ರಣ್‍ವೀರ್-ದೀಪಿಕಾ ಮದ್ವೆ ನವೆಂಬರ್ 15ಕ್ಕೆ ಫಿಕ್ಸ್ ಮಾಡಿದ್ದೇಕೆ? ಇಲ್ಲಿದೆ ಉತ್ತರ

Public TV
2 Min Read

ಮುಂಬೈ: ಬಾಲಿವುಡ್ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಮತ್ತು ಬಾಲಿವುಡ್ ಸೆಕ್ಸಿ ಮ್ಯಾನ್ ರಣ್‍ವೀರ್ ಸಿಂಗ್ ಇಬ್ಬರು ಸಾಂಸರಿಕ ಜೀವನಕ್ಕೆ ಕಾಲಿರುತ್ತಿರೋದು ಪಕ್ಕಾ ಆಗಿದೆ. ನವೆಂಬರ್ 14 ಮತ್ತು 15ರಂದು ಜೋಡಿಯ ಮದುವೆ ಕಾರ್ಯಕ್ರಮ ನಡೆಯಲಿದ್ದು, ಎರಡು ಕುಟುಂಬಗಳ ಆಪ್ತರು ಮತ್ತು ಚಿತ್ರದ ಗಣ್ಯರು ಮಾತ್ರ ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೊದಲು ಇಬ್ಬರ ಮದುವೆ ಡಿಸೆಂಬರ್ ನಲ್ಲಿ ನಡೆಯಲಿದೆ ಎಂಬ ಸುದ್ದಿಗಳು ಬಾಲಿವುಡ್ ಗಲ್ಲಿಗಳಲ್ಲಿ ಹರಿದಾಡಿದ್ದವು. ಆದ್ರೆ ದೀಪಿಕಾ ಮತ್ತು ರಣ್‍ವೀರ್ ತಮ್ಮ ಜೀವನದ ಅತ್ಯುತ್ತಮ ದಿನದಂದು ಮದುವೆಯನ್ನು ನಿಶ್ಚಯಿಸಿಕೊಂಡಿದ್ದಾರೆ.

ನವೆಂಬರ್ 15 ಯಾಕೆ?
ದೀಪಿಕಾ ಮತ್ತು ರಣ್‍ವೀರ್ ತೆರೆಯ ಮೇಲೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗೋಲಿಯೋಂ ಕೀ ರಾಸಲೀಲಾ: ರಾಮಲೀಲಾ’ ಚಿತ್ರದಲ್ಲಿ ಒಂದಾಗಿದ್ದರು. ಈ ಸಿನಿಮಾದ ಚಿತ್ರೀಕರಣ ವೇಳೆಯೇ ಇಬ್ಬರ ಮಧ್ಯೆ ಲವ್ ಆರಂಭವಾಗಿತ್ತು. ಸಿನಿಮಾ 2013 ನವೆಂಬರ್ 15ರಂದು ಬಿಡುಗಡೆ ಆಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ನವೆಂಬರ್ 15ರಂದು ಮದುವೆ ದಿನಾಂಕ ಫಿಕ್ಸ್ ಮಾಡಿಕೊಂಡಿದ್ದಾರೆಂದು ಪತ್ರಿಕೆಯೊಂದು ಪ್ರಕಟಿಸಿದೆ.

ರಾಮಲೀಲಾ ಚಿತ್ರದ ಬಳಿಕ ಇದೇ ಜೋಡಿ ಫೈಡಿಂಗ್ ಫ್ಯಾನಿ ಸಿನಿಮಾದಲ್ಲಿ ಒಂದಾಗಿತ್ತು. ದೊಡ್ಡ ಸ್ಟಾರ್ ಆಗಿದ್ದರೂ ರಣ್‍ವೀರ್ ಗೆಳತಿಗಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಬಾಜೀರಾವ್ ಮಸ್ತಾನಿ ಮತ್ತು ಪದ್ಮಾವತ್ ನಲ್ಲಿಯೂ ಜೊತೆಯಾಗಿ ಬೆಳ್ಳಿ ಪರದೆ ಮೇಲೆ ಮಿಂಚಿದ್ದರು. ಈಗ ನಿಜಜೀವನದಲ್ಲಿಯೂ ಒಂದಾಗುತ್ತಿದ್ದು, ಅಭಿಮಾನಿಗಳು ಮತ್ತು ಚಿತ್ರ ತಾರೆಯರಿಂದ ಶುಭಾಶಯ ಹರಿದು ಬರುತ್ತಿವೆ.

“ನಿಮ್ಮೆಲ್ಲರ ಜೊತೆ ಈ ವಿಷಯ ಹಂಚಿಕೊಳ್ಳಲು ನನಗೆ ಖುಷಿಯಾಗುತ್ತದೆ. ನನ್ನ ಕುಟುಂಬದ ಆಶೀರ್ವಾದದಿಂದ 2018 ನವೆಂಬರ್ 14 ಹಾಗೂ 15ಕ್ಕೆ ನನ್ನ ಮದುವೆ ನಿಗದಿಯಾಗಿದೆ. ನೀವು ಇಷ್ಟು ವರ್ಷ ನನಗೆ ಪ್ರೀತಿ ಹಾಗೂ ಸ್ನೇಹವನ್ನು ನೀಡಿದ್ದೀರಿ. ಅದಕ್ಕೆ ನಾನು ಅಭಾರಿಯಾಗಿರುತ್ತೇನೆ. ಪ್ರೀತಿ, ಸ್ನೇಹ ಹಾಗೂ ವಿಶ್ವಾಸದಿಂದ ಶುರುವಾಗುತ್ತಿರುವ ಈ ಸುಂದರವಾದ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬಯಸುತ್ತೇವೆ. ನಿಮ್ಮೆಲ್ಲರ ಪ್ರೀತಿಯ ದೀಪಿಕಾ ಹಾಗೂ ರಣವೀರ್” ಎಂದು ದೀಪಿಕಾ ಮತ್ತು ರಣ್‍ವೀರ್ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

ಮದುವೆ ದಿನಾಂಕ ಹೇಳಿದ ಜೋಡಿ ವಿವಾಹ ಸ್ಥಳದ ಸುಳಿವನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಮೂಲಗಳ ಪ್ರಕಾರ ಇಬ್ಬರ ಮದುವೆ ಇಟಲಿಯಲ್ಲಿ ನಡೆಯಲಿದ್ದು, ಬೆಂಗಳೂರು ಅಥವಾ ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

 ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.instagram.com/p/BpMRx9CBO1S/?hl=en&taken-by=deepikapadukone

Share This Article
Leave a Comment

Leave a Reply

Your email address will not be published. Required fields are marked *