ನಲಪಾಡ್ ಉಳಿದುಕೊಂಡಿದ್ದ ಜೈಲಾಸ್ಪತ್ರೆ ವಾರ್ಡ್ ನಲ್ಲೇ ಕರಿಚಿರತೆ ಆ್ಯಂಡ್ ಟೀಂ

Public TV
2 Min Read

ಬೆಂಗಳೂರು: ಹಲ್ಲೆ ನಡೆಸಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದುನಿಯಾ ವಿಜಯ್‍ಗೆ ಜೈಲು ಆಸ್ಪತ್ರೆಯಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಉಳಿದುಕೊಂಡಿದ್ದ ಆಸ್ಪತ್ರೆ ವಾರ್ಡ್‍ನಲ್ಲೇ ದುನಿಯಾ ವಿಜಯ್ ಮತ್ತು ಪಟಾಲಂ ತಂಗಿದೆ. ಖಾಲಿ ಇದ್ದ ಈ ವಾರ್ಡ್ ಗೆ ಭಾನುವಾರ ರಾತ್ರಿ ಸುಣ್ಣ-ಬಣ್ಣ ಬಳಿಯಲಾಗಿದೆ. ಅಲ್ಲದೆ ಹೊರಗಡೆಯಿಂದ ಯಾರಿಗೂ ಕಾಣದಂತೆ ಸ್ಕ್ರೀನ್ ಹಾಕಲಾಗಿದೆ. ಇವೆಲ್ಲವನ್ನು ಗಮನಿಸಿದ್ರೆ ಸಿನೆಮಾ ನಟ ಅನ್ನೋ ಕಾರಣಕ್ಕೆ ಇಷ್ಟೆಲ್ಲ ವ್ಯವಸ್ಥೆ ಮಾಡಲಾಗಿದ್ಯಾ ಅಥವಾ ಸೈಕಲ್ ರವಿಗೆ ಹೆದರಿ ದುನಿಯಾ ವಿಜಯ್ ಗೆ ಬೇರೆ ವ್ಯವಸ್ಥೆ ಮಾಡಲಾಗಿದ್ಯಾ ಅನ್ನೋ ಪ್ರಶ್ನೆಯೊಂದು ಎದ್ದಿದೆ.

ಲ್ಯಾಂಡ್ ಲಿಟಿಗೇಶನ್ ವಿಚಾರವಾಗಿ ದುನಿಯಾ ವಿಜಯ್ ಮತ್ತು ಸೈಕಲ್ ರವಿ ಮಧ್ಯೆ ಭಿನ್ನಾಭಿಪ್ರಾಯವಾಗಿತ್ತು. ಇದೇ ಕಾರಣಕ್ಕೆ ಜೈಲಾಧಿಕಾರಿಗಳು ರಿಸ್ಕ್ ಬೇಡ ಅಂತ ಪ್ರತ್ಯೇಕ ಕಲ್ಪಿಸಿದ್ರಾ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಏನಿದು ಪ್ರಕರಣ?
ಶನಿವಾರ ಅಂಬೇಡ್ಕರ್ ಭವನದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆದಿತ್ತು. ಈ ವೇಳೆ ದುನಿಯಾ ವಿಜಯ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಫೋಸ್ ಕೊಡುತ್ತಿದ್ದರು. ಆಗ ಮಗ ಸಾಮ್ರಾಟ್ ತಂದೆಯೊಂದಿಗೆ ವೇದಿಕೆ ಹತ್ತಿದ್ದಾರೆ. ಇದನ್ನು ನೋಡಿದ ಮಾರುತಿಗೌಡ `ಏಯ್, ಚಿಲ್ಟು ಕೆಳಗೆ ಇಳಿಯೋ’ ಎಂದು ಎಚ್ಚರಿಸಿದ್ದರಂತೆ. ಮಾರುತಿಗೌಡ ಮಾತು ಕೇಳಿಸಿಕೊಂಡ ವಿಜಯ್ ಕೋಪ ನೆತ್ತಿಗೇರಿತ್ತಂತೆ. ತಕ್ಷಣವೇ `ಯಾಕಪ್ಪ ಹಾಗಂತಿಯಾ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಾರುತಿಗೌಡ, `ಮತ್ತೆ ಏನಣ್ಣ, ನೀನು ಚಿಲ್ಟು-ಪಿಲ್ಟುಗಳನ್ನೆಲ್ಲಾ ಸ್ಟೇಜ್‍ಗೆ ಹತ್ತಿಸ್ತೀಯ’ ಎಂದಿದ್ದಾರೆ. ಆತನ ಉತ್ತರದಿಂದ ಗರಂ ಆದ ವಿಜಯ್, ಸಾಮ್ರಾಟ್‍ನನ್ನು ಚಿಲ್ಟು ಅಂತ ಕರೆದಿದ್ದಕ್ಕೆ ವಾಗ್ದಾಳಿ ನಡೆಸಿದ್ದರಂತೆ. ಸ್ಪರ್ಧೆ ನಡೆಯುವ ಜಾಗದಲ್ಲಿಯೇ ಬುದ್ಧಿ ಹೇಳುವುದಕ್ಕೆ ಹೋದರೆ ಗಲಾಟೆ ಆಗುತ್ತದೆ ಅಂತ ಮಾರುತಿ ಗೌಡನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದೇವೆ. ನಾವು ಅಪಹರಣ ಮಾಡಿಲ್ಲ ಅಂತ ವಿಚಾರಣೆ ವೇಳೆ ವಿಜಯ್ ಸ್ಪಷ್ಟನೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.

ಇತ್ತ ಮಾರುತಿ ಗೌಡ ಸಹಚರರಿಂದ ದೂರು ಪಡೆದ ಹೈಗ್ರೌಂಡ್ ಪೊಲೀಸರು ಮೊದಲಿಗೆ ದುನಿಯಾ ವಿಜಯ್‍ಗೆ ಕರೆ ಮಾಡಿ ಎಚ್ಚರಿಸಿದ್ದರು. 30 ನಿಮಿಷದ ನಂತರ ಕಿಡ್ನಾಪ್ ಮಾಡಿದ್ದ ಮಾರುತಿಗೌಡನೊಂದಿಗೆ ದುನಿಯಾ ವಿಜಯ್ ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ತನ್ನ ರೇಂಜ್ ರೋವರ್ ಕಾರಿನಲ್ಲಿ ಪ್ರತ್ಯಕ್ಷರಾದರು. ಹಲ್ಲೆ ಮಾಡಿದ್ದ ಜಿಮ್ ಟ್ರೇನರ್ ಮಾರುತಿಗೌಡನ್ನ ಕರೆದುಕೊಂಡು ಬಂದಿದ್ದರು. ಆದರೆ ದುನಿಯಾ ವಿಜಯ್ ಪೊಲೀಸ್ ಠಾಣೆಯೂ ಬಳಿಯೂ ದರ್ಪ ತೋರಿದ್ದು, ಅವಾಚ್ಯ ಶಬ್ಧಗಳಿಂದ ಮತ್ತೆ ಪಾನಿಪುರಿ ಕಿಟ್ಟಿ ಹಾಗೂ ಹುಡುಗರನ್ನ ಬೈದಿದ್ದಾರೆ ಎನ್ನಲಾಗಿತ್ತು. ಈ ಎಲ್ಲ ಕಾರಣಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

https://www.youtube.com/watch?v=ALFMC4BI448

https://www.youtube.com/watch?v=EgaCOcqC7ZU

Share This Article
Leave a Comment

Leave a Reply

Your email address will not be published. Required fields are marked *