ರಾಮನಗರದಲ್ಲಿ ಗೆಲ್ಲೋದಕ್ಕಿಂತ ಪಕ್ಷ ಕಟ್ಟಲು ಹೋಗಿದ್ವಿ: ಆರ್.ಅಶೋಕ್

Public TV
1 Min Read

ಮಂಡ್ಯ: ಹಣದ ಆಮಿಷದಿಂದ ಬೆನ್ನಿಗೆ ಚೂರಿ ಹಾಕಿ ರಾಮನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಓಡಿ ಹೋಗಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆರೋಪಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಇದೊಂದು ರಾಜಕೀಯ ವ್ಯಭಿಚಾರ. ಈ ತರದ ಘಟನೆ ರಾಜ್ಯ ತಲೆತಗ್ಗಿಸುವಂತದ್ದು. ಇದರಲ್ಲಿ ಭಾಗಿಯಾದ ಕಾಂಗ್ರೆಸ್‍ನವರು ತಲೆ ತಗ್ಗಿಸಬೇಕು. ಮುಂದೊಂದು ದಿನ ಅವರಿಗೂ ಇದೇ ರೀತಿ ಆಗುತ್ತದೆ ಎಂದು ಆಕ್ರೋಶ ಹೊರಹಾಕಿದರು. ಇದನ್ನು ಓದಿ: ಉಪಚುನಾವಣೆಗೆ ಸ್ಫೋಟಕ ಟ್ವಿಸ್ಟ್-ಚುನಾವಣೆ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ 12 ಜನ ರಾಮನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕಿಂತ ಶಕ್ತಿ ಕೊಡಲು ಸಾಧ್ಯವಿಲ್ಲ. ಸತ್ತರೆ ನನ್ನ ಹೆಣ ಕೂಡ ಜೆಡಿಎಸ್‍ಗೆ ಹೋಗಲ್ಲ ಅಂತ ಚಂದ್ರಶೇಖರ್ ಅವರ ತಂದೆ ಹೇಳಿದ್ದರು. ಆದರೆ ಈಗ ಚಂದ್ರಶೇಖರ್ ನಡೆದುಕೊಂಡಿರುವ ರೀತಿ ಮುಂದೆ ಅವರಿಗೆ ಕಾನೂನಿನ ರೀತಿ ತೊಡಕಾಗಬಹುದು. ನಾವೇನು ರಾಮನಗರ ಗೆಲ್ಲತ್ತೇವೆ ಅಂತಾ ಹೋಗಿಲ್ಲ. ಪಕ್ಷ ಕಟ್ಟಲು ಹೋಗಿದ್ದೆವು ಎಂದು ಅಶೋಕ್ ಅಸಮಾಧಾನ ಹೊರಹಾಕಿದರು.

ಈ ಬೆಳವಣಿಗೆಯಿಂದ ಇದೇ ಅವಧಿಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಲು ಹಿನ್ನಡೆ ಆಗಲ್ಲ. ಇದಕ್ಕೆ ಪೂರಕವಾಗಿ ಬೇರೆ ನಿರ್ಧಾರ ಕೈಗೊಳ್ಳಲು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಹೈಕಮಾಂಡ್ ನಾಯಕ ಜೊತೆಗೆ ಮಾತುಕತೆ ನಡೆಸುತ್ತೇವೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡ ಅವರ ಗೆಲವು ಕಷ್ಟವಿದೆ. ಹೀಗಾಗಿ ನಾವು ಅಲ್ಲಿ ಹೊಸ ತಂತ್ರ ಹೂಡಲಿದ್ದೇವೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://youtu.be/SUz3348T4QA

Share This Article
Leave a Comment

Leave a Reply

Your email address will not be published. Required fields are marked *