ಬೆಳ್ಳಂಬೆಳಗ್ಗೆ ಶೌಚಾಲಯಕ್ಕೆ ತೆರಳಲು ಮಹಿಳೆಯರ ಹರಸಾಹಸ

Public TV
1 Min Read

ಬೆಳಗಾವಿ: ಬೆಳಗಾಯಿತೆಂದರೆ ಕಣ್ಣೀರು ಹಾಕ್ತಾರೆ ಬಹಿರ್ದೆಸೆಗೆ ತೆರಳಲು ಹರಸಾಹಸ ಮಾಡುತ್ತಾರೆ. ಒಂದೂವರೆ ಅಡಿಯ ಕಿಂಡಿಯಲ್ಲಿ ದಾಟುವ ಸರ್ಕಸ್ ಮಾಡುತ್ತಾರೆ. ದಿನನಿತ್ಯ ಶೌಚಾಲಯ ತೆರಳಲು ಮಹಿಳೆಯರು ಪರದಾಡುತ್ತಾರೆ. ದಿನನಿತ್ಯ ಮಹಿಳೆಯರ ಗೋಳು ಕೇಳುವವರೇ ಇಲ್ಲ.

ಇದು ಬೆಳಗಾವಿ ಮಹಾನಗರದ ಶ್ರೀನಗರ ಬಡಾವಣೆಯ ಮಹಿಳೆಯರ ಗೋಳು. ಮಳೆಗಾಲ ಬಂತೆದರೆ ಈ ಸಮಸ್ಯೆ ಇನ್ನೂ ಜಟಿಲಗೊಳ್ಳುತ್ತದೆ. ಮೇಲಿಂದ ಸುರಿಯುವ ಮಳೆ, ಕೆಳಗೆ ಕೊಳಚೆ, ರೊಜ್ಜು ಮಣ್ಣು ಆ ಕಡೆಯಿಂದ ರಭಸದಿಂದ ಬರುವ ನೀರಿನ ವಿರುದ್ಧ ದಿಕ್ಕಿನಲ್ಲಿ ಕಿಂಡಿಯನ್ನು ದಾಟಿ ಆ ಕಡೆ ಹೋಗಿ ಬಯಲು ಬಹಿರ್ದೆಸೆ ಮಾಡುವ ದೃಶ್ಯ ಊಹಿಸಿಕೊಳ್ಳಲು ಅಸಾಧ್ಯ.

ಇಂಥದೊಂದು ಕರುಣಾಜಕನ ಸ್ಟೋರಿಯನ್ನು ಬೆನ್ನಟ್ಟಿ ಹೊರಟ ಪಬ್ಲಿಕ್ ಟಿವಿ ತಂಡಕ್ಕೆ ಮೊದಲು ಮೂರು ದಿನ ಮಹಿಳೆಯರಿಗೆ ಸಮಜಾಯಿಸಿ ತಿಳಿ ಹೇಳಬೇಕಾಯಿತು. ಮಾನಕ್ಕೆ ಹೆದರಿ, ನಾಚಿಕೆಯಿಂದ ಮಹಿಳೆಯರು ಕ್ಯಾಮರಾ ಮುಂದೆ ಬರಲು ಹೇದರುತ್ತಿದ್ದರು.

ನಾವು ಬಹಳ ಸಲ ಬಹಿರ್ದೆಸೆಗೆ ಹೋಗಲು ಕಷ್ಟಪಡುತ್ತೇವೆ. ಹಾಗಾಂತ ನಾವು ಕಟ್ಟಡಗಳ ಮಧ್ಯೆ ಬಹಿರ್ದೆಸೆಗೆ ಹೋಗಲು ಆಗುವುದಿಲ್ಲ ಎಂದು ಮಹಿಳೆಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ. ಸಂಸದ ಹಾಗೂ ಮಾಜಿ ಶಾಸಕನ ಕ್ಷೇತ್ರದಲ್ಲಿ ಈ ಘಟನೆ ನಡೆದಿರುವುದು ವಿಪರ್ಯಾಸ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *