ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಬಾಲಕಿಯನ್ನ ರಕ್ಷಿಸಿದ ಯುವಕ-ವಿಡಿಯೋ ನೋಡಿ

Public TV
1 Min Read

ಬೀಜಿಂಗ್: ನದಿಯಲ್ಲಿ ಮುಳುಗುತ್ತಿದ್ದ 6 ವರ್ಷದ ಬಾಲಕಿಯನ್ನು ಡೆಲಿವೆರಿ ಬಾಯ್ ರಕ್ಷಿಸಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನರು ಯುವಕ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಅಕ್ಟೋಬರ್ 13ರಂದು ಚೀನಾದ ಝೀಜಾಂಗ್ ಪ್ರಾಂತ್ಯದ ಶೌಕ್ಷಿಂಗ್ ನಗರದಲ್ಲಿ ನಡೆದಿದೆ. ಈ ವಿಡಿಯೋವನ್ನು ಸ್ಥಳೀಯ ಮಾಧ್ಯಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಶ್ವದಾದ್ಯಂತ ವೈರಲ್ ಆಗಿದೆ.

ಇಬ್ಬರು ಮಕ್ಕಳು ನದಿಯ ದಡದಲ್ಲಿ ನಿಂತಿದ್ದು, ಅದರಲ್ಲಿ 6 ವರ್ಷದ ಬಾಲಕಿ ಮೆಟ್ಟಿಲು ಇಳಿದು ನದಿ ಬಳಿ ತೆರಳಿದ್ದಾಳೆ. ನೋಡ ನೋಡುತ್ತಿದ್ದಂತೆ ನೀರಿನ ರಭಸಕ್ಕೆ ಬಾಲಕಿ ಮುಳಗಲು ಆರಂಭಿಸಿದ್ದಾಳೆ. ಇದೇ ವೇಳೆ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಯುವಕ ಬಾಲಕಿ ಧ್ವನಿ ಕೇಳಿ ಬೈಕ್ ನಿಲ್ಲಿಸಿ ನೀರಿಗೆ ಧುಮುಕಿದ್ದಾನೆ. ಬಾಲಕಿಯನ್ನು ರಕ್ಷಿಸಿ ದಡಕ್ಕೆ ತಂದು ಮತ್ತು ಕೊಚ್ಚಿ ಹೋಗುತ್ತಿದ್ದ ಆಕೆ ಶೂ ಸಹವನ್ನು ಎತ್ತಿಕೊಂಡು ಬಂದಿದ್ದಾನೆ. ಇದನ್ನೂ ಓದಿ: ಕಟ್ಟಡದ ಬಾಲ್ಕನಿಯಲ್ಲಿ ನೇತಾಡ್ತಿದ್ದ ಕಂದನ ರಕ್ಷಣೆ-ವಿಡಿಯೋ ನೋಡಿ

ಯುವಕನನ್ನು 23 ವರ್ಷದ ಲಿನ್‍ಫಿಂಗ್ ಎಂದು ಗುರುತಿಸಲಾಗಿದೆ. ಚೀನಾದ ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರವಾದ ಬಳಿಕ ಯುವಕನ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಯುವಕನನ್ನು ಸೂಪರ್ ಹೀರೋ ಅಂದರೆ, ಹಲವರು ಆತ ಬಾಲಕಿಗೆ ದೇವರ ರೂಪದಲ್ಲಿ ಬಂದ ವ್ಯಕ್ತಿ ಎಂದು ಕಮೆಂಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: 4ನೇ ಅಂತಸ್ತಿನ ಕಿಟಕಿಯಲ್ಲಿ ನೇತಾಡ್ತಿದ್ದ ಬಾಲಕಿಯನ್ನು ರಕ್ಷಿಸಿದ್ರು ಸೂಪರ್ ಹೀರೋಗಳು

ಲಿನ್ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ ಆತನ ಕಂಪನಿ ‘ಮಾಡೆಲ್ ಡ್ರೈವರ್’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿ ಜೊತೆ ನಗದು ಬಹುಮಾನವನ್ನು ನೀಡಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *