ಪದ್ಮಾವತಿಗೆ ಪುಟಾಣಿ ಹುಡ್ಗಿಯಿಂದ ಫುಲ್ ಕ್ಲಾಸ್- ವಿಡಿಯೋ ನೋಡಿ

Public TV
2 Min Read

ಬೆಂಗಳೂರು: ಪದೇ ಪದೇ ಮೋದಿ ಕಾಲೆಳೆದು ವಿವಾದಕ್ಕೀಡಾಗುತ್ತಿರೋ ಮಾಜಿ ಸಂಸದೆ ರಮ್ಯಾ ಅವರಿಗೆ ಪುಟ್ಟ ಹುಡುಗಿಯೊಬ್ಬಳು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾಳೆ.

ವಿಡಿಯೋ ಮೂಲಕ ರಮ್ಯಾ ಅವರಿಗೆ ಕ್ಲಾಸ್ ಮಾಡಿದ ಬಾಲಕಿ ಹಾರಿಕ ಮಂಜುನಾಥ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://twitter.com/divyaspandana/status/1057842482975817728

ವಿಡಿಯೋದಲ್ಲೇನಿದೆ?:
ಅಲ್ಲ ರಮ್ಯಾಕ್ಕ ಯಾವ ಸ್ಟ್ಯಾಚ್ಯು ಆಫ್ ಯೂನಿಟಿ ಎಂಬ ಎತ್ತರವಾದ ಪ್ರತಿಮೆಯನ್ನ ಕಟ್ಟಿಸಿದಂತಹ ವ್ಯಕ್ತಿಯೇ ಆ ಪ್ರತಿಮೆಯ ಕೆಳಗಡೆ ನಿಂತುಕೊಂಡಾಗ ಒಂದು ಹಕ್ಕಿಯ ಹಿಕ್ಕೆಯ ರೀತಿಯಲ್ಲಿ ನಿಮಗೆ ಕಾಣಿಸೋದಾದ್ರೆ ಆ ಪ್ರತಿಮೆ ಇನ್ನಷ್ಟು ಎತ್ತರವಾಗಿದೆ ಎಂಬುದನ್ನು ನೀವು ಯೋಚಿಸಬೇಕಾಗುತ್ತದೆ. ಅದು ಬಿಡಿ ಆ ಪ್ರತಿಮೆಯನ್ನು ಕಟ್ಟಿಸಿದಂತಹ ವ್ಯಕ್ತಿಯ ವ್ಯಕ್ತಿತ್ವ ಇನ್ನಷ್ಟು ಎತ್ತರವಾದುದಂತ ನೀವೇ ಯೋಚಿಸಬೇಕಾಗಿದೆ ಅಕ್ಕ.

ಆ ವ್ಯಕ್ತಿ ಕಟ್ಟಿರೋದು ತನ್ನ ತಂದೆ ಅಥವಾ ತಾಯಿಯ ಪ್ರತಿಮೆ ಅಲ್ಲ. ಸ್ವತಃ ನಿಮ್ಮ ಕಾಂಗ್ರೆಸ್ ನ ಹಿರಿಯ ನಾಯಕರಾದಂತಹ ಸರ್ದಾರ್ ವಲ್ಲಭಭಾಯ್ ಅವರ ಪ್ರತಿಮೆಯನ್ನು ಅವರು ಕಟ್ಟಿಸಿರೋದು. ಮತ್ತೊಮ್ಮೆ ಹೇಳ್ತಾ ಇದ್ದೀನಿ ನೆನಪಿಟ್ಟಿಕೊಳ್ಳಿ, ಅಂಡರ್ ಲೈನ್ ಮಾಡಿಕೊಳ್ಳಿ, ಕಾಂಗ್ರೆಸ್ ಹಿರಿಯ ನಾಯಕ ಸರ್ದಾರ್ ವಲಭಭಾಯ್ ಪಟೇಲರ್ ಪ್ರತಿಮೆಯನ್ನು ನರೇಂದ್ರ ಮೋದಿಯವರು ಕಟ್ಟಿಸಿದ್ದಾರೆ. ಅಲ್ಲಕ್ಕ ನಿಮ್ಮ ಕಾಂಗ್ರೆಸ್ ಪಕ್ಷಕಂತೂ ಆ ವ್ಯಕ್ತಿಗೆ ಸಲ್ಲಿಸಬೇಕಾದಂತಹ ನ್ಯಾಯಯುತ ಗೌರವವನ್ನು ಸಲ್ಲಿಸಿಲ್ಲ. ಅದು ಬಿಟ್ಟು ಬೇರೆ ಪಕ್ಷದವರು ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ ಅಂದ್ರೆ ಅದನ್ನು ನೋಡಿ ಆನಂದಿಸಿ ಅಕ್ಕಾ. ಸಂತೋಷಪಡಿ ಅಂತ ಹೇಳಿದ್ದಾರೆ.

ಮಾತು ಮುಂದುವರಿಸಿದ ಬಾಲಕಿ, ಅಲ್ಲಕ್ಕ ಇಷ್ಟು ಎತ್ತರವಾದ ಪ್ರತಿಮೆಯನ್ನು ನೋಡಿದ್ರೆನೇ ನೀವು ಈ ರೀತಿ ಕಮೆಂಟ್ ಮಾಡ್ತಿರಂತಾದ್ರೆ ಇನ್ನು ಅದಕ್ಕಿಂತ ಎತ್ತರವಾದ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ ಅಲ್ವ ಅದಕ್ಕೆ ನೀವು ಯಾವ ರೀತಿ ಕಮೆಂಟ್ ಮಾಡ್ತೀರೋ ಅನ್ನೋದನ್ನ ನನಗೆ ಊಹಿಸಲೂ ಸಾಧ್ಯವಿಲ್ಲ ಅಂತ ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ರಮ್ಯಾ ಟೀಕಿಸಿದ್ದೇನು?:
ಬುಧವಾರ ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲರ 182 ಅಡಿ ಎತ್ತರದ ಏಕತಾ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು. ನರೇಂದ್ರ ಮೋದಿಯವರು ಪ್ರತಿಮೆ ಕಾಲ ಬಳಿ ನಿಂತು ತೆಗೆಸಿಕೊಂಡಿದ್ದ ಫೋಟೋವನ್ನು ನಟಿ ರಮ್ಯಾ ತಮ್ಮ ಟ್ವಿಟ್ಟರ್ ನಲ್ಲಿ ಹಾಕಿ ಕಾಲೆಳೆದಿದ್ದರು. ರಮ್ಯಾ ಟ್ವಿಟ್ಟರ್ ನಲ್ಲಿ, ಪುತ್ಥಳಿಯ ಬಳಿ ಮೋದಿ ನಿಂತಿರುವ ಚಿತ್ರವನ್ನು ಹಾಕಿ, ಹಕ್ಕಿ ಗಲೀಜು ಮಾಡಿದೆಯೇ? ಎಂಬ ಅಡಿಬರಹವನ್ನು ಹಾಕಿ ಪ್ರಶ್ನಿಸಿದ್ದರು.

ಟ್ವೀಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಮ್ಯಾರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಕಾಂಗ್ರೆಸ್‍ನಲ್ಲಿರುವ ಎಲ್ಲಾ ನಾಯಕರ ಸಂಸ್ಕೃತಿಯು ಹೀಗೆಯೇ? ರಾಹುಲ್ ಗಾಂಧಿ ಹೀಗೆ ಮಾಡಿ ಎಂದು ನಿಮಗೆ ಸಲಹೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದರು.

https://www.youtube.com/watch?v=P_L1Zb-WCss&feature=youtu.be

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *