ಎರಡು ವರ್ಷದ ಹಿಂದಿನ ಪ್ರಕರಣ ಬಿನ್ಸಿ ಬನ್ಸಾಲ್‍ಗೆ ಸುತ್ತಿಕೊಂಡಿದ್ದು ಹೇಗೆ?

Public TV
2 Min Read

ಬೆಂಗಳೂರು: ಎರಡು ವರ್ಷದ ಹಿಂದಿನ ಪ್ರಕರಣ ಸದ್ದು ಮಾಡಿದ ಹಿನ್ನೆಲೆಯಲ್ಲಿ ದೇಶದ ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ಗ್ರೂಪ್ ಸಿಇಒ ಬಿನ್ನಿ ಬನ್ಸಾಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಫ್ಲಿಪ್ ಕಾರ್ಟ್‍ನ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ತನ್ನ ಮೇಲೆ ಬಿನ್ನಿ ಬನ್ಸಾಲ್ ಗಂಭೀರ ಸ್ವರೂಪದ ವೈಯಕ್ತಿಕ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪ ಸಂಬಂಧ ವಾಲ್ ಮಾರ್ಟ್ ತನಿಖೆಗೆ ಇಳಿದ ಬೆನ್ನಲ್ಲೇ ಬಿನ್ನಿ ಬನ್ಸಾಲ್ ಈಗ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

ನಡೆದಿದ್ದು ಏನು?
ಬಿನ್ಸಿ ಬನ್ಸಾಲ್ ಮೇಲೆ ಆರೋಪ ಮಾಡಿದ್ದ ಫ್ಲಿಪ್ ಕಾರ್ಟ್ ಮಹಿಳಾ ಉದ್ಯೋಗಿ 2012ರಲ್ಲೇ ಕಂಪನಿ ತೊರೆದಿದ್ದರು. 2016 ರಲ್ಲಿ ಆಕೆ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಬಿನ್ಸಿ ಬನ್ಸಾಲ್ ಅವರ ಸಂಪರ್ಕ ಆಗಿದೆ. ಈ ಸಮಯದಲ್ಲಿ ತನ್ನ ಮೇಲೆ ಬಿನ್ಸಿ ಬನ್ಸಾಲ್ ಲೈಂಗಿಕ ದುರ್ವತನೆ ತೋರಿದ್ದಾರೆ ಎಂದು ಉದ್ಯೋಗಿ ಆರೋಪಿಸಿದ್ದಾರೆ.

ವಾಲ್ ಮಾರ್ಟ್ ಕಂಪನಿ ಫ್ಲಿಪ್ ಕಾರ್ಟ್ ಖರೀದಿಸುತ್ತಿದೆ ಎನ್ನುವ ವಿಚಾರ ತಿಳಿದ ಬಳಿಕ ಮಹಿಳಾ ಉದ್ಯೋಗಿ ಜುಲೈನಲ್ಲಿ ವಾಲ್ ಮಾರ್ಟ್ ಸಿಇಒ ಡೌಗ್ ಮ್ಯಾಕ್ಮಿಲ್ಲನ್ ಅವರಿಗೆ ಇಮೇಲ್ ಮೂಲಕ ದೂರು ನೀಡಿದ್ದಾರೆ. ದೂರು ಬಂದಿದ್ದರೂ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ. ಆಗಸ್ಟ್ ತಿಂಗಳಿನಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಾಲ್ ಮಾರ್ಟ್ ಮಾಜಿ ಉದ್ಯೋಗಿಯ ದೂರಿನ ಬಗ್ಗೆ ಆಂತರಿಕ ತನಿಖೆಗೆ ಇಳಿದಿದೆ ಎಂದು ಮೂಲಗಳು ತಿಳಿಸಿವೆ.

ಬಿನ್ನಿ ಬನ್ಸಾಲ್ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ದೃಢೀಕರಿಸುವ ಯಾವುದೇ ಸಾಕ್ಷ್ಯಾಧಾರಗಳು ಸ್ವತಂತ್ರ ತನಿಖೆಯಲ್ಲಿ ಸಿಕ್ಕಿಲ್ಲ. ಬನ್ಸಾಲ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದ್ದಾರೆ. ಆದರೆ ಆರೋಪಗಳಿಗೆ ಬಿನ್ನಿ ಅವರ ಪ್ರತಿಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಇದೆ ಎಂದು ವಾಲ್ ಮಾರ್ಟ್ ಹೇಳಿದೆ.

ಆರು ತಿಂಗಳ ಹಿಂದಷ್ಟೇ ಅಮೆರಿಕದ ರಿಟೇಲ್ ದೈತ್ಯ ವಾಲ್ ಮಾರ್ಟ್ ಫ್ಲಿಪ್ ಕಾರ್ಟ್ ಅನ್ನು ಖರೀದಿಸಿತ್ತು. ಇದರ ಬೆನ್ನಲ್ಲೇ ಫ್ಲಿಪ್‍ಕಾರ್ಟ್ ಸಹಸಂಸ್ಥಾಪಕ ಸಚಿನ್ ಬನ್ಸಾಲ್ ಸಂಸ್ಥೆಗೆ ವಿದಾಯ ಹೇಳಿದ್ದರು. ಈಗ ಬಿನ್ನಿ ಬನ್ಸಾಲ್ ಸಹ ಫ್ಲಿಪ್ ಕಾರ್ಟ್ ತೊರೆದಿದ್ದಾರೆ. ವಾಲ್ ಮಾರ್ಟ್ ಈ ವರ್ಷ ಮೇ ತಿಂಗಳಲ್ಲಿ 16 ಶತಕೋಟಿ ಡಾಲರ್(1.07 ಲಕ್ಷ ಕೋಟಿ ರೂ.) ನೀಡಿ ಫ್ಲಿಪ್ ಕಾರ್ಟ್‍ನ ಶೇ.77 ಷೇರುಗಳನ್ನು ಖರೀದಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *