ತಂದೆ ಮುಂದೆನೇ ಸೀರೆ ಎಳೆದಾಡಿ ಮಗಳಿಗೆ ಲೈಂಗಿಕ ಕಿರುಕುಳ!

Public TV
2 Min Read

ಬೆಂಗಳೂರು: ದಂಧೆಕೋರರ ಮನೆ ಮೇಲೆ ಅಲೋಕ್ ಕುಮಾರ್ ನೇತೃತ್ವದ ತಂಡ ದಾಳಿ ಮಾಡಿ ಕೋಟಿ ಕೋಟಿ ಹಣ ವಶಪಡಿಸಿಕೊಂಡಿದ್ದರೂ ದಂಧೆಕೋರರಿಗೆ ಮಾತ್ರ ಯಾವುದೇ ಭಯ ಇಲ್ಲವಾಗಿದ್ದು, ಇಲ್ಲೊಂದು ಮೀಟರ್ ಬಡ್ಡಿ ಗ್ಯಾಂಗ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದೆ.

ಹೌದು. ಮೀಟರ್ ಬಡ್ಡಿ ಗ್ಯಾಂಗ್ ಬಡ್ಡಿ ದುಡ್ಡುಕೊಡಲಿಲ್ಲ ಅಂತ ಮಹಿಳೆಯೊಬ್ಬರನ್ನ ಮನೆಯಲ್ಲಿ ಕೂಡಿ ಹಾಕಿ ತಂದೆ ಮುಂದೆನೇ ಲೈಂಗಿಕ ಕಿರುಕುಳ ನೀಡಿದ್ದಾರೆ. ಕಾಲೇಜಿಗೆ ಹೋಗುವ ಮಗನನ್ನ ಕಿಡ್ನಾಪ್ ಮಾಡಿ ಗಂಡನನ್ನ ಕೊಲೆ ಮಾಡುವುದಾಗಿ ಚಿತ್ರಹಿಂಸೆ ನೀಡಿದ್ದಾರೆ.

ಮತ್ತಿಕೆರೆ ನಿವಾಸಿ ಮಹಿಳೆಯೊಬ್ಬರು ಕಳೆದ ಜನವರಿಯಲ್ಲಿ ಅದೇ ಏರಿಯಾದ ಪ್ರಕಾಶ್ ಮತ್ತು ವೇದಾಂತ್ ಬಳಿಯಿಂದ 1 ಲಕ್ಷ ರೂ. ಹಣವನ್ನು ಪಡೆದಿದ್ದರು. ಹಾಗೆಯೇ ಲಟ್ಟೆ ಗೊಲ್ಲಹಳ್ಳಿ ನಿವಾಸಿ ನಾರಾಯಣಪ್ಪ ಎಂಬವರಿಂದ 2 ಲಕ್ಷ ರೂ. ಹಣ ಪಡೆದಿದ್ದರು. ತಿಂಗಳ ಬಡ್ಡಿಕೂಡ ಕೊಡುತ್ತಿದ್ದರು. ಪ್ರಕಾಶ್ ಮತ್ತು ವೇದಾಂತ್ ಬಳಿ ಪಡೆದ ಹಣಕ್ಕೆ ತಿಂಗಳು ಕಳೆದಂತೆ 30 % ಬಡ್ಡಿ ಜಾಸ್ತಿ ಮಾಡುತ್ತಾ ಹೋಗಿದ್ದಾರೆ. ಪರಿಣಾಮ 1 ಲಕ್ಷ ಹಣಕ್ಕೆ ಎಂಟು ತಿಂಗಳ ಬಡ್ಡಿ ಎಲ್ಲಾ ಸೇರಿಸಿ 12 ಲಕ್ಷ ರೂ. ಆಗಿದೆ. ಅಷ್ಟೇ ಅಲ್ಲದೇ ನಾರಾಯಣಪ್ಪ ಬಳಿ ಪಡೆದ 1 ಲಕ್ಷ ಹಣಕ್ಕೆ 8 ತಿಂಗಳಿಗೆ ಲೆಕ್ಕ ಇಲ್ಲದೇ 28 ಲಕ್ಷ ಆಗಿದೆ ಕೊಡಿ ಅಂತ ಲಟ್ಟೆಗೊಲ್ಲಹಳ್ಳಿಯ ಮನೆವೊಂದರಲ್ಲಿ ಮಹಿಳೆಯನ್ನ ಕೂಡಿ ಹಾಕಿ ತಂದೆಯ ಮುಂದೆನೇ ಸೀರೆ ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ.

ಇತ್ತ ಪ್ರಕಾಶ್ ಮತ್ತು ವೇದಾಂತ್, ಮಗನನ್ನ ಕಿಡ್ನಾಪ್ ಮಾಡ್ತೀವಿ ಅಂತ ಮೊಬೈಲಿನಲ್ಲಿ ಮೆಸೇಜ್ ಹಾಕಿ ಮನಬಂದಂತೆ ಏಕ ವಚನದಲ್ಲಿ ಬೈದಿದ್ದಾರೆ. ಮಗ ದೀಪಕ್ ಯಾವ ಕಾಲೇಜಿಗೆ ಹೋಗುವುದು ಗೊತ್ತು. ಸುಮ್ಮನೆ ಅವನ ಭವಿಷ್ಯ ಹಾಳುಮಾಡಬೇಡಿ ಮರ್ಯಾದೆಯಿಂದ ಸೆಟ್ಲ್ ಮೆಂಟ್ ಮಾಡಿ. ನೀವು ಎಲ್ಲಿದ್ದರೂ ಬಿಡಲ್ಲ ನಮ್ಮದು 12 ಲಕ್ಷ ರೂ. ಕೊಡಬೇಕು ಎಂದಿದ್ದಾರೆ. ಅಲ್ಲದೇ ಪ್ರಕಾಶ್ ಮತ್ತು ವೇದಾಂತ್, ನನ್ನ ಪತಿಗೆ ಕಾಲ್ ಮಾಡಿ ಕೆಟ್ಟದಾಗಿ ಬೈದಿದ್ದಾರೆ ಎಂದು ನೊಂದ ಮಹಿಳೆ ದೂರಿದ್ದಾರೆ.

ನೊಂದ ಮಹಿಳೆ ಮತ್ತು ಪತಿ ಈಗಾಗಲೇ ವೇದಾಂತ್ ಹಾಗೂ ಪ್ರಕಾಶ್ ವಿರುದ್ಧ ಸೋಲದೇವನಹಳ್ಳಿ ಮತ್ತು ಕೊಡಿಗೇಹಳ್ಳಿ ದೂರು ದಾಖಲಿಸಿದ್ದಾರೆ. ಆದರೆ ಯಾವುದೇ ಕ್ರಮ ಜರುಗಿಸಿಲ್ಲ ಅಂತ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸಿಎಂ ಸೂಚನೆ:
ಸಿಲಿಕಾನ್ ಸಿಟಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ದಿನೇದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಂಧೆಕೋರರನ್ನ ಮಟ್ಟ ಹಾಕುವಂತೆ ಸಿಎಂ ಕುಮಾರಸ್ವಾಮಿ ಸಿಸಿಬಿ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಗೆ ಸೂಚನೆ ನೀಡಿದ್ದರು. ಸೂಚನೆಯಂತೆ ಅಲೋಕ್ ಕುಮಾರ್ ವರು ದಂಧೆಕೋರರ ಮನೆ ಮೇಲೆ ದಾಳಿ ಮಾಡಿ ಕೋಟಿ ಕೋಟಿ ಹಣವನ್ನ ವಶಪಡಿಸಿಕೊಂಡಿದ್ದರು. ಆದರೂ ದಂಧೆಕೋರರ ಹಾವಳಿ ಕಡಿಮೆ ಆಗದಿರುವುದು ವಿಪರ್ಯಾಸವೇ ಸರಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *