ದುನಿಯಾ ವಿಜಿ 2ನೇ ಪತ್ನಿಗೆ ಜೀವ ಬೆದರಿಕೆ!

Public TV
1 Min Read

-ಪಬ್ಲಿಕ್ ಟಿವಿಗೆ ಕೀರ್ತಿಗೌಡ ಹೇಳಿದ್ದೇನು..?

ಬೆಂಗಳೂರು: ಕನ್ನಡದ ನಟ ದುನಿಯಾ ವಿಜಯ್ ಜೈಲು ಸೇರಿದಂತೆ 2ನೇ ಪತ್ನಿ ಕೀರ್ತಿಗೌಡ ಮನೆ ಖಾಲಿ ಮಾಡಿದ್ದರು. ಮೊದಲ ಪತ್ನಿ ನಾಗರತ್ನ ಮತ್ತು ಕೀರ್ತಿಗೌಡ ಇಬ್ಬರ ನಡುವಿನ ಜಡೆಜಗಳ ಬಳಿಕ ಒಬ್ಬರ ಮೇಲೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸ್ ವಿಚಾರಣೆ ಬಳಿಕ ಕೀರ್ತಿಗೌಡ ತವರು ಮನೆ ಸೇರಿಕೊಂಡಿದ್ದರು. ದಿಢೀರ್ ಅಂತಾ ತಾಯಿ ಮನೆ ಸೇರಿದ್ದು ಯಾಕೆ ಅಂತಾ ಕೀರ್ತಿಗೌಡ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

ಕೀರ್ತಿಗೌಡ ಹೇಳಿದ್ದೇನು..?
ನಾನು ಎಲ್ಲಿಯೂ ಹೋಗಿಲ್ಲ. ನಾನು ಜೈಲಿನಿಂದ ಹಿಂದಿರುಗಿ ಬರೋವರೆಗೂ ತಾಯಿ ಮನೆಯಲ್ಲಿ ಇರಲು ಹೇಳಿದ್ದಾರೆ. ನನಗೆ ಕತ್ರಿಗುಪ್ಪೆಯ ಮನೆಯಲ್ಲಿರಲು ಸೇಫ್ಟಿ ಇಲ್ಲ. ಪತಿ ದುನಿಯಾ ವಿಜಯ್ ಬಂದ ಮೇಲೆ ನನ್ನ ಮೇಲಿರುವ ಆರೋಪಗಳಿಗೆ ಸ್ಪಷ್ಟನೆಯನ್ನು ಇಬ್ಬರು ನೀಡುತ್ತೇವೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದ್ರೆ ಎಲ್ಲ ಮಾಹಿತಿಗಳು ಲಭ್ಯವಾಗುತ್ತವೆ ಎಂದು ಕೀರ್ತಿಗೌಡ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.


ಕೀರ್ತಿ ಅವರ ಮಾತು ಕೇಳಿದ ಮೇಲೆ ಜೀವ ಬೆದರಿಕೆ ಏನಾದರೂ ಇದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಜೈಲಿನಲ್ಲಿರುವ ವಿಜಯ್ ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಜಾಮೀನಿಗಾಗಿ ವಿಜಿ ಸೆಷನ್ಸ್ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸೆಷನ್ಸ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಅಕ್ಟೋಬರ್ 1ಕ್ಕೆ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.

ಕೀರ್ತಿ ಗೌಡ ಅವರು ಕಳೆದು ನಾಲ್ಕು ದಿನಗಳಿಂದ ಮನೆಯಲ್ಲಿ ಇಲ್ಲ. ನಾವು ಕಾಲೇಜಿನಿಂದ ಬಂದ ಮೇಲೆ ಕೀರ್ತಿ ಅವರು ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ಚಿನ್ನಾಭರಣ ಏನೂ ಇಲ್ಲ ಎಂದು ದುನಿಯಾ ವಿಜಯ್ ಮಗಳು ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=YjxBslBdbNU&t=0s&index=2&list=PL96D6827AB409C8A9

Share This Article
Leave a Comment

Leave a Reply

Your email address will not be published. Required fields are marked *