ದೀಪಿಕಾ ರಣವೀರ್ ಮದುವೆಯೇ ಆಗಿಲ್ಲ: ರಾಖಿ ಸಾವಂತ್

Public TV
1 Min Read

ಮುಂಬೈ: ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ರಾಖಿ ಸಾವಂತ್ ಈಗ ದೀಪಿಕಾ ಮತ್ತು ರಣವೀರ್ ಮದುವೆಯೇ ಆಗಿಲ್ಲವೆಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.

ಹೌದು, ಇತ್ತೀಚೆಗಷ್ಟೇ ಮದುವೆಯಾಗಿದ್ದ ದೀಪಿಕಾ ಹಾಗೂ ರಣವೀರ್ ಮದುವೆಯನ್ನೇ ರಾಖಿ ಸಾವಂತ್ ಪ್ರಶ್ನಿಸಿದ್ದಾಳೆ. ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ರಾಖಿ, ನನಗೆ ನಿಜವಾಗಲೂ ಏನೂ ಅರ್ಥವಾಗುತ್ತಿಲ್ಲ. ನೀವು ನಿಜವಾಗಿಯೂ ಮದುವೆಯಾಗಿದ್ದೀರಾ? ಸತ್ಯ ಹೇಳಿ. ಸಬ್ಯಸಾಚಿಯ ಸೂಟಿಂಗ್ಸ್ ಹಾಗೂ ಸೀರೆಯ ಜಾಹೀರಾತಿಗಾಗಿ ಫೋಟೋ ಶೂಟ್ ಮಾಡಿಸಿದ ಹಾಗೆ ಇದೆ. ಈ ಬಗ್ಗೆ ನೀವು ತಮಾಷೆ ಮಾಡುತ್ತಿದ್ದೀರಾ. ನನಗೆ ತಿಳಿದಿರುವ ಮಟ್ಟಿಗೆ ಇಬ್ಬರು ಒಳ್ಳೆಯ ಜೋಡಿಗಳು. ಆದರೆ ನೀವು ಸತ್ಯವಾಗಲೂ ಮದುವೆಯಾಗಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

https://www.instagram.com/p/BqckBUMB2sB/

ರಾಖಿ ಸಾವಂತ್ ತಮಾಷೆಗಾಗಿ ಈ ವಿಡಿಯೋ ಮಾಡಿದ್ದಾಳೆಂದು ಹೇಳಲಾಗುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ರಾಖಿಯ ಫೋಸ್ಟ್ ಗೆ ಸಾಕಷ್ಟು ಪರ-ವಿರೋಧಗಳ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ಮಹಿಳಾ ಕುಸ್ತಿ ಪಟು ಜೊತೆ ಸೆಣೆಸಾಡಲು ಹೋಗಿ ಸೊಂಟ ಮುರಿದುಕೊಂಡು ಆಸ್ಪತ್ರೆಗೆ ಸೇರಿದ್ದರು. ನನಗೆ ಉದ್ದೇಶ ಪೂರ್ವಕವಾಗಿಯೇ ನಟಿ ತನುಶ್ರೀ ದತ್ತಾ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾಳೆಂದು ಆರೋಪವನ್ನು ಮಾಡಿದ್ದರು. ಸದ್ಯ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ರಾಖಿ ಹೊಸದಾದ ವಿವಾದವನ್ನು ಸೃಷ್ಟಿಸಿದ್ದಾರೆ.

https://www.instagram.com/p/BqdLVUQBs1N/

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *