ಬೌದ್ಧ ಧರ್ಮಗುರು ದಲೈಲಾಮ ಹತ್ಯೆಗೆ ಸಂಚು – ರಾಮನಗರದಲ್ಲಿ ಸೆರೆ ಸಿಕ್ಕ ಉಗ್ರರಿಂದ ಸ್ಫೋಟಕ ಮಾಹಿತಿ

Public TV
1 Min Read

ಬೆಂಗಳೂರು: ಬೌದ್ಧ ಧರ್ಮಗುರು ದಲೈಲಾಮ ಹತ್ಯೆಗೆ ಸಂಚು ರೂಪಿಸಿಲಾಗಿತ್ತು ಅನ್ನೋ ಭಯಾನಕ ಮಾಹಿತಿ ಎನ್‍ಐಎ ತನಿಖೆಯಿಂದ ಬಯಲಾಗಿದೆ.

ಉಗ್ರರ ಸಂಚಿನ ಕುರಿತಂತೆ ಎನ್‍ಐಎ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ದಲೈಲಾಮ ಅವರನ್ನು ಮುಗಿಸಲು ರಾಜ್ಯದ ರಾಮನಗರದಲ್ಲೇ ಸಂಚು ರೂಪಿಸಿರುವುದಾಗಿ ಎನ್‍ಐಎ ನಡೆಸಿದ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಪರಿಣಾಮ ಬೌದ್ಧ ಧರ್ಮಗುರು ದಲೈಲಾಮ ಪ್ರಾಣ ಉಳಿದಿದೆ.

ಚಾರ್ಜ್ ಶೀಟ್ ನಲ್ಲಿ ಏನಿದೆ?
2018ರ ಜನವರಿ 18ರಂದು ಬಿಹಾರದ ಬೋಧ್ ಗಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲೈಲಾಮ ಮತ್ತು ಬಿಹಾರ ರಾಜ್ಯಪಾಲರನ್ನು ಜೊತೆಯಲ್ಲೇ ಬಾಂಬ್ ಬಿಟ್ಟು ಉಡಾಯಿಸಲು ಸ್ಕೆಚ್ ರೂಪಿಸಿದ್ದರು. ಇದರ ಮಾಹಿತಿ ಅರಿತ ಎನ್‍ಐಎ ರಂಗಕ್ಕಿಳಿದು ಮೂವರನ್ನು ಅರೆಸ್ಟ್ ಮಾಡಿತ್ತು. ಇದು ವಿಫಲವಾದ ಬೆನ್ನಲ್ಲೇ ಲಾಮ ಹತ್ಯೆಗೆ ಮತ್ತೊಂದು ಸ್ಕೆಚ್ ಅನ್ನು ಕರ್ನಾಟಕದಲ್ಲಿ ರೂಪಿಸಲಾಗ್ತಿತ್ತು. ಅದರಲ್ಲೂ ರಾಮನಗರದ ಮನೆಯೊಂದರಲ್ಲಿ ಲಾಮ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಬೋಧ್‍ಗಯಾದಲ್ಲಿ ಬಂಧಿಸಲ್ಪಟ್ಟಿದ್ದ ಮೂವರು ಉಗ್ರರ ವಿಚಾರಣೆ ವೇಳೆ ರಾಮನಗರದಲ್ಲಿ ರೂಪಿಸಲಾಗ್ತಿದ್ದ ಸಂಚಿನ ಬಗ್ಗೆ ಬಾಯ್ಬಿಟ್ಟಿದ್ದರು.

ಆಗಸ್ಟ್ 7ರಂದು ರಾಜ್ಯಕ್ಕೆ ಧಾವಿಸಿದ ಎನ್‍ಐಎ ತಂಡ, ರಾಮನಗರಕ್ಕೆ ತೆರಳಿ ಜೆಎಂಬಿ ಉಗ್ರ ಮುನೀರ್‍ನನ್ನು ಯಶಸ್ವಿಯಾಗಿ ಬೇಟೆಯಾಡಿತ್ತು. ಮುನೀರ್ ನನ್ನು ವಶಕ್ಕೆ ಪಡೆದಿದ್ದರಿಂದ ಸಂಭವಿಸಬಹುದಾಗಿದ್ದ ಘನಘೋರ ದುರಂತವನ್ನ ಎನ್‍ಐಎ ತಪ್ಪಿಸಿತ್ತು. ಬಾಂಬ್ ಸ್ಫೋಟಿಸಿ ದಲೈಲಾಮ ಹತ್ಯೆಗೆ ಮುನೀರ್ ಸಂಚು ನಡೆಸಿದ್ದ ವಿಚಾರ ಎನ್‍ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

1959ರಲ್ಲಿ ಚೀನಾದಿಂದ ಎದುರಾಗಿದ್ದ ಪ್ರಾಣಕಂಟಕದಿಂದ ಪಾರಾಗಲು ಟಿಬೆಟ್‍ನಿಂದ ದಲೈಲಾಮ ರಾತ್ರೋರಾತ್ರಿ ಆಶ್ರಯ ಅರಸಿ ಭಾರತಕ್ಕೆ ಬಂದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *