ಅಂತದೇನಾಯ್ತು..?- ಬಿಗ್‍ಬಾಸ್ ಶೋನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಡಂ ಪಾಶಾ

Public TV
2 Min Read

ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್. ಅಭಿನಯ ಚಕ್ರವರ್ತಿ ಸುದೀಪ್ ಸಾರಥ್ಯದಲ್ಲಿ ಮೂಡಿ ಬರುವ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಪ್ರತಿದಿನ ಮನರಂಜನೆಯನ್ನು ನೀಡುತ್ತಿರುತ್ತಾರೆ. ಐದು ಸರಣಿಗಳನ್ನು ಯಶಸ್ವಿಯಾಗಿ ಪೂರ್ಣ ಮಾಡಿರುವ ಬಿಗ್‍ಬಾಸ್ ಈ ಬಾರಿ ಸ್ಪೆಶಲ್ ವ್ಯಕ್ತಿ ಆಡಂ ಪಾಶಾ ಮನೆಗೆ ಪ್ರವೇಶ ಮಾಡುವ ಅವಕಾಶವನ್ನು ನೀಡಿದೆ. ಕಳೆದು ಮೂರು ವಾರಗಳಿಂದಲೂ ಒಮ್ಮೆಯೂ ಭಾವುಕರಾಗದ ಆಡಂ ಪಾಶಾ ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಮೂರು ದಿನಗಳಿಂದ ಬಿಗ್‍ಬಾಸ್ ಮನೆಯಲ್ಲಿ ದೀಪಾವಳಿ ಆಚರಿಸಲಾಗುತ್ತಿತ್ತು. ಹಬ್ಬದ ಪ್ರಯುಕ್ತ ವಿಶೇಷ ಟಾಸ್ಕ್ ಗಳನ್ನು ನೀಡುವ ಮೂಲಕ ಮನೆಯಲ್ಲಿ ದೀಪಾವಳಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿ ಟಾಸ್ಕ್ ಗೆಲುವಿಗಾಗಿ ಎಲ್ಲ ಸ್ಪರ್ಧಿಗಳಿಗೆ ಹೊಸ ಬಟ್ಟೆ, ಹಬ್ಬದೂಟ ಮತ್ತು ಪಟಾಕಿಗಳನ್ನು ನೀಡಲಾಗಿತ್ತು. ಸಂಜೆ ಎಲ್ಲರು ಹೊಸ ಬಟ್ಟೆ ತೊಟ್ಟಿದ್ದ ಸ್ಪರ್ಧಿಗಳಿಗೆ ವಿಶೇಷ ಸಂದೇಶಗಳು ಬಂದಿದ್ದವು. ಈ ಸಂದೇಶ ನನಗೆ ಬಂದಿದೆ ಅಂತ ಊಹಿಸಿ ಸರಿಯಾಗಿದ್ದವರಿಗೆ ಅವರ ಪ್ರೀತಿ ಪಾತ್ರರಿಂದ ಬಂದಿರುವ ಉಡೂಗೊರೆಯನ್ನ ಸಹ ಪಡೆದುಕೊಂಡರು.

ಆಡಂ ಕಣ್ಣೀರಿಗೆ ಕಾರಣವೇನು?
ಎಲ್ಲ ಅಭ್ಯರ್ಥಿಗಳಿಗೆ ಸಂದೇಶ ಕಳುಹಿಸಲಾಗಿತ್ತು. ಅದ್ರೆ ಆಡಂ ಪಾಶಾರಿಗೆ ಯಾರು ದೀಪಾವಳಿಯ ಸಂದೇಶ ಕಳುಹಿಸಿರಲಿಲ್ಲ. ಹೀಗಾಗಿ ಎಲ್ಲ ಸ್ಪರ್ಧಿಗಳು ತಮ್ಮ ಕುಟುಂಬಸ್ಥರು ನೀಡಿದ ಗಿಫ್ಟ್ ನಿಂದ ಸಂತೋಷದಲ್ಲಿದ್ದ ಕ್ಷಣದಲ್ಲಿ ಆಡಂ ಒಂದು ಕ್ಷಣ ಭಾವುಕರಾದರು. ಈ ವೇಳೆ ಸಹ ಸ್ಪರ್ಧಿ ನಟಿ ಕವಿತಾ ಗೌಡ ತಮಗೆ ಬಂದಿರುವ ಗಿಫ್ಟ್ ನೀಡುವ ಮೂಲಕ ಆಡಂ ದುಃಖದಲ್ಲಿ ಭಾಗಿಯಾದರು.

ಏನದು ಗಿಫ್ಟ್:
ಕವಿತಾರ ಬೆಸ್ಟ್ ಫ್ರೆಂಡ್ ನೂತನ್ ಎಂಬವರು ಇಸ್ರೇಲ್ ನಿಂದ ತಂದಿರುವ ಲಾಕೆಟ್ ನ್ನು ಬಿಗ್‍ಬಾಸ್ ಮನೆಗೆ ಕಳುಹಿಸಲಾಗಿತ್ತು. ಅದೇ ಲಾಕೆಟ್ ನ್ನು ಕವಿತಾ ಆಡಂಗೆ ನೀಡಿದರು. ನಾನು ಈ ಲಾಕೆಟ್ ಬಹಳ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದೇನೆ. ಆಡಂಗೆ ಕುಟುಂಬಸ್ಥರು ಎಲ್ಲಿದ್ದಾರೆ? ಏನು ಎಂಬುದು ನನಗೆ ಗೊತ್ತಿಲ್ಲ. ಸದ್ಯ ಆಡಂಗಾಗಿ ಯಾವ ಸಂದೇಶ ಅಥವಾ ಗಿಫ್ಟ್ ಬಂದಿಲ್ಲ. ಹಾಗಾಗಿ ನನ್ನ ಅದೃಷ್ಟದ ಲಾಕೆಟ್ ಆಡಂಗೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಗಿಫ್ಟ್ ಪಡೆದ ಆಡಂ, ಬಿಗ್‍ಬಾಸ್ ಮನೆಗೆ ಬರುವಾಗ ಎಮೆರ್ಜೆನ್ಸಿ ನಂಬರ್ ಕೊಡಿ ಅಂದಾಗ ನಾನು ನನ್ನ ಅಕ್ಕನ ನಂಬರ್ ಕೊಟ್ಟು ಬಂದೆ. ಆದ್ರೆ ಈವರೆಗೂ ನನ್ನನ್ನು ಕುಟುಂಬಸ್ಥರು ಒಪ್ಪಿಕೊಂಡಿಲ್ಲ. ಎಲ್ಲರಿಗೂ ಗಿಫ್ಟ್ ಸಿಗುತ್ತಿರುವಾಗ ನನಗೆ ಸಣ್ಣ ಜಲಸ್ ಆಯಿತು. ನಾನು ಎಂದೂ ಹೊರಗಡೆ ಇರುವ ನನ್ನ ಕುಟುಂಬದ ಬಗ್ಗೆ ಮಾತಾಡಿಲ್ಲ. ಇಂದು ಈ ಕಾರ್ಯಕ್ರಮದಿಂದ ಹೊಸ ಕುಟುಂಬ ನನಗೆ ಸಿಕ್ಕಿದೆ ಎಂದು ಆಡಂ ಖುಷಿ ಹಂಚಿಕೊಂಡರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *