ಬೆಂಗ್ಳೂರಿಗರೇ ಎಚ್ಚರ- ಇನ್ಮುಂದೆ ಬೇಕಾಬಿಟ್ಟಿ ಮನೆ ಕಟ್ಟಿದ್ರೆ ಶಿಕ್ಷೆಯ ಜೊತೆಗೆ ಬೀಳತ್ತೆ ಫೈನ್!

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಎಚ್ಚರವಾಗಿರಿ. ಯಾಕಂದ್ರೆ ಇನ್ನುಮುಂದೆ ಬೇಕಾಬಿಟ್ಟಿಯಾಗಿ ಮನೆ ಕಟ್ಟಿದ್ರೆ ಫೈನ್ ಕಟ್ಟೋಕೆ ಮತ್ತು ಶಿಕ್ಷೆ ಅನುಭವಿಸೋಕೆ ರೆಡಿಯಾಗಿರಿ.

ಅಧಿಕಾರಿಗಳ ಜೊತೆ ಶಾಮೀಲಾಗಿ ಅಕ್ರಮ ಕಟ್ಟಡ ಕಟ್ಟಿ ತೆರಿಗೆ ವಂಚನೆ ಜೊತೆ ನಕ್ಷೆ ಉಲ್ಲಂಘನೆ ಮಾಡುತ್ತಿದ್ದ ಬಿಲ್ಡರ್‍ಗಳು ಮತ್ತು ಅಧಿಕಾರಿಗಳಿಗೆ ಹೈಕೋರ್ಟ್ ಸರಿಯಾಗಿ ಚಾಟಿ ಬೀಸಿದೆ. ಹೈಕೋರ್ಟ್ ಚಾಟಿಗೆ ಹೆದರಿದ ಸರ್ಕಾರ ಕೆಎಂಸಿ ಕಾಯ್ದೆ ತಿದ್ದುಪಡಿ ತಂದು ಹೊಸ ಅಧಿಸೂಚನೆ ಕರುಡು ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

1 ತಿಂಗಳ ಕಾಲ ಸಾರ್ವಜನಿಕರ ಆಕ್ಷೇಪಣೆಗಳಿಗೆ ಸಮಯಾವಕಾಶ ನೀಡಿದ್ದು ಆಕ್ಷೇಪಣೆಗಳನ್ನು ನೋಡಿಕೊಂಡು ಅಂತಿಮ ಅಧಿಸೂಚನೆ ಹೊರಡಿಸುವುದಾಗಿ ಹೇಳಿದೆ. ಅಷ್ಟೇ ಅಲ್ಲದೇ ಕೇವಲ ಅಧಿಕಾರಿಗಳಿಗೆ ಮಾತ್ರವಲ್ಲದೇ ಅಕ್ರಮ ಕಟ್ಟಡ ಕಟ್ಟುವವರಿಗೂ ದಂಡ ಸಹಿತ ಶಿಕ್ಷೆ ಪ್ರಮಾಣದ ನಿಯಮಗಳು ರೆಡಿಯಾಗುತ್ತಿದೆ. ಮುಂದಿನ ವಿಚಾರಣೆ ವೇಳೆ ಅದರ ಪ್ರತಿಯನ್ನು ಸಹ ನೀಡುವುದಾಗಿ ಸರ್ಕಾರ ಹೇಳಿದೆ.

ಶಿಕ್ಷೆಯೇನು?:
2 ಸಾವಿರದಿಂದ 50 ಸಾವಿರದವರೆಗೆ ದಂಡ ವಿಧಿಸಲಾಗುವುದು. 3 ತಿಂಗಳಿಂದ 2 ವರ್ಷದವರೆಗೆ ಶಿಕ್ಷೆ ನೀಡಲಾಗುವುದು. ಅಲ್ಲದೇ ಕೆಲಸದಿಂದ ಶಾಶ್ವತ ವಜಾ, ಇತರೆ ಸೌಲಭ್ಯಗಳಿಗೆ ಕತ್ತರಿ ಹಾಕಲಾಗುವುದು. ಈ ಶಿಕ್ಷೆ ಕೇವಲ ಅಧಿಕಾರಿಗಳಿಗೆ ಮಾತ್ರವಲ್ಲ, ಅಕ್ರಮ ಕಟ್ಟಡ ಕಟ್ಟುವವರಿಗೂ ಇದೇ ಪ್ರಮಾಣದ ಶಿಕ್ಷೆ ವಿಧಿಸಲಾಗುವುದು.

ಅಕ್ರಮ ಕಟ್ಟಡ ಅಂತ ಸಾಬೀತಾದ್ರೆ ಇಡೀ ಕಟ್ಟಡ ಡೆಮಾಲಿಷನ್ ಮಾಡುವ ಸಾಧ್ಯತೆಗಳಿವೆ. ಅಲ್ಲದೆ ಶಾಶ್ವತ ನೀರು ಸಂಪರ್ಕ ಕರೆಂಟ್ ಸಂಪರ್ಕ ಬಂದ್ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಹೀಗೆ ಒಟ್ಟು 52 ಬಗೆಯ ನಿಯಮ ಉಲ್ಲಂಘನೆಗೆ ಶಿಕ್ಷೆ ಪ್ರಮಾಣ ಘೋಷಣೆಗೆ ತಿದ್ದುಪಡಿ ಮಾಡಬಹುದು. ಈ ಬಗ್ಗೆ ಮುಂದಿನ ವಿಚಾರಣೆ ವೇಳೆ ಕರುಡು ಪ್ರತಿ ಸಿದ್ಧಪಡಿಸುವುದಾಗಿ ಹೇಳಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *