#Deepveer ಮದ್ವೆ ಫೋಟೋ ನೋಡೋ ತವಕದಲ್ಲಿ ಸ್ಮೃತಿ ಇರಾನಿ

Public TV
2 Min Read

-ಅಸ್ಥಿ ಪಂಜರ ಫೋಟೋ ಶೇರ್ ಮಾಡಿ ಬರೆದಿದ್ದು ಹೀಗೆ

ನವದೆಹಲಿ: ಬಾಲಿವುಡ್ ಅಂಗಳದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಬುಧವಾರ ಪಂಜಾಬಿ ಸಂಪ್ರದಾಯದಲ್ಲಿ ದೀಪಿಕಾ ಮತ್ತು ರಣ್‍ವೀರ್ ಮದುವೆ ನಡೆದಿದೆ. ಇಂದು ಕೊಂಕಣಿ ಸಂಪ್ರದಾಯದಲ್ಲಿ ಎರಡನೇ ಬಾರಿ ಮದುವೆ ನಡೆಯುತ್ತಿದೆ. ಆದರೆ ಇದುವರೆಗೂ ನವಜೋಡಿಯ ಒಂದು ಫೋಟೋ ಸಹ ಬಹಿರಂಗವಾಗಿಲ್ಲ. ಕಾರ್ಯಕ್ರಮದಲ್ಲಿ ಬಾಲಿವುಡ್ ಗಣ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರೂ, ಮದುವೆ ಫೋಟೋಗಳನ್ನು ಯಾರು ಬಹಿರಂಗಗೊಳಿಸುತ್ತಿಲ್ಲ. ಮದುವೆ ಫೋಟೋ ನೋಡಲು ಅಭಿಮಾನಿಗಳು ಎಷ್ಟು ಕಾಯತ್ತಿದ್ದರೋ, ಅದೇ ರೀತಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಫೋಟೋ ನೋಡುವ ತವಕದಲ್ಲಿದ್ದಾರೆ.

ಇನ್ ಸ್ಟಾಗ್ರಾಮ್ ನಲ್ಲಿ ಅಸ್ಥಿ ಪಂಜರದ ಫೋಟೋ ಅಪ್ಲೋಡ್ ಮಾಡಿಕೊಂಡಿರುವ ಸ್ಮೃತಿ ಇರಾನಿ, “ನೀವು ತುಂಬಾ ದಿನಗಳಿಂದ ಡೀಪ್‍ವೀರ್ ಮದುವೆ ಫೋಟೋ ನೋಡಲು ಕಾಯುತ್ತಿರುವ ಹಾಗಿದೆ” ಎಂದು ಫನ್ನಿ ಸಾಲುಗಳನ್ನು ಬರೆದುಕೊಂಡಿದ್ದಾರೆ. ಒಬ್ಬ ಸಾಮಾನ್ಯ ಅಭಿಮಾನಿಯ ರೀತಿಯಲ್ಲಿ ಸ್ಮೃತಿ ಇರಾನಿ ಅವರು ಫೋಟೋ ನೋಡಲು ಕಾಯುತ್ತಿದ್ದಾರೆ.

ಇಟಲಿಯ ಸುಂದರ ಪ್ರವಾಸಿ ತಾಣ ಲೇಕ್ ಕೊಮೊವಿನ ವಿಲ್ಲಾ ಡೆಲ್ ಬಲ್ಬಿಯಾನೆಲ್ಲೊದಲ್ಲಿ ಕೊಂಕಣಿ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಈ ವೇಳೆ ಕರಾವಳಿ ಚೆಲುವೆ ದೀಪಿಕಾ ಖ್ಯಾತ ಫ್ಯಾಷನ್ ಡಿಸೈನರ್ ಸಬ್ಯಾಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ್ದ ಬಿಳಿ ಮತ್ತು ಗೋಲ್ಡ್ ಕಾಂಬಿನೇಷನ್ ಉಡುಪಿನಲ್ಲಿ ಕಂಗೊಳಿಸಿದರು. ದೀಪ್‍ವೀರ್ ಮದುವೆಗಾಗಿ ವಿಲ್ಲಾ ಡೆಲ್ ಬಲ್ಬಿಯಾನೆಲ್ಲೊ ಕಟ್ಟಡವನ್ನು ಪೂರ್ತಿಯಾಗಿ ತಾಜಾ ಹೂವುಗಳಿಂದ ಅಲಂಕರಿಸಲಾಗಿತ್ತು. ಇವರಿಬ್ಬರ ವಿವಾಹ ಸಂಭ್ರಮಕ್ಕೆ ಬಾಲಿವುಡ್ ದಿಗ್ಗಜರಾದ ಶಾರೂಕ್ ಖಾನ್, ಫರಹಾ ಖಾನ್, ಸಂಜಯ್ ಲೀಲಾ ಬನ್ಸಾಲಿ ಸಾಕ್ಷಿಯಾದರು.

ಈಗಾಗಲೇ ನಿಗದಿಯಾಗಿರುವಂತೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಂದು ಉತ್ತರ ಭಾರತದ ಸಿಂಧ್ ಸಮುದಾಯದ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಈ ಸಮಾರಂಭದಲ್ಲಿ ದೀಪಿಕಾ ಕಡುಗೆಂಪು ಬಣ್ಣದ ಸಾಂಪ್ರದಾಯಿಕ ಬ್ರೈಡಲ್ ಲೆಹೆಂಗಾದಲ್ಲಿ ಕಂಗೊಳಿಸಲಿದ್ದಾರೆ.

https://www.instagram.com/p/BqKsPELAi_3/

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *