ಹಾಸನದಲ್ಲಿ ಜಾವಗಲ್ ಶ್ರೀನಾಥ್‍ಗೆ ಬಿಜೆಪಿ ಟಿಕೆಟ್?

Public TV
1 Min Read

ಹಾಸನ: ಜಿಲ್ಲೆಯಲ್ಲಿ ಮೈತ್ರಿ ಪಕ್ಷಕ್ಕೆ ಮಾಸ್ಟರ್ ಸ್ಟ್ರೋಕ್ ಕೊಡುವುದಕ್ಕೆ ಬಿಜೆಪಿ ಪ್ಲಾನ್ ಮಾಡಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅಥವಾ ಕ್ಯಾಪ್ಟನ್ ಗೋಪಿನಾಥ್ ಅವರನ್ನು ಕಣಕ್ಕಿಳಿಸಲು ಕಮಲ ಪಕ್ಷದ ವರಿಷ್ಟರ ತಂತ್ರ ರೂಪಿಸಿದ್ದಾರೆ ಎಂಬ ತಿಳಿದು ಬಂದಿದೆ.

ಹಾಸನ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬದಲು ಪ್ರಜ್ವಲ್ ಸ್ಪರ್ಧೆ ಮಾಡಿದರೆ ಹಾಸನ ಜಿಲ್ಲೆಯವರೇ ಆಗಿರುವ ಶ್ರೀನಾಥ್ ಅಥವಾ ಗೋಪಿನಾಥ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಮೂಲಕ ಹಾಸನದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಬಗ್ಗೆ ಕಾರ್ಯಕರ್ತರಲ್ಲಿರುವ ಅಸಮಧಾನದ ಲಾಭವನ್ನು ಪಡೆಯಲು ಬಿಜೆಪಿ ತಂತ್ರ ರೂಪಿಸಿದೆ ಎಂದು ಬಿಜೆಪಿ ಪಕ್ಷದ ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಧೋನಿ, ಗಂಭೀರ್ 2019ರ ಲೋಕಸಭಾ ಬಿಜೆಪಿ ಅಭ್ಯರ್ಥಿಗಳು!

ಕಾಂಗ್ರೆಸ್ಸಿನ ಮಾಜಿ ಸಚಿವರುಗಳಾದ ಎ.ಮಂಜು ಅಥವಾ ಬಿ.ಶಿವರಾಂರನ್ನ ಪಕ್ಷಕ್ಕೆ ಸೆಳೆಯುವ ಬಗ್ಗೆಯೂ ಮಾತುಕತೆ ನಡೆದಿದ್ದು, ಜೆಡಿಎಸ್ ಕಾಂಗ್ರೆಸ್ ಮೈತ್ರಿ ಬಗ್ಗೆ ಅಸಮಾಧಾನ ಇರುವ ನಾಯಕರುಗಳನ್ನ ಬಿಜೆಪಿಗೆ ಸೆಳೆದು ಮೈತ್ರಿ ಪಕ್ಷಗಳನ್ನ ವೀಕ್ ಮಾಡಲು ಚಿಂತನೆ ಮಾಡಲಾಗಿದೆ. ಇದರಿಂದ ಜೆಡಿಎಸ್ ವರಿಷ್ಠರ ತವರಿನಲ್ಲೇ ಮೈತ್ರಿ ಪಕ್ಷಕ್ಕೆ ಶಾಕ್ ಕೊಡಲು ಬಿಜೆಪಿಯ ರಾಷ್ಟಾಧ್ಯಕ್ಷ ಅಮಿತ್ ಶಾ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ವರಿಷ್ಠರು ಲೋಕಚಭೆ ಚುನಾವಣೆಗೆ ಇನ್ನು ಆರು ತಿಂಗಳು ಬಾಕಿ ಇರುವಾಗಲೇ ಹಾಸನದ ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರೊಂದಿಗೆ ಚಿಂತನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಬಾರದೇ ಇದ್ದರೆ ಸೆಲೆಬ್ರೆಟಿಗಳನ್ನ ಕಣಕ್ಕಿಳಿಸಿ ಫೈಟ್ ನೀಡುವ ಬಗ್ಗೆ ಕೂಡ ಚರ್ಚೆ ಮಾಡಲಾಗಿದೆ. ಇದರಿಂದ ಬಿಜೆಪಿಯ ನಡೆ ತೀವ್ರ ಕುತೂಹಲವನ್ನು ಮೂಡಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *