ನಾನು ಸಕ್ಕರೆ ಇದ್ದಂತೆ-ತಮ್ಮನ್ನ ತಾವೇ ಹೊಗಳಿಕೊಂಡ ಮೀಟೂ ಬೆಡಗಿ ಶೃತಿ ಹರಿಹರನ್

Public TV
2 Min Read

ಬೆಂಗಳೂರು: ನಟಿ ಶೃತಿ ಹರಿಹರನ್ ಮಾಧ್ಯಮಗಳನ್ನು ಕಂಡು ಗರಂ ಆಗಿ, ನಾನೊಂಥರಾ ಸಕ್ಕರೆ ಇದ್ದಂತೆ, ಅದಕ್ಕೆ ಮಾಧ್ಯಮಗಳು ಇರುವೆಗಳ ರೀತಿಯಲ್ಲಿ ನನ್ನ ಹಿಂದೆ ಬರುತ್ತವೆ ಎಂದು ಹೇಳಿ ತಮ್ಮನ್ನು ತಾವೇ ಹೊಗಳಿಕೊಳ್ಳುವ ಮೂಲಕ ವ್ಯಂಗ್ಯವಾಡಿದ್ದಾರೆ.

ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಧ್ಯಮಗಳ ಮುಂದೆಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ ಮಹಿಳಾ ಅಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಪ್ರಕರಣ ದಾಖಲಿಸಿಕೊಂಡ ಮಹಿಳಾ ಅಯೋಗ ಶೃತಿಗೆ ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಸೂಚಿಸಿತ್ತು. ಅದ್ಯಾಕೋ ಶೃತಿ ಮಾತ್ರ ಕಳೆದ ಕೆಲ ದಿನಗಳಿಂದ ಫುಲ್ ಸೈಲೆಂಟ್ ಆಗಿದ್ದರು. ಇತ್ತ ದೂರು ದಾಖಲಿಸಿಕೊಂಡ ಮಹಿಳಾ ಆಯೋಗ ಸಹಜವಾಗಿ ಶೃತಿ ಮೇಲೆ ಅಸಮಾಧಾನಗೊಂಡಿತಂತೆ.

ಈ ಹಿನ್ನೆಲೆಯಲ್ಲಿ ಇಂದು ವಕೀಲ ಅನಂತ್ ನಾಯ್ಕ್ ಅವರ ಜೊತೆ ಮಹಿಳಾ ಆಯೋಗದ ಮುಂದೆ ಹಾಜರಾದ ಶೃತಿ, ವಿಸ್ಮಯ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಶೃತಿಯನ್ನು ಪ್ರತ್ಯೇಕ ಕೊಠಡಿಗೆ ಕರೆದುಕೊಂಡ ಹೋದ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದ್ದಾರೆ.

ಶೃತಿ ಹರಿಹರನ್ ಕಚೇರಿಗೆ ಬರುವ ಮುನ್ನ ಮಾತನಾಡಿದ ನಾಗಲಕ್ಷ್ಮಿ, ಹೋದ ವಾರ ಬರುತ್ತೀನಿ ಅಂತ ಶೃತಿ ಹರಿಹರನ್ ಹೇಳಿದ್ದರು. ಆದರೆ ಸಾಲು ಸಾಲುಗಳು ಹಬ್ಬ ಬಂದಿದ್ದರಿಂದ ಬರಲಿಲ್ಲ. ಇಂದು ಬರುತ್ತೀನಿ ಅಂದ್ರು. ನನ್ನ ಬಳಿ ತಮ್ಮ ನೋವನ್ನು ಹೇಳಿಕೊಳ್ಳುತ್ತೇನೆ ಅಂತಾ ಅಂದ್ರು. ಮಹಿಳೆಯರು ತಮಗಾದ ನೋವನ್ನು ನಮ್ಮ ಮುಂದೆ ಬಂದು ಹೇಳಲಿ ಅಥವಾ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಬಹುದು. ಅದನ್ನು ಬಿಟ್ಟು ಫೇಸ್‍ಬುಕ್, ಟ್ವಿಟ್ಟರ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ಉಚಿತವಲ್ಲ. ಶೃತಿ ಹರಿಹರನ್ ಪ್ರಕರಣ ಈಗಾಗಲೇ ನ್ಯಾಯಲಯದಲ್ಲಿದ್ದರಿಂದ ನಾನು ಯಾರ ಪರವಾಗಿಯೂ ಇಲ್ಲ. ಬಂದ ಮೇಲೆ ಶೃತಿ ಏನು ಹೇಳ್ತಾರೆ ಎಂದು ಕೇಳಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತಾ ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *