ಸೈಕಲ್ ಸ್ಟ್ಯಾಂಡ್‍ನಲ್ಲಿ ಪದವಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

Public TV
1 Min Read

ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಕೊಠಡಿಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಹೊರಗಡೆ ಸೈಕಲ್ ಸ್ಟ್ಯಾಂಡ್‍ನಲ್ಲಿ ಕುಳಿತು ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಇಂಗ್ಲೀಷ್ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕೊಠಡಿಗಳ ಸಂಖ್ಯೆ ಕಡಿಮೆಯಾಗಿದೆ. ಆದರಿಂದ ಕಾಲೇಜ್ ಆವರಣದಲ್ಲಿದ್ದ ಸೈಕಲ್ ಸ್ಟ್ಯಾಂಡ್ ಹಾಗೂ ಗೋದಾಮ್‍ನಲ್ಲಿ ಕುಳಿತು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೊಠಡಿಗಳ ಕೊರತೆಯಿಂದ ಕಾಲೇಜ್ ಉಪನ್ಯಾಸಕರು ಬಾಡಿಗೆ ನೀಡಿ ಶಾಮಿಯಾನದ ಡೈನಿಂಗ್ ಟೇಬಲ್ ಬಾಡಿಗೆಗೆ ತರಲಾಗಿತ್ತು.

ಈ ಹಿಂದೆ ದಾವಣಗೆರೆಯ ಹರಪ್ಪನಹಳ್ಳಿಯಲ್ಲಿ ಶಾಮಿಯಾನ ಹಾಗೂ ಊಟದ ಟೇಬಲ್ ಬಾಡಿಗೆಗೆ ತಂದು ಕಾಲೇಜಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಿದ್ದರು. ಈಗ ಮತ್ತೆ ಅದೇ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ ಇದ್ದುದರಿಂದ ಮತ್ತೆ ಸೈಕಲ್ ಸ್ಟಾಂಡ್‍ನಲ್ಲಿ ಕೂರಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಿದ್ದಾರೆ.

ಸರಿಯಾಗಿ ಕೂರಲು ವ್ಯವಸ್ಥೆಯಿಲ್ಲದಿದ್ದರೂ ಕಷ್ಟದ ನಡುವೆಯೇ ವಿದ್ಯಾಥಿಗಳು ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿಗಳು ಇಷ್ಟೆಲ್ಲ ಕಷ್ಟ ಪಡುತ್ತಿದ್ದರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆ.

https://www.youtube.com/watch?v=dePLWc11H_M

Share This Article
Leave a Comment

Leave a Reply

Your email address will not be published. Required fields are marked *