ರಾಜನ ಬರುವಿಕೆಗಾಗಿ ಕಾದಿರುವೆ: ಹರ್ಷಿಕಾ ಪೂಣಚ್ಚ

Public TV
1 Min Read

ಬೆಂಗಳೂರು: ಚಂದನವನದ ಸುಂದರ ಚಿಟ್ಟೆ ಹರ್ಷಿಕಾ ಪೂಣಚ್ಚ ರಾಜನ ಆಗಮನಕ್ಕಾಗಿ ಕಾಯುತ್ತಿದ್ದೇನೆ ಎಂದು ಪರೋಕ್ಷವಾಗಿ ಟ್ವಿಟ್ಟರ್ ಮತ್ತು ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ವಿಭಿನ್ನ ಸಿನಿಮಾಗಳಲ್ಲಿ ನಟಿಸುವ ಮೂಲಕ ಹರ್ಷಿಕಾ ತನ್ನದೇ ಛಾಪು ಮೂಡಿಸಿದ್ದಾರೆ. ಇಂದು ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂನಲ್ಲಿ ತನ್ನ ಸುಂದರ ಫೋಟೋ ಅಪ್ಲೋಡ್ ಮಾಡಿಕೊಂಡು ಬರೆದುಕೊಂಡ ಕೆಲವು ಸಾಲುಗಳು ಈ ಕೆಳಗಿನಂತಿವೆ.

‘ಹೌದು, ನಾನು ರಾಣಿ.. ರಾಜನಿಗಾಗಿ ರಾಣಿ ಎಂದೂ ಕಾಯುವುದಿಲ್ಲ. ರಾಣಿಯಾಗಿರುವ ನಾನು ನನ್ನ ರಾಜ್ಯದಲ್ಲಿ ಬ್ಯುಸಿಯಾಗಿದ್ದೇನೆ. ರಾಜ ಬರುವವರೆಗೂ ನಾನು ರಾಜ್ಯದಲ್ಲಿ ಬ್ಯುಸಿ ಆಗಿರುತ್ತೇನೆ’ ಎಂದು ಪರೋಕ್ಷವಾಗಿ ಬರೆದುಕೊಳ್ಳುವ ಮೂಲಕ ರಾಜನಿಗಾಗಿ ಕಾಯುತ್ತಿದ್ದೇನೆ ಅಂತಾ ಹೇಳಿದ್ದಾರೆ.

ಹರ್ಷಿಕಾ ಬರಹದೊಂದಿಗೆ ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಹರ್ಷಿಕಾರ ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದು, ನಿಜವಾಗಲೂ ರಾಣಿ ರೀತಿಯಲ್ಲಿ ಕಾಣುತ್ತಿದ್ದೀರಿ ಅಂತ ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಚಿಟ್ಟೆ ಸಿನಿಮಾದ ಯಶಸ್ವಿನ ಬಳಿಕ ಹರ್ಷಿಕಾ ಆ್ಯಮಸ್ಟರ್ ಡ್ಯಾಮ್‍ಗೆ ತೆರಳಿದ್ದರು. ಅಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಆಯೋಜಿಸಿ ಚಿತ್ರದ ಯಶಸ್ಸನ್ನು ಸಂಭ್ರಮಿಸಿದ್ದರು. ಅಂದೂ ಸಹ ಹರ್ಷಿಕಾ ವಿದೇಶ ಪ್ರವಾಸದ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

https://twitter.com/actressharshika/status/1043396354658119681

Share This Article
Leave a Comment

Leave a Reply

Your email address will not be published. Required fields are marked *