ಪತಿ ಸಾವಿನ ಬಳಿಕ ಮತ್ತೋರ್ವನ ಜೊತೆ ಸಂಬಂಧ- ಕೊನೆಗೆ ಇನಿಯನಿಂದಲೇ ಕೊಲೆಯಾದ ಮಹಿಳೆ

Public TV
1 Min Read

ಹೈದರಾಬಾದ್: ಪತಿ ಸಾವಿನ ಬಳಿಕ ಬೇರೋಬ್ಬನ ಜೊತೆ ಅಕ್ರಮ ಸಂಬಂಧದಲ್ಲಿದ್ದ ಮಹಿಳೆ ಆತನಿಂದಲೇ ಕೊಲೆಯಾಗಿರುವ ಘಟನೆ ಅನಂತಗಿರಿಯ ವಿಕರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

35 ವರ್ಷದ ಮಂಜುಳಾ ಕೊಲೆಯಾದ ಮಹಿಳೆ. ಪತಿ ಚಂದ್ರಯ್ಯ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ್ದ ನಂತರ ಮಂಜುಳಾ, ರಾಜಶೇಖರ್ ಎಂಬಾತನೊಂದಿಗೆ ಸಂಬಂಧದಲ್ಲಿದ್ದಳು. ಮಂಜುಳಾಳನ್ನು ನವೆಂಬರ್ 9ರಂದು ಕೊಲೆ ಮಾಡಿ ರಾಜಶೇಖರ್ ಪರಾರಿಯಾಗಿದ್ದನು. ಸದ್ಯ ಪೊಲೀಸರು ರಾಜಶೇಖರ್ ನನ್ನು ಬಂಧಿಸಿದ್ದಾರೆ.

ಕೊಲೆ ಮಾಡಿದ್ದು ಏಕೆ?
ಮಂಜುಳಾ ಕೆಲವು ತಿಂಗಳ ಹಿಂದೆ ರಾಜಶೇಖರ್ ನಿಂದ 80 ಸಾವಿರ ರೂ. ಸಾಲವನ್ನು ಪಡೆದುಕೊಂಡಿದ್ದಳು. ನವೆಂಬರ್ ಮೊದಲ ವಾರದಲ್ಲಿ ಮಂಜುಳಾ ಹಣ ನೀಡದಿದ್ದಾಗ ರಾಜಶೇಖರ್ ಗಲಾಟೆ ಮಾಡುತ್ತಿದ್ದ. ನವೆಂಬರ್ 9ರಂದು ಮಂಜುಳಾ ವಾಸವಾಗಿದ್ದ ತೋಟದ ಮನೆಗೆ ರಾಜಶೇಖರ್ ಹೋಗಿದ್ದಾನೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಮತ್ತೆ ಜಗಳ ನಡೆದಿದೆ. ಪಾನಮತ್ತನಾಗಿದ್ದ ರಾಜಶೇಖರ್ ಕೋಪದಲ್ಲಿ ಮಂಜುಳಾ ಕೊಲೆ ಮಾಡಿದ್ದಾನೆ.

ನವೆಂಬರ್ 10ರ ಬೆಳಗ್ಗೆ ಮಂಜುಳಾ ತೋಟದ ಬಳಿ ಗ್ರಾಮದ ಕೃಷ್ಣಯ್ಯ ಎಂಬವರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೃಷ್ಣಯ್ಯ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇತ್ತ ಮಂಜುಳಾ ತಂದೆಯಿಂದ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.

ತನಿಖೆ ವೇಳೆ ರಾಜಶೇಖರ್ ಮೇಲೆ ಅನುಮಾನಗೊಂಡು ಅತನನ್ನು ಸಂಪರ್ಕಿಸಲು ಪ್ರಯತ್ನಿಸಲಾಗಿತ್ತು. ಆದ್ರೆ ಕೊಲೆಯಾದ ದಿನದಂದಲೇ ರಾಜಶೇಖರ್ ಮೊಬೈಲ್ ಸ್ವಿಚ್ಛ್ ಆಫ್ ಆಗಿದ್ದರಿಂದ ನಮ್ಮ ಅನುಮಾನ ಬಲಗೊಂಡಿತ್ತು. ಕೊನೆಗೂ ಆತನನ್ನು ಬಂಧಿಸಿದಾಗ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *