ಆಸ್ಪತ್ರೆಯಲ್ಲಿರುವ ದರ್ಶನ್ Exclusive Photo

Public TV
1 Min Read

ಮೈಸೂರು: ದರ್ಶನ್ ಕಾರ್ ಅಪಘಾತ ಸಂಭವಿಸಿ ಬಲಗೈ ಮೂಳೆ ಮುರಿದಿತ್ತು. ಈಗ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮುಗಿದು ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಮಾಧ್ಯಮಗಳಿಗೆ ಲಭ್ಯವಾಗಿದೆ.

ಮೈಸೂರು ಹೊರವಲಯದಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ದರ್ಶನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಅವರ ಬಲಗೈಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಸಂಜೆ ವಾರ್ಡ್ ಗೆ ಶಿಫ್ಟ್ ಮಾಡಿದ್ದರು. ಆದರೆ ಇದುವರೆಗೂ ಅವರು ಹೇಗಿದ್ದಾರೆ ಎಂಬ ಫೋಟೋ ಲಭ್ಯವಾಗಿರಲಿಲ್ಲ. ಅಭಿಮಾನಿಗಳು ಕೂಡ ಆಸ್ಪತ್ರೆಯ ಮುಂದೇ ಅವರಿಗಾಗಿ ಕಾಯುತ್ತಿದ್ದರು.

ಇತ್ತ ದರ್ಶನ್ ತಮಗೆ ಏನು ಆಗಿಲ್ಲ ಎಂದು ಆಡಿಯೋ ಮೂಲಕ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದರು. ಆದರೆ ಈಗ ದರ್ಶನ್ ಅವರು ಆಸ್ಪತ್ರೆಯಲ್ಲಿರುವ ಫೋಟೋ ಲಭ್ಯವಾಗಿದ್ದು, ದರ್ಶನ್ ವಾರ್ಡ್ ನಲ್ಲಿ ಬೆಡ್ ಮೇಲೆ ಮಲಗಿದ್ದು, ಅವರ ಬಲಗೈಗೆ ಶಸ್ತ್ರಚಿಕಿತ್ಸೆ ಮಾಡಿ ಬ್ಯಾಂಡೇಜ್ ಹಾಕಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

ಇಂದು ದರ್ಶನ್ ಈ ಪ್ರಕರಣದಲ್ಲಿ ಆಂತೋನಿ ರಾಯ್ ಮಾತ್ರ ಏಕೈಕ ಆರೋಪಿಯಾಗಿದ್ದು, ಸ್ನೇಹಿತನ ವಿರುದ್ಧವೇ ಖಾಸಗಿ ಗನ್‍ಮ್ಯಾನ್ ಮತ್ತು ಡ್ರೈವರ್ ಆಗಿರುವ ಲಕ್ಷ್ಮಣ್ ಮೂಲಕ ದೂರು ಕೊಡಿಸಿದ್ದಾರೆ. ಲಕ್ಷ್ಮಣ್ ನೀಡಿದ ದೂರಿನ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಘಟನೆಯೇನು?
ಶನಿವಾರ ನಟರಾದ ದರ್ಶನ್, ಸೃಜನ್ ಲೋಕೇಶ್ ಹಾಗೂ ದೇವರಾಜ್ ಕುಟುಂಬ ಮೈಸೂರು ಮೃಗಾಲಯಕ್ಕೆ ತೆರಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದರು. ಆ ಬಳಿಕ ಮೈಸೂರಿನಲ್ಲೇ ಉಳಿದುಕೊಂಡು ಸೋಮವಾರ ಮುಂಜಾನೆ ಅಲ್ಲಿಂದ ಹೊರಟಿದ್ದರು. ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮೈಸೂರು ಹೊರವಲಯದ ಹಿನಕಲ್ ಬಳಿ ಕಾರ್ ಡಿವೈಡರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದರ್ಶನ್ ಅವರ ಬಲಗೈನ ಮೂಳೆ ಮುರಿದಿದೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಬಲಗೈಗೆ ರಾಡ್ ಅಳವಡಿಸಲಾಗಿದ್ದು, 24 ಹೊಲಿಗೆ ಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=qNaNRGxOKlQ

Share This Article
Leave a Comment

Leave a Reply

Your email address will not be published. Required fields are marked *