ಬೆಂಗ್ಳೂರು ಪೊಲೀಸ್ರಿಗೆ Love You ಹೇಳಿ ಧನ್ಯವಾದ ತಿಳಿಸಿದ್ರು ಹಾಟ್ ಬೆಡಗಿ

Public TV
1 Min Read

ಬೆಂಗಳೂರು: ಬಾಲಿವುಡ್ ನ ಮೋಹಕ ಬೆಡಗಿ ನಟಿ ಸನ್ನಿ ಲಿಯೋನ್ ಅವರು ಬೆಂಗಳೂರು ಪೊಲೀಸರಿಗೆ ವಿಡಿಯೋ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ನಟಿ ಸನ್ನಿ ಲಿಯೋನ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿ ಪೊಲೀಸರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. “ಬೆಂಗಳೂರು ನಗರ ಪೊಲೀಸರು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಬಾಲಿವುಡ್ ನಲ್ಲಿ ಭದ್ರತೆಯನ್ನು ನೀಡುವ ಯೂಸುಫ್ ಇಬ್ರಾಹಿಂ ಮತ್ತು ನನ್ನ ತಂಡದವರು ಕೂಡ ಹಾರ್ಡ್ ವರ್ಕ್ ಮಾಡಿದ್ದಾರೆ ಅವರಿಗೆಲ್ಲಾ ಧನ್ಯವಾದಗಳು. ಬೆಂಗಳೂರು ಜನರು ನೈಟ್ ಕಾರ್ಯಕ್ರಮದಲ್ಲಿ ಕೆಟ್ಟದಕ್ಕಿಂತ ಹೆಚ್ಚಾಗಿ ಒಳ್ಳೆಯ ರೀತಿ ನಡೆದುಕೊಂಡಿದ್ದಾರೆ, ಲವ್ ಯು” ಎಂದು ಸನ್ನಿ ಟ್ವೀಟ್ ಮಾಡಿದ್ದಾರೆ.

ಶನಿವಾರ ರಾತ್ರಿ ಬೆಂಗಳೂರಿನ ಟೆಕ್ ಪಾರ್ಕ್ ನಲ್ಲಿ ಸನ್ನಿ ನೈಟ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆದರೆ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಮುಂಜಾಗೃತ ಕ್ರಮವಾಗಿ ಸುಮಾರು 300ಕ್ಕೂ ಅಧಿಕ ಪೊಲೀಸರ ಭದ್ರತೆಯನ್ನು ನಿಯೋಜನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಮಗೆ ಭದ್ರತೆ ನೀಡಿದ್ದ ಪೊಲೀಸರಿಗೆ ಸನ್ನಿ ಲಿಯೋನ್ ಧನ್ಯವಾದವನ್ನು ತಿಳಿಸಿದ್ದಾರೆ.

ಸನ್ನಿ ಲಿಯೋನ್ ಕನ್ನಡದಲ್ಲಿ ರಾಜ್ಯೋತ್ಸವದ ಶುಭಾಶಯ ಹೇಳಿ, ಕನ್ನಡದ ಹಾಡುಗಳಿಗೂ ಸಖತ್ ಸ್ಟೆಪ್ ಹಾಕಿದ್ದರು. ಸನ್ನಿ ಸ್ಟೆಪ್‍ಗೆ ನೆರೆದಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದು, ಪಡ್ಡೆ ಹೈಕ್ಳು ಫುಲ್ ಫಿದಾ ಆಗಿದ್ದರು. ಇನ್ನು ಗಾಯಕ ರಘು ದೀಕ್ಷಿತ್ ಕೂಡ ಸಾಂಗ್ ಹಾಡುವ ಮೂಲಕ ಸಖತ್ ಮನರಂಜನೆ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *