚ್ಛಿಸಿದ್ದ ಮುಸ್ಲಿಮರನ್ನು ಟಾರ್ಗೆಟ್ ಮಾಡಿಕೊಂಡ ಮದನಿ ಟೂರ್ & ಟ್ರಾವಲ್ಸ್‍ನ ಮೋಸ ಈಗ ಬಯಲಾಗಿದ್ದು, ನೊಂದ ಕುಟುಂಬಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv