ಮುಂಬೈ: ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಸೈನಾ ನೆಹ್ವಾಲ್ ಜೀವನಾಧರಿತ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಶ್ರದ್ಧಾ ಚಿತ್ರೀಕರಣದಲ್ಲಿ ಬ್ಯುಸಿಯಿದ್ದಾಗ ಅನಾರೋಗ್ಯ ಕಾಣಿಸಿಕೊಂಡಿದೆ. ನಂತರ ಆಸ್ಪತ್ರೆಗೆ ಹೋದಾಗ ಶ್ರದ್ಧಾ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಹಾಗಾಗಿ ಶ್ರದ್ಧಾ ಸೆಪ್ಟೆಂಬರ್ 27ರಿಂದ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ ಎಂದು ವರದಿಯಾಗಿದೆ.
ಸದ್ಯ ಶ್ರದ್ಧಾ ವಿಶ್ರಾಂತಿ ಪಡೆದು ಎರಡು ದಿನದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಶ್ರದ್ಧಾ ಇಲ್ಲದಿರುವ ದೃಶ್ಯವನ್ನು ಈಗ ಚಿತ್ರೀಕರಿಸಲಾಗುತ್ತಿದೆ. ಸೈನಾ ನೆಹ್ವಾಲ್ ಅವರ ಬಾಲ್ಯದ ದಿನಗಳನ್ನು ಚಿತ್ರತಂಡ ಚಿತ್ರೀಕರಿಸುತ್ತಿದೆ.
ಕೆಲಸದ ಒತ್ತಡದಿಂದ ಶದ್ಧಾ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಸದ್ಯ ಅವರ ಆರೋಗ್ಯದಲ್ಲಿ ಈಗ ಚೇತರಿಕೆ ಕಂಡು ಬಂದಿದ್ದು, ಅವರ ಚಿತ್ರೀಕರಣಕ್ಕೆ ವಾಪಸ್ ಆಗುತ್ತಿದ್ದಂತೆ ಚಿತ್ರತಂಡ ನಿಮಗೆ ಮಾಹಿತಿ ನೀಡುತ್ತಾರೆ ಎಂದು ನಿರ್ಮಾಪಕ ಭುಷಣ್ ಕುಮಾರ್ ಮಾಧ್ಯಮಕ್ಕೆ ಹೇಳಿದ್ದಾರೆ.
ಸದ್ಯ ಶ್ರದ್ಧಾ, ಶಾಹಿದ್ ಕಪೂರ್ ಜೊತೆ ‘ಬತ್ತಿ ಗುಲ್ ಮೀಟರ್ ಚಾಲು’ ಹಾಗೂ ರಾಜ್ಕುಮಾರ್ ರಾವ್ ಜೊತೆ ‘ಸ್ತ್ರೀ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಸೈನಾ ನೆಹ್ವಾಲ್ ಅವರ ಜೀವನಾಧರಿತ ಚಿತ್ರದ ಜೊತೆ ಶ್ರದ್ಧಾ, ಪ್ರಭಾಸ್ ಜೊತೆ ‘ಸಾಹೋ’ ಚಿತ್ರದಲ್ಲೂ ನಟಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
View this post on Instagram
Uncle proudly showed me her medals and wins. Here I’m holding her Olympic medal.
View this post on Instagram
Wow. Look at that. The Olympic bronze! What an achievement @nehwalsaina In awe of you & your journey