ಸೈಯದ್ ಏನು ಹೇಳಿದ್ದಾನೋ ಅದೆಲ್ಲ ಸತ್ಯಕ್ಕೆ ಹತ್ತಿರವಾಗಿದೆ – ಅಲೋಕ್ ಕುಮಾರ್

Public TV
2 Min Read

ಬೆಂಗಳೂರು: ಜಾರಿ ನಿರ್ದೇಶನಾಲಯದ ಪ್ರಕರಣದಿಂದ ಬಚಾವ್ ಆಗಲು ಜನಾರ್ದನ ರೆಡ್ಡಿಗೆ ಡೀಲ್ ನೀಡಿದ್ದ ಆರೋಪದ ಪ್ರಕರಣದ ಬಗ್ಗೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್  ಕುಮಾರ್ ಪ್ರಮುಖ ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸೈಯದ್ ಅಹಮದ್ ಫರೀದ್ ಹಾಗೂ ಜನಾರ್ದನ ರೆಡ್ಡಿ, ಆಪ್ತ ಅಲಿಖಾನ್ ಒಂದೇ ದಿನದಲ್ಲಿ ಭೇಟಿ ಆಗಿರುವ ಕುರಿತು ನಮಗೇ ಸಾಕ್ಷಿ ಲಭಿಸಿದೆ ಎಂದು ತಿಳಿಸಿದ್ದಾರೆ.

ಅಂಬಿಡೆಂಟ್ ಪ್ರಕರಣದಲ್ಲಿ ಸುಮಾರು 30 ಸಾವಿರ ಮಂದಿಗೆ ವಂಚನೆಯಾಗಿದ್ದು, ಅವರಿಗೆ ನ್ಯಾಯ ನೀಡುವುದು ನಮ್ಮ ಕರ್ತವ್ಯ ಆಗಿದೆ. ಈ ಕುರಿತು ಕಳೆದ ಮೇ ತಿಂಗಳಲ್ಲಿ ಡಿಜೆ ಹಳ್ಳಿಯಲ್ಲಿ ದೂರು ದಾಖಲಾಗಿತ್ತು. ಆ ಬಳಿಕ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ತನಿಖೆ ನಡೆಸಲಾಯಿತು. ಸದ್ಯಕ್ಕೆ ಎಸಿಪಿ ನೇತೃತ್ವದಲ್ಲಿ ತನಿಖೆ ಆಗುತ್ತಿದ್ದು ಪ್ರಕರಣವನ್ನು ಡಿಸಿಪಿ ಗಿರೀಶ್ ನೋಡಿಕೊಳ್ಳುತ್ತಿದ್ದಾರೆ. ಅಂಬಿಡೆಂಟ್ ಸಂಸ್ಥೆಯ ಸೈಯದ್ ಮತ್ತು ಬೆಂಗಳೂರಿನ ಅಂಬಿಕಾ ಸೇಲ್ಸ್ ಕಾರ್ಪೋರೇಷನ್ ರಮೇಶ್ ಕೊಠಾರಿ ಸಂಬಂಧ ಇಲ್ಲ. ಆದರೆ ಬಳ್ಳಾರಿಯ ರಾಜಮಹಲ್ ಫ್ಯಾನ್ಸಿ ಜುವೆಲರ್ಸ್ ನ ರಮೇಶ್ ಮತ್ತು ಬೆಂಗಳೂರಿನ ರಮೇಶ್ ಕೊಠಾರಿಗೂ ನಡುವೆ ಹಣದ ವ್ಯವಹಾರ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಸೈಯದ್ ಹೇಳಿದ್ದು ಸತ್ಯ:
ವಂಚನೆ ಪ್ರಕರಣದಲ್ಲಿ ಸುಮಾರು 300 ಕೋಟಿ ರೂ. ಮೊತ್ತದ ವಂಚನೆಯಾಗಿದೆ. ಪ್ರಕರಣದ ಬಳಿಕ ರಮೇಶ್ ಬಳ್ಳಾರಿಯಿಂದ 3 ಸಲ ಬೆಂಗಳೂರಿಗೆ ಬಂದು ನೇರವಾಗಿ ಚಿನ್ನ ಪಡೆದಿದ್ದಾನೆ. ಅಂಬಿಕಾ ಸೇಲ್ಸ್ ಕಾರ್ಪೋರೇಷನ್ 7 ಬಾರಿ ಚಿನ್ನವನ್ನು ಕೊಟ್ಟಿದೆ. ವಿಚಾರಣೆ ವೇಳೆ ಸೈಯದ್ ಏನು ಹೇಳಿದ್ದಾನೆ ಎಲ್ಲವೂ ಸತ್ಯಕ್ಕೆ ಹತ್ತಿರವಾಗಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದರು.

ತಾಜ್ ವೆಸ್ಟ್ ಹೋಟೆಲ್‍ನಲ್ಲಿ ಭೇಟಿ:
ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಸೈಯದ್, ರೆಡ್ಡಿ ಭೇಟಿ ಆಗಿರುವ ಬಗ್ಗೆ ಮಾಹಿತಿ ಇದೆ. ಇದೇ ವೇಳೆ ಅಲಿಖಾನ್ ಹಾಗೂ ಜನಾರ್ದನ ರೆಡ್ಡಿ ಇದೇ ಹೋಟೆಲ್ ನಲ್ಲಿದ್ದ ಬಗ್ಗೆಯೂ ಮಾಹಿತಿ ಲಭಿಸಿದೆ. ಸದ್ಯ ಬಳ್ಳಾರಿಗೆ ವರ್ಗಾವಣೆ ಆಗಿರುವ ಚಿನ್ನ ಎಲ್ಲಿದೆ ಎನ್ನುವುದು ತಿಳಿಯಬೇಕಿದೆ. ಅಲಿಖಾನ್‍ಗೆ ಚಿನ್ನ ನೀಡಿದ್ದು ಎಲ್ಲಿ? ಈ ಚಿನ್ನ ಎಲ್ಲಿದೆ ಎಂಬುವುರ ಬಗ್ಗೆ ಮಾಹಿತಿ ಬೇಕಿದೆ ಎಂದರು. ಇದನ್ನು ಓದಿ:ಅಂಬಿಡೆಂಟ್ ಹಣ ವಂಚನೆ ಪ್ರಕರಣಕ್ಕೆ ರೆಡ್ಡಿಗೂ ಏನು ಸಂಬಂಧ? ಡಿಲೀಂಗ್ ಹೇಗಾಯ್ತು? 57 ಕೆಜಿ ಚಿನ್ನ ತಲುಪಿದ್ದು ಹೇಗೆ?

ಜನಾರ್ದನ ರೆಡ್ಡಿ ಮನೆ ಶೋಧ:
ಪ್ರಕರಣದ ತನಿಖೆ ಕಳೆದ 20 ದಿನಗಳ ಹಿಂದೆಯೇ ತನಿಖೆ ಚುರುಕು ಪಡೆದಿತ್ತು. ಆದರೆ ಚುನಾವಣೆ ಕಾರಣ ತಡವಾಯಿತು. ಸದ್ಯ ಜನಾರ್ದನ ರೆಡ್ಡಿ ಪಾರಿಜಾತದಲ್ಲಿ ಮನೆಯಲ್ಲಿ ಶೋಧ ನಡೆಯತ್ತಿದೆ. ಬಳ್ಳಾರಿಗೆ ಒಂದು ತಂಡ ಹಾಗೂ ಹೈದರಾಬಾದ್‍ಗೆ ಒಂದು ತಂಡ ಭೇಟಿ ನೀಡಿದೆ. ಈ ಹಿಂದೆಯೇ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಪಂಚನಾಮೆ ಮಾಡಲಾಗಿದೆ. ಅಲಿಖಾನ್ ಹೇಳಿದ ದಿನಾಂಕದಲ್ಲಿ ಜನಾರ್ದನ ರೆಡ್ಡಿ ಅಲ್ಲಿ ಇದ್ದಿದ್ದು ನಿಜ ಆಗಿದೆ ಎಂದು ವಿವರಿಸಿದರು. ಇದನ್ನು ಓದಿ: ಹೊಡೆದು ಜನಾರ್ದನ ರೆಡ್ಡಿ ಹೆಸರು ಹಾಕಿಸಿದ್ದಾರೆ- ಡೀಲ್ ಪ್ರಕರಣಕ್ಕೆ ಸ್ಫೋಟಕ ತಿರುವು

ಪ್ರಮುಖವಾಗಿ ಸಾರ್ವಜನಿಕರು 10 ಸಾವಿರದಿಂದ 1 ಲಕ್ಷ ಸೇರಿದಂತೆ ಸಣ್ಣ ಸಣ್ಣ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಎಲ್ಲರಿಗೂ ನ್ಯಾಯ ಸಿಗುವಂತೆ ಮಾಡುವುದು ನಮ್ಮ ಉದ್ದೇಶ. ಪ್ರಕರಣದಲ್ಲಿ ಜಾಮೀನು ಪಡೆಯಲು ಯತ್ನಿಸಿದರೆ ನಾವು ನ್ಯಾಯಾಲಯಕ್ಕೆ ಮನವಿ ಸಲ್ಲಿಸುತ್ತೇವೆ. ಪ್ರಕಣಕ್ಕೆ ತಾರ್ಕಿಕ ಅಂತ್ಯ ನೀಡುತ್ತೇವೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *